ಬೆಂಗಳೂರು[ಏ. 02] ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ದಾರೆ.

ಬೆಂಗಳೂರಿನ ಬನಶಂಕರಿ ವ್ಯಾಪ್ತಿಯಲ್ಲಿ ಅಮಿತ್ ಶಾ ರೋಡ್ ಶೋ ನಡೆಯಿತು. ಸಮಯದ ಅಭಾವದ ಕಾರಣದಿಂದ ಅಮಿತ್ ಶಾ ಭಾಷಣ ಮಾಡಲು  ಸಾಧ್ಯವಾಗಲಿಲ್ಲ.

ಬೆಂಗಳೂರಿನ ಬನಶಂಕರಿ ದೇವಸ್ಥಾನದಿಂದ ರೋಡ್ ಶೋ ಆರಂಭವಾಯಿತು. ತೆರೆದ ವಾಹನದಲ್ಲಿ ತೆರಳಿದ ಅಮಿತ್ ಶಾಗೆ  ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಆರ್. ಆಶೋಕ್, ವಿ ಸೋಮಣ್ಣ, ಎಂ ಕೃಷ್ಣಪ್ಪ ಸಾಥ್ ನೀಡಿದರು.

ಮೋದಿ ಪ್ರಧಾನಿಯಾಗಲಿ ಎಂದ ಸಿದ್ದರಾಮಯ್ಯ! ಜಾರಿದ ನಾಲಿಗೆ

ಬೆಂಗಳೂರು ದಕ್ಷಿಣದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಗ್ರಾಮಾಂತರ ಅಭ್ಯರ್ಥಿ ಅಶ್ವಥ್ ನಾರಾಯಣ ಇದ್ದರು.

"