2.27 ಕೋಟಿ ಒಡೆಯ ಮೊಯ್ಲಿ ಬಳಿ ಸ್ಥಿರಾಸ್ತಿ ಇಲ್ಲ!

ಒಕ್ಕಲಿಗರು ಬಿಜೆಪಿಗೆ ಮತ ಹಾಕಿದರೆ ಎಚ್‌ಡಿಕೆ ಕುರ್ಚಿಗೆ ಕುತ್ತು| ಬಚ್ಚೇ‘ಗೌಡ’ರನ್ನು ಬೆಂಬಲಿಸದಂತೆ ಮತದಾರರಿಗೆ ಸಂದೇಶ| 2.27 ಕೋಟಿ ಒಡೆಯ ಮೊಯ್ಲಿ ಬಳಿ ಸ್ಥಿರಾಸ್ತಿ ಇಲ್ಲ

Congress candidate Veerappa Moily File his nomination from chikkaballapur constituency

ಚಿಕ್ಕಬಳ್ಳಾಪುರ[ಮಾ.26]: ಮೈತ್ರಿ ಧರ್ಮ ಪಾಲನೆ ವಿಚಾರವಾಗಿ ಜಿಲ್ಲೆಯ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಅಪಸ್ವರ ಎತ್ತಿರುವ ನಡುವೆಯೇ ಕ್ಷೇತ್ರದ ‘ದೋಸ್ತಿ ಅಭ್ಯರ್ಥಿ’, ಕಾಂಗ್ರೆಸ್‌ನ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಅವರು ಖಡಕ್‌ ಸಂದೇಶವೊಂದನ್ನು ರವಾನಿಸಿದ್ದಾರೆ. ಒಕ್ಕಲಿಗ ಅನ್ನುವ ಕಾರಣಕ್ಕೆ ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರು ಪ್ರತಿಸ್ಪರ್ಧಿ ಬಿಜೆಪಿಯ ಬಚ್ಚೇಗೌಡರನ್ನು ಬೆಂಬಲಿಸಿದರೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕುರ್ಚಿ ಉಳಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಗೂ ಮುನ್ನ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊಯ್ಲಿ, ಬಿಜೆಪಿ ಗೆಲುವು ಸಾಧಿಸಿದರೆ ಅವರು ರಾಜ್ಯದಲ್ಲಿರುವ ಮೈತ್ರಿ ಸರ್ಕಾರವನ್ನು ಕೆಡಹುವುದು ಖಚಿತ. ಹೀಗಾಗಿ ಮತದಾರರು ಎಚ್ಚರಿಕೆಯಿಂದ ಮತ ಹಾಕಬೇಕು ಎಂದು ತಿಳಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪರ್ಧೆಯಿಂದ ಒಕ್ಕಲಿಗ ಸಮುದಾಯದ ಮತಗಳ ವಿಭಜನೆಯಾಗಿ ಮೊಯ್ಲಿ ಗೆಲುವು ಸುಲಭವಾಗಿತ್ತು. ಆದರೆ, ಈ ಬಾರಿ ಸ್ಪರ್ಧೆ ಇರುವುದು ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ವಿರುದ್ಧ. ಹೀಗಾಗಿ ಎಲ್ಲಿ ಒಕ್ಕಲಿಗ ಮತಗಳು ಕ್ರೋಡೀಕರಣಗೊಳ್ಳುತ್ತವೋ ಎನ್ನುವ ಆತಂಕದಿಂದಲೇ ಮೊಯ್ಲಿ ಅವರು ಒಕ್ಕಲಿಗ ಮತದಾರರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ ಎನ್ನಲಾಗುತ್ತಿದೆ.

ಈ ನಡುವೆ, ಮೊಯ್ಲಿ ಅವರು ನಾಮಪತ್ರ ಸಲ್ಲಿಸಿದರು. ಸಚಿವರಾದ ಶಿವಶಂಕರ ರೆಡ್ಡಿ, ಎಂ.ಟಿ.ಬಿ. ನಾಗರಾಜ್‌, ಶಾಸಕ ಡಾ| ಕೆ. ಸುಧಾಕರ್‌ ಮತ್ತಿತರರು ಈ ವೇಳೆ ಇದ್ದರು.

2.27 ಕೋಟಿ ಒಡೆಯ ಮೊಯ್ಲಿ ಬಳಿ ಸ್ಥಿರಾಸ್ತಿ ಇಲ್ಲ

ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಚಿನ್ನಾಭರಣಗಳನ್ನಾಗಲೀ, ಸ್ಥಿರಾಸ್ತಿಗಳನ್ನಾಗಲೀ ಹೊಂದಿಲ್ಲ. ಬದಲಿಗೆ ಸಾಲಗಾರರಾಗಿರುವುದು ವಿಶೇಷ. 2014ರಲ್ಲಿಯೂ ಕೂಡ ಸ್ಥಿರಾಸ್ತಿಯನ್ನು ಹೊಂದಿರಲಿಲ್ಲ. ಸೋಮವಾರ ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ವೀರಪ್ಪ ಮೊಯ್ಲಿ ಅವರ ಬಳಿ .1.40 ಲಕ್ಷ ನಗದು, ಅವರ ಪತ್ನಿ ಮಾಲತಿ ಮೊಯ್ಲಿ .1.03 ಲಕ್ಷ ನಗದು ಹೊಂದಿದ್ದಾರೆ. ಮೊಯ್ಲಿ ಒಟ್ಟು ಚರಾಸ್ತಿ .2,27,54,966 ಕೋಟಿ. ಅವರ ಪತ್ನಿ ಮಾಲತಿ ಮೊಯ್ಲಿ .5,55,32918 ಕೋಟಿ ಚರಾಸ್ತಿ ಮತ್ತು .14.33 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಮಾಲತಿ ಮೊಯ್ಲಿ ಅವರ ಹೆಸರಲ್ಲಿ 10.55 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ವೀರಪ್ಪಮೊಯ್ಲಿ 1.51 ಕೋಟಿ ಸಾಲ ಹೊಂದಿದ್ದು, ಅವರ ಪತ್ನಿ ಮಾಲತಿ ಮೊಯ್ಲಿ .8.91 ಕೋಟಿ ಸಾಲ ಹೊಂದಿದ್ದಾರೆ. 2014ರಲ್ಲಿ ಮೊಯ್ಲಿ ಚರಾಸ್ತಿ .48,19,884 ಲಕ್ಷ ಇತ್ತು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

Latest Videos
Follow Us:
Download App:
  • android
  • ios