ನವದೆಹಲಿ[ಮಾ.25]: ಕಾಂಗ್ರೆಸ್‌ ಪಕ್ಷ ಭಾನುವಾರ ಸಂಜೆ ಮತ್ತೆ 10 ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಿದ್ದು, ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಟಿಕೆಟ್‌ ನೀಡಿದೆ.

ಚಿದಂಬರಂ ಅವರು ಶಿವಗಂಗಾ ಕ್ಷೇತ್ರವನ್ನು ಈ ಮುನ್ನ ಪ್ರತಿನಿಧಿಸುತ್ತಿದ್ದರು. ಆದರೆ 2014ರಲ್ಲಿ ಕ್ಷೇತ್ರ ಅಣ್ಣಾ ಡಿಎಂಕೆ ಪಾಲಾಗಿತ್ತು. ಈಗ ಈ ಕ್ಷೇತ್ರವನ್ನು ಮೈತ್ರಿಯ ಅನುಸಾರ ಬಿಜೆಪಿಗೆ ಬಿಟ್ಟುಕೊಡಲಾಗಿದ್ದು, ಹಿರಿಯ ಮುಖಂಡ ಎಚ್‌. ರಾಜಾ ಕಣಕ್ಕಿಳಿದಿದ್ದಾರೆ. ಇವರ ವಿರುದ್ಧ ಕಾರ್ತಿ ಚಿದಂಬರಂ ಸೆಣಸಲಿದ್ದಾರೆ. ಡಿಎಂಕೆ ಅಭ್ಯರ್ಥಿ ಘೋಷಣೆ ಇನ್ನೂ ಆಗಿಲ್ಲ.

ಕಾರ್ತಿ ಅವರು ಐಎನ್‌ಎಕ್ಸ್‌ ಮೀಡಿಯಾ ಹಗರಣ, ಏರ್‌ಸೆಲ್‌-ಮ್ಯಾಕ್ಸಿಸ್‌ ಹಗರಣದ ಆರೋಪಿಯಾಗಿದ್ದು, ಅವರಿಗೆ ಟಿಕೆಟ್‌ ಕೊಟ್ಟಿರುವುದು ಅನೇಕರ ಅಚ್ಚರಿಗೂ ಕಾರಣವಾಗಿದೆ.

ಇನ್ನುಳಿದಂತೆ 10 ಜನರ ಪಟ್ಟಿಯಲ್ಲಿ ತಾರೀಖ್‌ ಅನ್ವರ್‌ ಹೆಸರು ಪ್ರಮುಖವಾಗಿದ್ದು, ಅವರು ಬಿಹಾರದ ಕಟಿಹಾರ್‌ನಿಂದ ಸ್ಪರ್ಧಿಸಲಿದ್ದಾರೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ