ಗೆಳೆಯನ ಪರ ಪ್ರಚಾರಕ್ಕೆ ಬಂದ ಖ್ಯಾತ ನಟಿ| ಹುಟ್ಟುಹಬ್ಬ ಆಚರಣೆ ಬೇಡ, ಉಡುಗೊರೆಯೂ ಬೇಡ ಎಂದ ನಟಿ ಕನ್ಹಯ್ಯಾ ಪರ ಪ್ರಚಾರ
ಗುಜರಾತ್[ಏ.10]: ಬಾಲಿವುಡ್ ಪ್ರಸಿದ್ಧ ನಟಿ ಸ್ವರಾ ಭಾಸ್ಕರ್ ಮಂಗಳವಾರ ತನ್ನ ಹುಟ್ಟುಹಬ್ಬದಂದು ಬೇಗೂಸ್ರಾಯ್ ಬನಲ್ಲಿ ಕಂಡು ಬಂದರು. ಇಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಪರವಾಗಿ ಪ್ರಚಾರ ನಡೆಸಿದರು.
ಬೇಗೂಸ್ರಾಯ್ ಕ್ಷೇತ್ರದಿಂದ ಕನ್ಹಯ್ಯಾ ಕುಮಾರ್ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರೊಂದಿಗಿದ್ದ ಸ್ವರಾ ಭಾಸ್ಕರ್ 'ಇದು ಹುಟ್ಟು ಹಬ್ಬ ಆಚರಿಸುವ ಅಸಾಮಾನ್ಯ ರೀತಿಯಾಗಿದೆ ಕನ್ಹಯ್ಯಾ ನನ್ನ ಗೆಳೆಯ. ಆತ ನಮ್ಮೆಲ್ಲರ ಪರವಾಗಿ ಒಂದು ಮಹತ್ವಪೂರ್ಣ ಹೋರಾಟ ನಡೆಸುತ್ತಿದ್ದಾನೆ. ಅದರಲ್ಲಿ ಆತ ಗೆದ್ದರೆ ಅದು ಭಾರತೀಯ ಪ್ರಜಾಪ್ರಭುತ್ವದ ಗೆಲುವಾಗಲಿದೆ' ಎಂದಿದ್ದಾರೆ.
ತನ್ನ ಸಾಮಾಜಿಕ ಹಾಗೂ ರಾಜಕೀಯ ನಿಲುವಿನಿಂದ ಸದಾ ಚರ್ಚೆಯಲ್ಲಿರುವ ನಟಿ ಸ್ವರಾ ಭಾಸ್ಕರ್ 'ನಾನು ಇದಕ್ಕೂ ಮೊದಲು ಯಾವುದೇ ರಾಜಕೀಯ ಪ್ರಚಾಋದಲ್ಲಿ ಭಾಗವಹಿಸಿಲ್ಲ. ಹೀಗಾಗಿ ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ಆದರೆ ಓರ್ವ ಪ್ರಜ್ಞಾವಂತ ಹಾಘೂ ದೇಶಭಕ್ತ ನಾಗರೀಕಳಾಗಿ ನಾನು ಕನ್ಹಯ್ಯಾ ವಿಚಾರಧಾರೆಗಳನ್ನು ಒಪ್ಪಿಕೊಳ್ಳುತ್ತೇನೆ. ಅವರು ಯಾವತ್ತೂ ದೇಶದ ಹಿತಕ್ಕಾಗಿ ಚಿಂತಿಸುತ್ತಾರೆ. ದೇಶದ ಜನರು ಯೋಚಿಸಲೇಬೇಕಾದ ಸಂವಿಧಾನದ ಮೌಲ್ಯ ಹಾಗೂ ಭಾರತೀಯ ಸಂವಿಧಾನಕ್ಕೆ ಬಂದೊದಗಿರುವ ಅಪಾಯ, ನಿರುದ್ಯೋಗ, ಸಾಮಾಜಿಕ ನ್ಯಾಯದ ಅಗತ್ಯತೆ ಇಂತಹ ಸಮಸ್ಯೆಗಳ ಕುರಿತು ಧ್ವನಿ ಎತ್ತುತ್ತಾರೆ. ಇಂತಹ ಸಮಸ್ಯೆಗಳ ಪರಿಹಾರದಿಂದ ನಮ್ಮ ಜೀವನ ಸುಧಾರಿಸುತ್ತದೆ' ಎಂದಿದ್ದಾರೆ.
ಸ್ವರಾ ಭಾಸ್ಕರ್ ನಿರ್ಧಾರಕ್ಕೆ ಅವರ ಅಭಿಮಾನಿ ಹಾಗೂ ಸ್ನೇಹಿತರು ಖುಷಿ ವ್ಯಕ್ತಪಡಿಸಿದ್ದಾರೆ. ಅತ್ತ ತಮಗೆ ಬೆಂಬಲ ನೀಡಿದ ಸ್ವರಾ ಭಾಸ್ಕರ್ ನಿರ್ಧಾರಕ್ಕೆ ಕನ್ಹಯ್ಯಾ ಕುಮಾರ್, ಜಿಗ್ನೇಶ್ ಮೇವಾನಿ ಧನ್ಯವಾದ ತಿಳಿಸಿ 'ಹುಟ್ಟುಹಬ್ಬವನ್ನು ಆಚರಿಸಿ ಉಡುಗೊರೆ ಸ್ವೀಕರಿಸುವ ಬದಲು ಬೇಗೂಸ್ರಾಯ್ ಜನರಿಗೆ ಅತ್ಯತ್ತಮ ಸಂದೇಶ ನೀಡಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.
