ಕೊಪ್ಪಳ, [ಮಾ.31]: ತುಮಕೂರಿನಲ್ಲಿ ದೇವೇಗೌಡ್ರನ್ನು ಸಿದ್ದರಾಮಯ್ಯ ಸೋಲಿಸಲಿದ್ದಾರೆ. ಅತ್ತ ಮೈಸೂರಿನಲ್ಲಿ ಸಿದ್ದರಾಮಯ್ಯ ಆಪ್ತನನ್ನು ದೇವೇಗೌಡ್ರು ಸೋಲಿಸಲಿದ್ದಾರೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಹೇಳಿದ್ದಾರೆ.

ಕೊಪ್ಪಳದ ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, 'ಹೆಚ್ಡಿಡಿ ಕುಟುಂಬಕ್ಕೆ ಮಂಡ್ಯ ,ಹಾಸನ,ತುಮಕೂರು ಕ್ಷೇತ್ರಗಳೇ ದೇಶವಾಗಿದೆ. ಸ್ವತಃ ಸಿದ್ದರಾಮಯ್ಯನವರೇ ದೇವೆಗೌಡ್ರನ್ನು ಸೋಲಿಸಲು ನೇತೃತ್ವ ತೆಗೆದುಕೊಂಡಿದ್ದಾರೆ. ನೇರವಾಗಿಯೇ ಕಾಂಗ್ರೆಸ್ ನವರು ಬಿಜೆಪಿಗೆ ಸಪೋರ್ಟ್ ಮಾಡ್ತಾರೆ. ಇನ್ನು ಕೆಲವರು ಒಳಗೊಳಗೆ ಬಿಜೆಪಿಗೆ ಬೆಂಬಲ ನೀಡುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಲು ಕಾಂಗ್ರೆಸ್ ನಾಯಕರೇ ಬಿಡಲ್ಲ. ನಿಖಿಲ್ ಕುಮಾರಸ್ವಾಮಿ ಸೋಲು ನಿಶ್ಚಿತ ಎಂದು ಭವಿಷ್ಯ ನುಡಿದ ಈಶ್ವರಪ್ಪ, ಕುಮಾರಸ್ವಾಮಿಗೆ ಸೋಲಿನ ಭಯ ಕಾಡುತ್ತಿರುವುದರಿಂದ ರಾಜ್ಯವನ್ನ ಬಿಟ್ಟು ಮಂಡ್ಯದಲ್ಲಿ ಸಿಮೀತವಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಚಿಕ್ಕೋಡಿ ಬಿಜೆಪಿಯಲ್ಲಿ ಅಸಮಾಧನ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಉಮೇಶ‌ ಕತ್ತಿಯವರ ಜೊತೆ ಮಾತನಾಡಿದ್ದೇವೆ.ಅವರು ಯಾವುದೇ ಕಾರಣಕ್ಕೂ ಪಕ್ಷ ಬೀಡಲ್ಲ ಎಂದು ಹೇಳಿದರು.