ಉನ್ನಾವ್‌[ಏ.13]: ಬಿಜೆಪಿಯ ವಿವಾದಿತ ನಾಯಕರ ಪೈಕಿ ಒಬ್ಬರಾದ ಉತ್ತರಪ್ರದೇಶದ ಉನ್ನಾವ್‌ ಕ್ಷೇತ್ರದ ಸಂಸದ ಸಾಕ್ಷಿ ಮಹಾರಾಜ್‌, ಲೋಕಸಭಾ ಚುನಾವಣೆಯಲ್ಲಿ ತಮಗೆ ಮತಹಾಕದ ಜನರಿಗೆ ಶಾಪ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.

ನಾನೊಬ್ಬ ಸನ್ಯಾಸಿ. ನೀವು ನನ್ನನ್ನು ಗೆಲ್ಲಿಸಿದರೆ ನಾನು ಗೆಲ್ಲುತ್ತೇನೆ. ಇಲ್ಲದೇ ಹೋದಲ್ಲಿ ದೇಗುಲಕ್ಕೆ ಹೋಗಿ ಭಜನೆ ಮಾಡುತ್ತೇನೆ. ಆದರೆ ಇದೀಗ ನಿಮ್ಮ ಮತ ಯಾಚಿಸಲು ಬಂದಿದ್ದೇನೆ. ನಿಮ್ಮ ಬಳಿ ಮತ ಭಿಕ್ಷೆ ಕೇಳಿ ಬಂದಿದ್ದೇನೆ. ನೀವು ಸನ್ಯಾಸಿಯ ಬೇಡಿಕೆಯನ್ನು ನಿರಾಕರಿಸಿದ್ದೇ ಆದಲ್ಲಿ ನಾನು ನಿಮ್ಮ ಕುಟುಂಬದ ಸಂತೋಷವನ್ನು ಕಿತ್ತುಕೊಂಡು, ನಿಮಗೆ ಶಾಪ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

ಸದ್ಯ ಬಿಜೆಪಿ ಅಭ್ಯರ್ಥಿ, ಸಂಸದ ಸಾಕ್ಷಿ ಮಹಾರಾಜ್‌ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28