ಬಾಗಲಕೋಟೆ[ಏ.09]: ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಾನು ಬಳಸಿರುವ ‘ಅಯೋಗ್ಯ’ ಎನ್ನುವ ಪದ ಬೇಸರ ತಂದಿದ್ದರೆ, ಆ ಪದ ಬಿಟ್ಟು ಯೋಗ್ಯತೆ ಇಲ್ಲದ ಮುಖ್ಯಮಂತ್ರಿ ಎಂದು ಹೇಳುತ್ತೇನೆ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಈಶ್ವರಪ್ಪಗೆ ಜೀವ ಬೆದರಿಕೆ ಕರೆ : ಶಿವಮೊಗ್ಗ ಎಸ್ ಪಿಗೆ ದೂರು

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯಾದವರು ಐಟಿ ದಾಳಿ ಕುರಿತು ವಿಷಯ ಬಿಚ್ಚಿಡುವುದು, ಕಳ್ಳರಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡುವುದು ನೋಡಿದರೆ ಅವರ ಬಗ್ಗೆ ಇನ್ನೇನು ಹೇಳಲು ಸಾಧ್ಯ ಎಂದು ಪ್ರಶ್ನಿಸಿದರು. ಮಂಡ್ಯ ಚುನಾವಣೆಯಲ್ಲಿ ಮಗನ ಸೋಲು ಒಪ್ಪಿಕೊಂಡಂತೆ ಮಾತನಾಡುವ ಕುಮಾರಸ್ವಾಮಿ, ಮಗನ ಸೋಲಿಗೆ ಎಲ್ಲರೂ ಸೇರಿ ಸಂಚು ರೂಪಿಸಿದ್ದಾರೆ ಎನ್ನುವುದು ಸರಿಯಲ್ಲ. ರಾಜಕಾರಣದಲ್ಲಿ ಒಬ್ಬರನ್ನೊಬ್ಬರು ಸೋಲಿಸುವುದು ಇದ್ದೇ ಇರುತ್ತದೆ. ಅದನ್ನು ಸಂಚು ಎಂದರೆ ತಪ್ಪಾಗುತ್ತದೆ ಎಂದು ಹೇಳಿ​ದರು.

'ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ‌ ನೆಗೆದು ಬೀಳ್ತಾರೆ'

ಆರ್‌ಎಸ್‌ಎಸ್‌ ಬಗ್ಗೆ ಏನೂ ಗೊತ್ತಿರದ ದಿನೇಶ್‌ ಗುಂಡೂರಾವ್‌ ಒಬ್ಬ ಚಿಲ್ಲರೆ ಪ್ರಚಾರ ಪಡೆದುಕೊಳ್ಳುವ ರಾಜಕಾರಣಿ ಎಂದು ಟೀಕಿಸಿದರು.