ಮಂಡ್ಯ[ಮಾ. 14] ಅಂಬರೀಶ್ ಅಂತ್ಯ ಕ್ರಿಯೆ ಬಗ್ಗೆ ಮಾತನಾಡಿದ್ದ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸುಮಲತಾ ತಿರುಗೇಟು ನೀಡಿದ್ದಾರೆ. ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ಸಲುವಾಗಿ ಅಂಬರೀಶ್ ಅಂತ್ಯಕ್ರಿಯೆ ಮಾಡಿದ್ರಾ ಸಿಎಂ ಎಂದು ಪ್ರಶ್ನೆ ಮಾಡಿದ್ದಾರೆ.

ಅಂಬರೀಶ್ ಹೆಸರನ್ನು ಯಾರು ಬಳಕೆ ಮಾಡಿಕೊಂಡು ಈ ಮಾತುಗಳು ಹೇಳ್ತಾ ಇದ್ದಾರೆ ಅನ್ನೊದು ಜನಕ್ಕೆ ಬಿಟ್ಟಿದ್ದು. ಇದನ್ನೆಲ್ಲಾ  ನಂಬೋದಕ್ಕೆ ಜನರು ಮುಠ್ಥಾಳರಲ್ಲ. ಇನ್ನೇನೂ ಪ್ರತಿಕ್ರಿಯೆ ಕೊಡಲು‌ ನಾನು ಇಷ್ಟ ಪಡುವುದಿಲ್ಲ ಎಂದಿದ್ದಾರೆ.

ಮಂಡ್ಯ ಜನಕ್ಕೆ ಸುಮಲತಾ ‘ಡಿಫರೆಂಟ್’ ಮನವಿ; ಅಮ್ಮನ ಪ್ರಚಾರಕ್ಕೆ ಮಗನ ಸಾಥ್

ನನಗೆ ಈ ರೀತಿಯ ರಾಜಕೀಯ ಮಾಡಲು ಇಷ್ಟವಿಲ್ಲ. ಎರಡು ದಿನದ ಹಿಂದೆ ಸಿಎಂ ಅವ್ರೆ ಹೇಳಿದ್ರು ನಾನು ಅಂಬರೀಶ್ ಬಗ್ಗೆ ಏನನ್ನು ಮಾತನಾಡುವುದಿಲ್ಲ ಅಂತ ಮಾತು ಕೊಟ್ಟು ಎರಡು ದಿನ ಸಹ  ಅದನ್ನು ಉಳಿಸಿಕೊಂಡಿಲ್ಲ. ಅಂಬರೀಶ್ ಗೆ ಏನ್ ಮಾಡಿದ್ರು ಅನ್ನೋದನ್ನು ಮಾತನಾಡೋದಕ್ಕಿಂತ ಮಂಡ್ಯಕ್ಕೆ ಏನು ಮಾಡುತ್ತೀನಿ ಅನ್ನೋದನ್ನು ಮಾತನಾಡಲಿ  ಎಂದು ಸವಾಲು ಹಾಕಿದ್ದಾರೆ.