ಹಾಸನ[ಮಾ. 31]   ಹಾಸನದಲ್ಲಿ ಎ‌.ಮಂಜು ಗೆಲ್ಲಿಸಲು, ಮೋದಿಯವರು ಮತ್ತೆ ಪ್ರಧಾನಿ ಯಾಗಬೇಕೆಂಬ ಆಶಯದೊಂದಿಗೆ ಹೋರಾಟಕ್ಕಿಳಿದಿದ್ದೇನೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸಕಲೇಶಪುರ ಕ್ಷೇತ್ರದಲ್ಲಿ ಜನರು 57 ಸಾವಿರ ಮತ ನೀಡಿದ್ದರು. ಆ ಮತಗಳ ಜೊತೆ ಈ ಬಾರಿ ಇನ್ನೂ ಹೆಚ್ಚಿನ ವೋಟ್  ಹಾಕಿಸಲು ಪ್ರಯತ್ನಿಸುವೆ ಎಂದು  ಬಿಜೆಪಿ ಮುಖಂಡ ಸೋಮಶೇಖರ್ ಹೇಳಿದ್ದಾರೆ.

ಇದು ಮೋದಿ ಎಲೆಕ್ಷನ್, ಹೈ ಕಮಾಂಡ್ ಆದೇಶದ ಜೊತೆಗೆ ನನ್ನ ಸ್ವ ಇಚ್ಛೆಯಿಂದ, ಯಡಿಯೂರಪ್ಪ ಗೆ ಶಕ್ತಿ ತುಂಬಲು ಪ್ರಚಾರಕ್ಕಿಳಿದಿರುವೆ.  ಹಾಸನ ಜೆಡಿಎಸ್ ಭದ್ರಕೋಟೆ ಹೌದೋ ಅಲ್ಲವೋ ಎಂಬುದು ಮೇ 23 ಕ್ಕೆ ಗೊತ್ತಾಗುತ್ತದೆ ಎಂದರು.

'ದೇವೆಗೌಡ್ರನ್ನ ಸಿದ್ದರಾಮಯ್ಯ ಸೋಲಿಸ್ತಾರೆ, ಮೈಸೂರಿನಲ್ಲಿ ಸಿದ್ದು ಆಪ್ತನನನ್ನ ಗೌಡ್ರು ಸೋಲಿಸ್ತಾರೆ'

ನಾನು ಕ್ಷೇತ್ರದ ಸಂಪರ್ಕದಲ್ಲಿದ್ದೆ, ಕ್ಷೇತ್ರ ಬಿಟ್ಟು  ಎಲ್ಲೂ ಹೋಗಿರಲಿಲ್ಲ. ಒಬ್ರು ಗೆಲ್ಬೇಕು ಅಂದ್ರೆ ಒಬ್ರು ಸೋಲಲೇಬೇಕು. ಎ.ಮಂಜು ಗೆಲ್ಲಿಸುವುದೇ ನಮ್ಮ ಗುರಿ. ಆಪರೇಷನ್ ಕಮಲ ವಿಚಾರದಲ್ಲಿ ಸೋಮಶೇಖರ್ ಇಲ್ಲ ಎಂದು ಕುಮಾರಸ್ವಾಮಿ ಯೇ ಈ ಹಿಂದೆ ಸ್ಪಷ್ಟಪಡಿಸಿದ್ದಾರೆ. ಆಪರೇಷನ್ ಕಮಲದಲ್ಲಿ ನನ್ನ ಪಾತ್ರ ಸಾಬೀತು ಮಾಡಿದ್ರೆ ನನ್ನ ಘೋಷಿತ ನೂರಾರು ಕೋಟಿ ಆಸ್ತಿ ಪ್ರವಾಹ ಪೀಡಿತರಿಗೆ ಬರೆದುಕೊಡುವೆ ಎಂದರು.

ನಮ್ಮ ಮೇಲಿನ ಆರೋಪದ ಸೇಡು ತೀರಿಸಿಕೊಳ್ಳಲು ನಾವು ಬಂದಿಲ್ಲ. ಹಾಸನದಲ್ಲಿ ಎ.ಮಂಜು ಗೆಲ್ಲಿಸಿ ಮತ್ತೆ ಮೋದಿ ಪ್ರಧಾನಿಯಾಗಲು ಶಕ್ತಿ ತುಂಬುವ ಉದ್ದೇಶದಿಂದ ಹೋರಾಟ ಮಾಡುವೆ ಎಂದರು.