ದಿಗ್ವಿಜಯ್ ಸಿಂಗ್‌ಗೆ ವೇದಿಕೆಯಲ್ಲೇ ಶಾಕ್ ನೀಡಿದ್ದ ಯುವಕನಿಗೆ ಬಿಜೆಪಿ ಸನ್ಮಾನ| ದಿಗ್ವಿಜಯ್ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಹೊಗಳಿದ್ದ ಯುವಕ| ಯುವಕ ಅಮಿತ್ ಮಾಲಿ ಧೈರ್ಯ ಮೆಚ್ಚಿ ಸನ್ಮಾನ ಮಾಡಿದ ಮಧ್ಯಪ್ರದೇಶ ರಾಜ್ಯ ಬಿಜೆಪಿ ಘಟಕ|
ಭೋಪಾಲ್(ಏ.24): ಮಧ್ಯಪ್ರದೇಶ ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಚುನಾವಣಾ ಪ್ರಚಾರದ ವೇಳೆ, ವೇದಿಕೆ ಮೇಲೆ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದ ಯುವಕನನ್ನು ಬಿಜೆಪಿ ಸತ್ಕರಿಸಿದೆ.
Scroll to load tweet…
ಚುನಾವಣಾ ಪ್ರಚಾರದ ವೇಳೆ ದಿಗ್ವಿಜಯ್ ಸಿಂಗ್ ‘ನಿಮ್ಮಲ್ಲಿ ಯಾರಿಗಾದರೂ 15 ಲಕ್ಷ ರೂ. ಬಂದಿದೆಯೇ..’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಲು ವೇದಿಕೆ ಮೇಲೆ ಬಂದ ಯುವಕ ಅಮಿತ್ ಮಾಲಿ, ಪ್ರಧಾನಿ ಮೋದಿ ಪಾಕಿಸ್ತಾನದ ವಿರುದ್ಧ ವಾಯುದಾಳಿ ನಡೆಸಿದ್ದಾರೆ ಎಂದು ಹೇಳಿದ್ದ.

ಯುವಕ ಅಮಿತ್ ಮಾಲಿಯ ಧೈರ್ಯವನ್ನು ಮೆಚ್ಚಿಕೊಂಡಿರುವ ಬಿಜೆಪಿ, ಭೋಪಾಲ್‌ನ ತನ್ನ ಕಚೇರಿಗೆ ಕರೆಸಿಕೊಂಡು ಸನ್ಮಾನ ಮಾಡಿದೆ. ಕಾಂಗ್ರೆಸ್ ಸಭೆಯಲ್ಲೇ ಪ್ರಧಾನಿ ಮೋದಿ ಹೊಗಳಿದ ಅಮಿತ್ ನಿಜಕ್ಕೂ ಧೈರ್ಯಶಾಲಿ ಎಂದು ಮಧ್ಯಪ್ರದೇಶದ ಬಿಜೆಪಿ ರಾಜ್ಯ ಘಟಕ ಮೆಚ್ಚುಗೆಯ ಮಾತುಗಳನ್ನಾಡಿದೆ.
