ಬೆಂಗಳೂರು[ಮಾ. 18] ಮೆಣಸಿನಕಾಯಿ ಬೆಲೆ ಬಿದ್ದಾಗ ಬೆಂಬಲ ಬೆಲೆ ಕೊಡುವಾಗ ನಾವು ಬೇಕು. ಕಾಫಿ ಬೆಳೆ ಬಿದ್ದೋದ್ರೆ ಕುಮಾರಸ್ವಾಮಿ ಪರಿಹಾರ ಕೊಡಬೇಕು. ಓಟ್ ಮಾತ್ರ ನೀವು ಬಿಜೆಪಿಗೆ ಹಾಕ್ತೀರಾ ನಿಮಗೇನಾದ್ರು ಭಗವಂತ ಒಳ್ಳೆಯದು ಮಾಡ್ತಾನಾ..? ಹೀಗೆಂದು ಸಿಎಂ ಕುಮಾರಸ್ವಾಮಿ ಕರಾವಳಿ ಭಾಗದವರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಈ ಬಗ್ಗೆ ನಿಮ್ಮ ಜಿಲ್ಲೆಯ ಜನರ ಜೊತೆ ನೇರವಾಗಿ ಚರ್ಚೆ ಮಾಡಿ ಎಂದು ಕರಾವಳಿ ಭಾಗದ ಮುಖಂಡರಿಗೆ ಹೇಳಿದ್ದಾರೆ. ಕಾಂಗ್ರೆಸ್ ಕೊಟ್ಟ ಎಂಟು ಸ್ಥಾನಗಳನ್ನು ಗೆಲ್ಲಿಸಿಕೊಡಿ. ನಿಮ್ಮ ಜಿಲ್ಲೆಯ ಒಬ್ಬರನ್ನು ದೇವೇಗೌಡರ ಜೊತೆ ಪಾರ್ಲಿಮೆಂಟ್ ಗೆ ಕಳುಹಿಸಿಕೊಡಿ ಇವತ್ತು ಪ್ರಧಾನಮಂತ್ರಿ ಯಾವನಾದ್ರು ಆಗಲಿ ಆದರೆ ‌ನೀವು ದೇವೇಗೌಡರಿಗೆ ಒಂದು ಬಲ ಕೊಡಿ ಎಂದು ಮನವಿ ಮಾಡಿದ್ದಾರೆ.

ರಾಹುಲ್ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದಿಳಿದ ‘ಪದ್ಮಾವತಿ’

ಅರಣ್ಯ ಕಾಯ್ದೆಯಿಂದ ಅಲ್ಲಿನ ಜನರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಈ ಕಾಯಿದೆಯಿಂದ ನಿತ್ಯ ಜನರು ಭಯ ದಿಂದ ಬದುಕುತ್ತಿದ್ದಾರೆ. ಹೀಗಾಗಿ ಅಲ್ಲಿನ ಜನರು‌ ನೆಮ್ಮದಿ ಯಿಂದ ಬದುಕಬೇಕಾದ್ರೆ ನಮಗೆ ಆಶೀರ್ವಾದ ಮಾಡಿ. ನಾನು ನಿಮಗೆ ಅಭಯ ಕೊಡ್ತೇನೆ. ಕಾನೂನು ‌ಬದಲಾವಣೆಗೆ ನಾನು ಜವಬ್ದಾರಿ ತೆಗೆದುಕೊಳ್ತೇನೆ. ಆ ಕಾನೂನಿನಲ್ಲಿ ಬದಲಾವಣೆ ತಂದು ನೀವು ನೆಮ್ಮದಿಯಿಂದ ಬದುಕುವಂತೆ ಮಾಡ್ತೇನೆ. ಆ ಕಾಯಿದೆಯಿಂದ ನಿಮ್ಮನ್ನೆಲ್ಲಾ ಉಳಿಸಿಕೊಡುವುದು ನನ್ನ ಜವಾಬ್ದಾರಿ. ನೀವು ಉಳಿದುಕೊಳ್ಳಬೇಕು ಅಂದ್ರೆ ನಮಗೆ ಆಶೀರ್ವಾದ ಮಾಡಿ ಇಲ್ಲ ಒಕ್ಕಲೆಬ್ಬಿಸಬೇಕು, ಊರು ಬಿಟ್ಟು ಹೋಗಬೇಕು ಅಂದ್ರೆ ಬಿಜೆಪಿಗೆ ಮತ ಹಾಕಿ ಎಂದಿದ್ದಾರೆ.

ಜೆಪಿ ಭವನದಲ್ಲಿ ಮಾತನಾಡಿದ ಸಿಎಂ,  ಒಂದು ಕಾಲದಲ್ಲಿ ಚಿಕ್ಕಮಗಳೂರು ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದ್ದ ಜಿಲ್ಲೆ. ಆದರೆ ಕಳೆದ ಹದಿನೈದು ವರ್ಷದಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ಹಿನ್ನಡೆ ಯಾಗಿದೆ. ನಮ್ಮ ಕೆಲ ನ್ಯೂನ್ಯತೆಯಿಂದ ಪೆಟ್ಟು ತಿಂದಿದ್ದೇವೆ. ಶೃಂಗೇರಿ ಶಾರದಾಂಬೆ ಈ ಜಿಲ್ಲೆಯನ್ನು ‌ನಮಗೆ ಉಡುಗೊರೆಯಾಗಿ ಕೊಟ್ಟಿದ್ದಾಳೆ. ಇವತ್ತಿಂದ ಜಿಲ್ಲೆಯಲ್ಲಿ ಹೊಸ ಅಧ್ಯಾಯ ಶುರುವಾಗುತ್ತದೆ. ಜಿಲ್ಲೆಯಲ್ಲಿ ಇವತ್ತಿಂದ ಪಕ್ಷಕ್ಕೆ ಭದ್ರ ಬುನಾದಿ ಹಾಕಿದ್ದೀವಿ ಎಂದು ಭಾವಿಸಿಕೊಳ್ಳಿ. ಬೇರೆ ಕ್ಷೇತ್ರಗಳಂತೆ ನಿಮ್ಮ ಜಿಲ್ಲೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈಗಾಗಲೇ ಅಲ್ಲಿನ ಜಿಲ್ಲೆಯ ಕಾಂಗ್ರೆಸ್ ನಾಯಕರು ನಮಗೆ ಬೆಂಬಲ ಕೊಡುತ್ತೇವೆ ಎಂದು ತಿಳಿಸಿದ್ದಾರೆ ಎಂದರು.

ಕಾಂಗ್ರೆಸ್ - ಜೆಡಿಎಸ್ ಹೊಂದಾಣಿಕೆ ಇರೋದ್ರಿಂದ ಜಿಲ್ಲೆಯಲ್ಲಿ ಅನುಕೂಲವಾಗಲಿದೆ. ಶಿವಮೊಗ್ಗದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಅನುಕೂಲ ಆಗಲಿದೆ.  ಕಳಸವನ್ನು ತಾಲ್ಲೂಕು ಆಗಿ ಘೋಷಣೆ ಮಾಡಲಾಗಿದೆ.  ಇಷ್ಟಾದರೂ ನೀವು ಬಿಜೆಪಿಗೆ ಓಟ್ ಕೊಟ್ರೆ ದೇವರು ಮೆಚ್ಚುವುದಿಲ್ಲ ಎಂದರು.
 
ಉಡುಪಿ, ಕಾಪು, ಬ್ರಹ್ಮಾವರ, ಕಾರ್ಕಳದಲ್ಲಿ ಜನರು ಬಹುಮತ ಕೊಡ್ತಾರೆ. ಅಲ್ಲಿನ ಪ್ರದೇಶದಲ್ಲಿ ಬಿಜೆಪಿ ದಿನೇ ದಿನೇ ಕ್ಷೀಣಿಸುತ್ತಿದೆ. ಅಲ್ಲಿನ ಜನರಿಗೆ ತಿಳುವಳಿಕೆ ಕಡಿಮೆ. ಅಲ್ಲಿ ಒಂದು ಕಾಲೇಜು, ಸ್ಕೂಲ್ ಬೇಕು ಅಂದ್ರೆ ನಾನು ಬೇಕು, ರೇವಣ್ಣ ಬೇಕು. ಆದರೆ ಅಲ್ಲಿನ ‌ಜನರು ಬಿಜೆಪಿ, ನರೇಂದ್ರ ಮೋದಿ ಅಂತಾರೆ ಎಂದು ಕರಾವಳಿಗರ ಮೇಲೆಯೇ ಕಿಡಿ ಕಾರಿದರು.