ತುಮಕೂರು : ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತ್ತ ತುಮಕೂರಿನ  ದಸರೀಘಟ್ಟ ಚೌಡೇಶ್ವರಿ ದೇವಿ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯದ ಬಗ್ಗೆ ಭವಿಷ್ಯ ನುಡಿದಿದ್ದಾಳೆ.

ಮೋದಿ ಮತ್ತೇ ಪ್ರಧಾನಿ ಆಗೋದು ಸುಲಭವಲ್ಲ. ಪ್ರಯಾಸದಿಂದ ಪ್ರಧಾನಿಯಾಗಲಿದ್ದಾರೆ. ಆದರೂ ಕೂಡ ಅವರು ಎರಡನೇ ಬಾರಿ ಮತ್ತೆ ಪ್ರಧಾನಿಯಾಗುತ್ತಾರೆ. ಎರಡನೇ ಬಾರಿ ಪ್ರಧಾನಿಯಾಗಬೇಕೆಂಬ ಆಸೆ ಈಡೇರುತ್ತದೆ ಎಂದು ಭವಿಷ್ಯ ನುಡಿಯಲಾಗಿದೆ.  

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶೀಘ್ರದಲ್ಲಿ ನನ್ನ ಕ್ಷೇತ್ರಕ್ಕೆ ಕರೆಸಿಕೊಳ್ಳುತ್ತೇವೆ ಎಂದು ತಿಪಟೂರು ತಾಲೂಕಿನಲ್ಲಿರುವ ಚೌಡೇಶ್ವರು ದೇವಿ ಭವಿಷ್ಯ ನುಡಿದಿದ್ದಾರೆ. 

2004ರ ಮರುಕಳಿಸುವಿಕೆ ಗುಮಾನಿ: ಹೇಗಾಗಲಿದ್ದಾರೆ ಮೋದಿ ಮತ್ತೆ ಪ್ರಧಾನಿ?

 ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗುವ ಮುನ್ನವೂ ಕೂಡ ಈ ದೇವಿ ಭವಿಷ್ಯ ನುಡಿದಿದ್ದು, ಅದೂ ನಿಜವಾಗಿತ್ತು. ಇದೀಗ ಮತ್ತೆ ಪ್ರಧಾನಿಯಾಗುತ್ತಾರೆ ಎನ್ನುವ ಭವಿಷ್ಯವನ್ನು ಕಾದು ನೋಡಬೇಕಿದೆ. 

ಇನ್ನು ಈ ಹಿಂದೆ ಜೆಡಿಎಸ್ ಮುಖಂಡ ಎಚ್.ಡಿ. ದೇವೇಗೌಡ  ಅವರು ಕೂಡ ಪ್ರಧಾನಿಯಾವುದಾಗಿ ಈ ಹಿಂದೆ ಚೌಡೇಶ್ವರಿ ದೇವಿ ಭವಿಷ್ಯ ನುಡಿದಿದ್ದು ಸತ್ಯವಾಗಿತ್ತು.