ಸುಮಲತಾ ಅಂಬರೀಶ್ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಿ ಬಂದ ನಂತರದ ಬೆಳವಣಿಗೆಗಳು ನಿಜಕ್ಕೂ ರಾಜಕಾರಣದ ಹೊಸ ಬೆಳವಣಿಗೆಗೆ ಕಾರಣವಾಗಿದೆ. ಸಿಎಂ ಕುಮಾರಸ್ವಾಮಿ ಸರಣಿ ಟ್ವೀಟ್ ಗಳ ಮೂಲಕ ಕೃಷ್ಣ ಅವರ ನಡೆಯನ್ನು ಟೀಕಿಸಿದ್ದಾರೆ.
ಬೆಂಗಳೂರು[ಮಾ. 15] ‘ಮಾನ್ಯ ಕೃಷ್ಣ ಸಾಹೇಬರಿಗೆ ಗೌರವಯುತ ನಮಸ್ಕಾರಗಳು. ನೀವು ತುಂಬಾ ಮುಂದೆ ಹೆಜ್ಜೆ ಹಾಕಿಬಿಟ್ಟಿರುವುದರಿಂದ ನೀವು ನಡೆದು ಬಂದ ಹಾದಿ ಮರೆತುಹೋಗಿದೆ ಎಂದು ಭಾವಿಸುತ್ತೇನೆ. 50 ವರ್ಷ ಕಾಲ ನೀವು ಅಧಿಕಾರದ ಬೆಣ್ಣೆಯನ್ನು ಸಾಕಷ್ಟು ಮೆದ್ದಿರಿ...
ಎರಡು ಬಾರಿ ಕೇಂದ್ರ ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ಉಪ ಮುಖ್ಯಮಂತ್ರಿಯಾಗಿ, ಪಕ್ಕದ ರಾಜ್ಯದಲ್ಲಿ ರಾಜ್ಯಪಾಲರಾಗಿ ಅಧಿಕಾರ ಅನುಭವಿಸಿದಿರಿ. ಇಟ್ಟೆಲ್ಲ ಆದಮೇಲೆ ನೀವು ಬಿಜೆಪಿಗೆ ಕಾಲಿಟ್ಟಾಗಲೇ ಟೀಕಿಸುವ ನೈತಿಕತೆಯನ್ನು ಕಳೆದುಕೊಂಡಿದ್ದೀರಿ. ಕುಟುಂಬ ರಾಜಕಾರಣವನ್ನು ಪ್ರಶ್ನೆ ಮಾಡಿದ್ದೀರಿ. ಬಹಳ ಸಂತೋಷ..
ರಾಜಕೀಯ ಲಾಭಕ್ಕಾಗಿ ಅಂಬರೀಶ್ ಅಂತ್ಯಕ್ರಿಯೆ ಮಾಡಿದ್ರಾ? ಸುಮಲತಾ ಪ್ರಶ್ನೆ
ಆದರೆ ನಮ್ಮ ಕುಟುಂಬದಲ್ಲಿ ಯಾರೂ ಹಿಂಬಾಗಿಲ ಪ್ರವೇಶ ಪಡೆದಿಲ್ಲ. ಜನ ಆರಿಸಿದಾಗ ಮಾತ್ರ ಅಧಿಕಾರ ಪಡೆದಿದ್ದಾರೆ. ಆದರೆ ನೀವು ರಾಜ್ಯಸಭೆಗೆ ಹಿಂಬಾಗಿಲ ಮೂಲಕ ಪ್ರವೇಶ ಪಡೆಯಲು ದೇವೇಗೌಡರ ಸಹಾಯ ಪಡೆದದ್ದು ನೆನಪಿದೆ ಎಂದು ಭಾವಿಸುತ್ತೇನೆ‘ ಹೀಗೆ ಟ್ವೀಟ್ ಗಳನ್ನು ಮಾಡಿದ್ದು ಎಸ್. ಎಂ.ಕೃಷ್ಣ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
