ನವದೆಹಲಿ[ಮೇ.09]: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಸೋಷಿಯಲ್ ಮೀಡಿಯಾದಲ್ಲಿ ಅದೆಷ್ಟು ಸಕ್ರಿಯರಾಗಿದ್ದಾರೋ, ಅಷ್ಟೇ ರಾಜಕೀಯದಲ್ಲೂ ತಮ್ಮನ್ನು ತವು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಿಹಾರದ ಬೆಗುಸುರೈ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಪರ ಪ್ರಚಾರ ನಡೆಸಿದ್ದ ಈ ಬೆಡಗಿ ಬಳಿಕ ದೆಹಲಿಯ ಆಪ್ ಅಭ್ಯರ್ಥಿ ಆತಿಶ್ ಮರ್ಲೇನಾ ಪರವಾಗಿಯೂ ಮತ ಯಾಚಿಸಿದ್ದರು. ಇದೀಗ ಮತ್ತೊಬ್ಬ ಅಭ್ಯರ್ಥಿಯ ಪರ ತಾನು ಪ್ರಚಾರ ನಡೆಸುವುದಾಗಿ  ಸಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಸ್ವರಾ ಭಾಸ್ಕರ್ 'ಮೇ 9ರಂದು ಗುರುವಾರ ನಾನು ದಕ್ಷಿಣ ದೆಹಲಿಗೆ ಮರಳುತ್ತೇನೆ. ಇಲ್ಲಿ ದಕ್ಷಿಣ ದೆಹಲಿಯ ಅಭ್ಯರ್ಥಿ ರಾಘವ್ ಚಡ್ಢಾ ಪರ ಪ್ರಚಾರ ನಡೆಸುತ್ತೇನೆ. ಶಿಕ್ಷಣ ಪಡೆದಿರುವ, ಜಾಗೃತ ಹಾಗು ಅಭಿವೃದ್ಧಿಪಡಿಸುವ ಯೋಚನೆಯುಳ್ಳ ಯುವ ನಾಯಕ ರಾಘವ್ ರಂತವರು ಸಂಸತ್ತು ಪ್ರವೇಶಿಸಲು ನಮ್ಮ ಸಹಕಾರದ ಅಗತ್ಯವಿದೆ' ಎಂದಿದ್ದಾರೆ.

ಹುಟ್ಟುಹಬ್ಬ ಬಿಟ್ಟು ಕನ್ಹಯ್ಯಾ ಪರ ಪ್ರಚಾರಕ್ಕೆ ಬಂದ ಬಾಲಿವುಡ್ ಖ್ಯಾತ ನಟಿ!