ಚುನಾವಣೆ ಸಂದರ್ಭ ಆರೋಪ-ಪ್ರತ್ಯಾರೋಪ ಸಹಜ. ಆದರೆ ಈ ಕಾಂಗ್ರೆಸ್ ಮುಖಂಡ ಮಾತನಾಡಿರುವ ರೀತಿ ಹೇಗಿತ್ತು ನೀವೇ ನೋಡಿ..

ಬೆಂಗಳೂರು[ಏ. 05] ಕೆ.ಆರ್ ಪುರಂನ ಸಭೆಯೊಂದರಲ್ಲಿ ಬಿಜೆಪಿ ನಾಯಕರ ತಲೆ ತೆಗೆಯುವ ಮಾತು ಕೇಳಿಬಂದಿದೆ. ಕಾಂಗ್ರೆಸ್ ನಾಯಕರ ಸಭೆಯಲ್ಲಿ ಬಿಜೆಪಿ ನಾಯಕರ ತಲೆ ಕಡಿಯುವ ಮಾತನ್ನು ಕಾಂಗ್ರೆಸ್ ಶಾಸಕ ಭೈರತಿ ಬಸವರಾಜು ಬೆಂಬಲಿಗ ಅಮಾನುಲ್ಲಾ ಖಾನ್ ಆಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚೆಗೆ ನಡೆದ ಕಾಂಗ್ರೆಸ್ ಸಭೆಯಲ್ಲಿ ತಲೆ ಕಡಿಯುತ್ತೀನಿ ಅಂತ ಇತರೆ ಕಾಂಗ್ರೆಸ್ ಮುಖಂಡರ ಎದುರಲ್ಲೇ ಖಾನ್ ಹೇಳಿದ್ದಾರೆ. ಎಷ್ಟು ಕೇಸ್ ಆದ್ರು ಸರಿ, ಎಷ್ಟು ತಲೆಗಳು ಉದುರಿದ್ರು ಸರಿ ಎಂದು ಬೆದರಿಕೆಯನ್ನು ಹಾಕಲಾಗಿದೆ.

'ಸದಾನಂದಗೌಡ್ರು ಮತ್ತೆ ಗೆಲ್ತಾರೆ, ಅದೇ ರೈಲ್ವೆ ಮಿನಿಸ್ಟ್ರು ಆಗ್ತಾರೆ': ಖ್ಯಾತ ಜ್ಯೋತಿಷಿ ಭವಿಷ್ಯ

ನನ್ನ ಕಾಂಗ್ರೆಸ್ ನಿಂದ ಕಿತ್ತುಹಾಕಿದ್ರೂ ಪರ್ವಾಗಿಲ್ಲ ಬಿಜೆಪಿಯವರನ್ನ‌ ಈ ಭಾರಿ ಬಿಡಲ್ಲ. ಅವರನ್ನು ಸರ್ವನಾಶ ಮಾಡುವವರೆಗೆ ಬಿಡಲ್ಲ ಎಂದಿರುವ ಅಮಾನುಲ್ಲಾ ಖಾನ್ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅವಾಚ್ಯ ಶಬ್ಧ ಪ್ರಯೋಗ ಮಾಡಿದ್ದಾರೆ.

ಈ ಸಭೆಯಲ್ಲಿಮ ಕಾಂಗ್ರೆಸ್ ಮುಖಂಡರಾದ ಕೃಷ್ಣಮೂರ್ತಿ, ಬಿಬಿಎಂಪಿ ಮಾಜಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾ ಸುಗುಮಾರ್ ಇದ್ದರು. ಖಾನ್ ಹೇಳಿಕೆಗೆ ಕಾಂಗ್ರೆಸ್ ಮುಖಂಡರು ಚಪ್ಪಾಳೆ ತಟ್ಟಿದ್ದು ಕಂಡು ಬಂತು.