ಅಮೃತಸರ [ಏ..29]  ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ  ಬಾಲಿವುಡ್ ನಟ ಸನ್ನಿ ಡಿಯೋಲ್ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಬೆಳಿಗ್ಗೆ ಅಮೃತಸರದ ಸ್ವರ್ಣ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ನಾಮಪತ್ರ ಸಲ್ಲಿಸಿದ್ದಾರೆ.

ಪಂಜಾಬ್ ಬಿಜೆಪಿ ಅಧ್ಯಕ್ಷ ಶ್ವೇತ್ ಮಲಿಕ್, ಹರಿಯಾಣ ವಿತ್ತ ಸಚಿವ ಮತ್ತು ಪಂಜಾಬ್ ಬಿಜೆಪಿ ಚುನಾವಣಾ ಉಸ್ತುವಾರಿ ಕ್ಯಾ. ಅಭಿಮನ್ಯು, ಅಕಾಲಿದಳ ಮುಖಂಡ ಗುರ್‌ಬಚನ್ ಸಿಂಗ್, ಸನ್ನಿ ಡಿಯೋಲ್ ಸಹೋದರ ಬಾಬ್ಬಿ ಸಾಥ್ ನೀಡಿದರು.

ಸನ್ನಿ ಡಿಯೋಲ್ ಪೋಟೋದೊಂದಿಗೆ ಮೋದಿ ಬರೆದ ಸಾಲುಗಳು

ಮಗ ಸನ್ನಿ ಡಿಯೋಲ್‌ ಅವರನ್ನು ಆಯ್ಕೆ ಮಾಡಲು ಹಿರಿಯ ಕಲಾವಿದ, ಸನ್ನಿ ತಂದೆ ಧರ್ಮೇಂದ್ರ ಮನವಿ ಮಾಡಿಕೊಂಡಿದ್ದಾರೆ.