ಬೆಂಗಳೂರು[ಮಾ. 21]  28 ರಲ್ಲಿ 21 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ಪಕ್ಕಾ ಆಗಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಬಲಸಿಗರಿಗೆ ಮಣೆ ಹಾಕಿದೆ.

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಠಕ್ಕರ್ ನೀಡಲು ಕಲಬುರಗಿಯಿಂದ ಡಾ. ಉಮೇಶ್ ಜಾಧವ್ ಕಣಕ್ಕೆ ಇಳಿಯುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಶಾಸಕರಾಗಿದ್ದ ಜಾಧವ್ ಕೆಲವೇ ದಿನಗಳ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ  ಕಮಲ ಪಡೆ ಸೇರಿಕೊಂಡಿದ್ದರು.

ಬಿಜೆಪಿ ಮೊದಲ ಪಟ್ಟಿ ಅಚ್ಚರಿ, ಕರ್ನಾಟಕದ 21 ಕ್ಷೇತ್ರದ ಅಭ್ಯರ್ಥಿಗಳು ಪಕ್ಕಾ

ಇನ್ನು ಮಾಜಿ ಪ್ರಧಾನಿ ದೇವೇಗೌಡರ ತವರಿನಲ್ಲಿ ಈ ಬಾರಿ ಮೊಮ್ಮಗ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಲಿದ್ದಾರೆ. ಪ್ರಜ್ವಲ್  ಎದುರಾಗಿ ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದ ಎ. ಮಂಜು ಸವಾಲು ಹಾಕಲಿದ್ದಾರೆ.

ಇನ್ನು ಬಳ್ಳಾರಿಯಲ್ಲಿ ಉಗ್ರಪ್ಪ ವಿರುದ್ಧ  ದೇವೇಂದ್ರಪ್ಪ ಕಣಕ್ಕೆ ಇಳಿಯುತ್ತಿದ್ದಾರೆ. ಕಾಂಗ್ರೆಸ್ ಮುಖಂಡ ರಮೇಶ್ ಜಾರಕಿಹೊಳಿ ತಂಗಿಯನ್ನು ದೇವೇಂದ್ರಪ್ಪ ಮೊದಲ ಮಗ ಮಂಜುನಾಥ್ ಅವರಿಗೆ ಮದುವೆ ಮಾಡಿಕೊಡುವ ಮೂಲಕ ಬೀಗರಾಗಿದ್ದಾರೆ.  ಮೂಲತಃ ಕಾಂಗ್ರೆಸ್​ನವರಾಗಿರುವ ದೇವೇಂದ್ರಪ್ಪ ಅವರು ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿದ್ದವರು.