Asianet Suvarna News Asianet Suvarna News

ಕಾಂಗ್ರೆಸ್ ಯಾಕೆ ಬಿಟ್ಟೆ ಎಂದು ಪ್ರಶ್ನೆ ಕೇಳುವವರಿಗೆ ಜಗ್ಗೇಶ್ ಉತ್ತರ

ನವರಸ ನಾಯಕ, ಬಿಜೆಪಿ  ಮುಖಂಡ ಜಗ್ಗೇಶ್ ಕಾಂಗ್ರೆಸ್ ಮೇಲೆ ವಾಗ್ದಾಳಿ ಮಾಡಿದ್ದಲ್ಲದೆ ಸವಾಲುಗಳನ್ನು ಎಸೆದಿದ್ದಾರೆ.

BJP Leader Jaggesh Election Campaign in Bhadravati Shivamogga
Author
Bengaluru, First Published Apr 10, 2019, 11:15 PM IST

ಶಿವಮೊಗ್ಗ[ಏ. 10]   ಹಳಸಿರುವ ಚಿತ್ರಾನ್ನದಂತೆ ಕಾಂಗ್ರೆಸ್ ಜೆಡಿಎಸ್ ಪಕ್ಷಗಳು. ಹಳೆಯದ್ದನ್ನೇ ಜನತೆಯ ಮುಂದಿಟ್ಟಿದ್ದಾರೆ. ರಾಹುಲ್ ಗಾಂಧಿಯವರಿಗೆ ಎಬಿಸಿಡಿ ಗೊತ್ತಿಲ್ಲ. ರಾಹುಲ್ ವೇದಿಕೆಯ ಮೇಲೆ ಹತ್ತುವ ಮುಂಚೆ ಮಾಹಿತಿ ಕೊಟ್ಟು ಹತ್ತಿಸಿ. ಒಕ್ಕಲಿಗರನ್ನು ಯಾವುದೇ ಒಬ್ಬರಿಗೆ ದೇಣಿಗೆ ಕೊಟ್ಟಿಲ್ಲ. ಯಾರದೊ ತಾತ ಹಾಗೆ ಅಜ್ಜಿ ಹಾಗೆ ಇದ್ದಾರೆ ಎಂದು ದೇಶವನ್ನು ಅಡ ಇಡೋಕೆ ಸಾಧ್ಯನಾ?  ಎಂದು ಭದ್ರಾವತಿಯಲ್ಲಿ ಬಿಜೆಪಿ ನಾಯಕ, ನಟ ಜಗ್ಗೇಶ್ ವಾಗ್ದಾಳಿ ಮಾಡಿದರು.

ಇವೆಲ್ಲ ತುಕಡ , ತುಕಡ ಗ್ಯಾಂಗ್ ಗಳು ತಮ್ಮ ತಮ್ಮ ಕುಟುಂಬಕ್ಕೆ ಆಸ್ತಿ ಮಾಡ್ಕೋ ಬೇಕು ಒಂದು ಗ್ಯಾಂಗ್ ಇದೆ ಚೌಕಿದಾರ್ ಅಂದರೆ ಕಳ್ಳ ಅಂತಿರಲ್ಲ ಯಾರು 2 ಜಿ ಹಗರಣ ಮಾಡಿದ್ದು? ಯಾರು ಮುಸ್ಲಿಂಮರನ್ನು ಮತ ಹಾಕುವ ಯಂತ್ರವನ್ನಾಗಿ ಮಾಡಿಟ್ಟಿದ್ದರು? ದುಡ್ಡು ಕೊಟ್ಟು ಮತ ಖರೀದಿ ಮಾಡಬಹುದು ಎಂದು ವಿಪಕ್ಷದವರು ತಿಳಿದುಕೊಂಡಿದ್ದಾರೆ ಎಂದು ಆರೋಪಿಸಿದರು.

'ನಾನು ಗೆದ್ದು ದೆಹಲಿಗೆ ಹೋಗ್ತಿನಾ, ಇಲ್ಲವಾ? ಗೊತ್ತಿಲ್ಲ' ಎಂದ HDD

ನಾನು ಕಾಂಗ್ರೆಸ್ ನಲ್ಲಿದ್ದೆ ಎನ್ನುವವರಿಗೆ, ನನ್ನನ್ನು ಬೈಯುವರಿಗೆ ನನ್ನ ಸವಾಲ್  ಹಾಕುತ್ತೇನೆ. ನಾನು ಯಾಕೆ ಕಾಂಗ್ರೆಸ್ ಬಿಟ್ಟೆ ಅಂತ ಹೇಳ್ತಿನಿ ಅದಕ್ಕೂ ಮೊದಲು ನನ್ನ  ಎರಡು ಪ್ರಶ್ನೆಗೆ ಉತ್ತರ ಕೊಡಿ, ಎಸ್. ಎಂ.ಕೃಷ್ಣ ಯಾಕೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು? ಸಿದ್ದರಾಮಯ್ಯ ರನ್ನು ಜೆಡಿಎಸ್ ನಿಂದ ಯಾಕೆ ಕಾಂಗ್ರೆಸ್ ಕರೆದುಕೊಂಡು ಬಂತು? ಇದಕ್ಕೆ ಮೊದಲು ಉತ್ತರ ಕೊಡಿ ಎಂದು ಜಗ್ಗೇಶ್ ಸವಾಲು ಹಾಕಿದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

 

Follow Us:
Download App:
  • android
  • ios