ನವದೆಹಲಿ (ಮಾ. 26): ಪ್ರತಿ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆ ಬದಲಾಗಿ ಇನ್ನೂ ಹೆಚ್ಚಿನ ಬೂತ್‌ಗಳಲ್ಲಿನ ವಿವಿಪ್ಯಾಟ್ ಮತಗಳನ್ನು ತಾಳೆ ಹಾಕಿ ನೋಡಲು ಸಾಧ್ಯವೇ ಎಂದು ಮಾ.೨೮ರೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರೀಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.

ಜಯಪ್ರದ ಬಿಜೆಪಿ ತೆಕ್ಕೆಗೆ: ಅಮರ್ ಸಿಂಗ್ ನಗುತ್ತಿದ್ದಾರೆ ಮೆತ್ತಗೆ!

ಮತದಾರರ ತೃಪ್ತಿಗಾಗಿ ವಿವಿಪ್ಯಾಟ್ ಸ್ಯಾಂಪಲ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ಕುರಿತು ಮಾ.28 ರಂದು ಸಂಜೆ 4 ರೊಳಗೆ ಉತ್ತರ ನೀಡಬೇಕು. ಇದು ಸಂದೇಹದ ಪ್ರಶ್ನೆ ಇಲ್ಲ. ಇದರಲ್ಲಿ ಮತದಾರರ ತೃಪ್ತಿ ಅಡಗಿದೆ. 

ಯಾವುದೇ ಸಂಸ್ಥೆ ಸಲಹೆಗಳನ್ನು ಸ್ವೀಕರಿಸದಿರುವಂತಹ ಕವಚದಲ್ಲಿಲ್ಲ. ಸುಧಾರಣೆಗೆ ಎಲ್ಲೆಡೆ ಅವಕಾಶ ಇದ್ದೇ ಇದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹಾಗೂ ನ್ಯಾ| ದೀಪಕ್ ಗುಪ್ತಾ ಅವರಿದ್ದ ಪೀಠ ತಿಳಿಸಿದೆ. ಇದೇ ವೇಳೆ, ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ ಅರ್ಧದಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿನ ವಿವಿಪ್ಯಾಟ್ ಮತಗಳನ್ನು ಎಣಿಕೆ ಮಾಡಬೇಕು ಎಂದು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ 6 ರಾಷ್ಟ್ರೀಯ ಪಕ್ಷಗಳು, 15 ಪ್ರಾದೇಶಿಕ ಪಕ್ಷಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಏ.1 ಕ್ಕೆ ಮುಂದೂಡಿದೆ.