ಮೈಸೂರು[ಮಾ. 30]  ಜಿ.ಟಿ.ದೇವೇಗೌಡರು ನನಗೆ ತುಂಬಾ ಚೆನ್ನಾಗಿ ಗೊತ್ತು. ಅವರ ನಡೆ ಬಗ್ಗೆ ನಾನು ಸಾರ್ವಜನಿಕವಾಗಿ ಏನನ್ನೂ ಹೇಳಲು ಬಯಸುವುದಿಲ್ಲ. ಜಿ.ಟಿ.ದೇವೆಗೌಡರ ಜತೆಗೆ ನನಗೆ ಒಳ್ಳೆಯ ಸಂಬಂಧವಿದೆ. ಸಂದರ್ಭ ಬಂದಾಗ ಅವರೊಂದಿಗೆ ನಾನು ಮಾತನಾಡುತ್ತೇನೆ ಎಂದು ಬಿಜೆಪಿ ನಾಯಕ ಸಿಟಿ ರವಿ ಹೇಳಿರುವುದು ಸಹಜವಾಗಿ ಕುತೂಹಲ ಹೆಚ್ಚಿಸಿದೆ.

ಸಚಿವ ಜಿ.ಟಿ.ದೇವೇಗೌಡ ಬಿಜೆಪಿ ಸೇರ್ತಾರಾ ? ಸಾರ್ವಜನಿಕವಾಗಿ ಜಿಟಿಡಿ ಬಗ್ಗೆ ಮಾತನಾಡಲ್ಲ ಎನ್ನುವ ಮೂಲಕ ಪಕ್ಷಾಂತರ ಸೂಚನೆ ನೀಡಿದ್ರಾ ಸಿಟಿ‌ ರವಿ? ಎನ್ನುವ ಪ್ರಶ್ನೆ ಸಹ ಮೂಡಿದೆ. 

ನೋ ವೇ...ಗೊಂದಲ ಆಗಲು ಚಾನ್ಸೇ ಇಲ್ಲ, ನನ್ನ ಗುರುತಿಸಿ ವೋಟ್ ಹಾಕ್ತಾರೆ'

ಸಿದ್ದರಾಮಯ್ಯ ಅವರು ನರೇಂದ್ರ ಮೋದಿ ಅವರಿಗೆ ಸವಾಲು ಹಾಕುವ ರಿಸ್ಕ್ ತೆಗೆದುಕೊಳ್ಳುವುದು ಬೇಡ. ಗರೀಬಿ ಹಠಾವೋ ಎಂದು ಹೇಳಿದ ಕಾಂಗ್ರೆಸ್ 60 ವರ್ಷಗಳಲ್ಲಿ ಮಾಡಿದ್ದೇನು ? ಈ ಬಗ್ಗೆ ಸಿದ್ದರಾಮಯ್ಯ ಅವರೊಂದಿಗೆ ನಾನೇ ಚರ್ಚೆಗೆ ಬರುತ್ತೇನೆ. ಮಾಧ್ಯಮಗಳೇ ವೇದಿಕೆಯಾಗಲಿ ಎಂದು ಸವಾಲು ಹಾಕಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ ರವಿ,  ಈ ಕ್ಷೇತ್ರದಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣ ಇದೆ. ನಮಗೆ ಮೈತ್ರಿ ಅಭ್ಯರ್ಥಿ ಇದ್ದರೂ ತೊಂದರೆ ಇಲ್ಲ. ಈ ಎರಡು ಪಕ್ಷಗಳ  ಸಂಬಂಧ ಚೆನ್ನಾಗಿಲ್ಲ. ಅವರು ಸೈದ್ಧಾಂತಿಕವಾಗಿ ಮೈತ್ರಿ ಮಾಡಿಕೊಂಡಿಲ್ಲ. ಅದು ಅಧಿಕಾರದ ಮೈತ್ರಿ. ಬಿಜೆಪಿ ಹಾಗೂ ಮತದಾರರ ಜತೆ ಮೈತ್ರಿ ಆಗಿದೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.