ಬೆಂಗಳೂರು(ಮಾ.20): ಸಿಎಂ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಕುಮಾರಸ್ವಾಮಿ ನಡುವಿನ ಸಂಭಾಷಣೆ ಈಗಾಗಲೇ ಸೋಶಿಯಲ್ ಮಿಡಿಯಾದಲ್ಲಿ ಟ್ರೋಲ್ ಆಗಿದೆ. 

ಜಾಗ್ವಾರ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ನಿಖಿಲ್ ಅವರನ್ನು ಉಲ್ಲೇಖಿಸಿ ‘ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಕೇಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೂಪಗಳಲ್ಲಿ ಹರಿದಾಡುತ್ತಿದೆ.

ಅದರಂತೆ ಟ್ರೋಲಿಗರು ಮತ್ತೊಂದು ಹೊಸ ವಿಡಿಯೋ ಬಿಡುಗಡೆ ಮಾಡಿದ್ದು, ನಾಸಾ ಸೂರ್ಯನ ಶಬ್ಧ ಸೆರೆ ಹಿಡಿದ ಅಪರೂಪದ ಕ್ಷಣಕ್ಕೆ ಕುಮಾರಸ್ವಾಮಿ ಮತ್ತು ನಿಖಿಲ್ ನಡುವಿನ ಸಂಭಾಷಣೆಯನ್ನು ಜೋಡಿಸಲಾಗಿದೆ.

"

ನಿರೂಪಕ ಸೂರ್ಯ ಹೇಗೆ ಶಬ್ಧ ಮಾಡುತ್ತಾನೆ ಎಂದು ವಿವರಸಿದ ಬಳಿಕ ‘ನಿಖಿಲ್ ಎಲ್ಲಿದ್ದೀಯಪ್ಪ’ ಎಂಬ ಕುಮಾರಸ್ವಾಮಿ ಧ್ವನಿ ಕೇಳಿಸುತ್ತದೆ. ಬಳಿಕ ನಿರೂಪಕ ಇದನ್ನು ಬ್ರಹ್ಮಾಂಡದಲ್ಲಿ ಅತ್ಯಂತ ಗೊಂದಲಮಯ ಶಬ್ಧ ಎಂದು ಹೇಳುತ್ತಾನೆ.

ಒಟ್ಟಿನಲ್ಲಿ ‘ನಿಖಿಲ್ ಎಲ್ಲಿದ್ದೀಯಪ್ಪ’ ಭಾರೀ ಟ್ರೋಲ್ ಗೆ ಒಳಗಾಗಿದ್ದು, ದಿನಕ್ಕೊಂದು ಹೊಸ ಹೊಸ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.