ಬಿಜೆಪಿ ಸೇರಿರುವ ನಟ ಸನ್ನಿ ಡಿಯೋಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.

ನವದೆಹಲಿ[ಏ. 28]  ಬಿಜೆಪಿ ಸೇರಿರುವ ಬಾಲಿವುಡ್ ನಟ ಸನ್ನಿ ಡಿಯೋಲ್ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಅವರು, ಸನ್ನಿ ಅಭಿನಯದ ಗದರ್ ಸಿನಿಮಾದ ಡೈಲಾಗ್ ಬರೆದು ಸನ್ನಿ ಅವರನ್ನು ಕೊಂಡಾಡಿದ್ದಾರೆ.

ಹಿಂದೂಸ್ತಾನ ಜಿಂದಾಬಾದ್ ಎಂದಿರುವ ಮೋದಿ ಸನ್ನಿ ಡಿಯೋಲ್ ಅವರನ್ನು ಪ್ರಶಂಸಿಸಿದ್ದಾರೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್ ಸಮ್ಮುಖದಲ್ಲಿ ಅವರು ಏಪ್ರಿಲ್ 23ರಂದು ಸನ್ನಿ ಬಿಜೆಪಿಗೆ ಸೇರಿದ್ದರು.

ಬಾಲಿವುಡ್ ಖ್ಯಾತ ನಟ ವಿನೋದ್ ಖನ್ನಾ ಗುರುದಾಸ್ ಪೂರ್‌ದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸುತ್ತಾ ಬಂದಿದ್ದರು. ವಿನೋದ್ ಖನ್ನಾ ವಿಧಿವಶರಾದ ನಂತರ ಈ ಸಾರಿ ಆ ಕ್ಷೇತ್ರದಿಂದ ಸನ್ನಿ ಡಿಯೋಲ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. 

Scroll to load tweet…