ಬೀದರ್ [ಮಾ. 30]  ಮೋದಿ ಅವರ ಸಾಧನೆ ಕುರಿತು ಮಾತಾನಾಡಿದ ಬೀದರ್ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ, ಐಟಿ ದಾಳಿ ಮಾಡಿಸಿ ಎಲ್ಲರಿಗೂ ಬೀದಿಗೆ ಬರುವಂತೆ ನಮ್ಮ ಸರ್ಕಾರ ಮಾಡಿದೆ. ಮೊನ್ನೆ ನೋಡಿದ್ದೀರಿ ಸಿಎಂ ಡಿಸಿಎಂ, ಗೃಹ ಸಚಿವ ಎಲ್ಲಾ ನಾಯಕರು ಬೀದಿಗೆ ಬಂದಿದ್ದರು ಎಂದು ವಿವಾದಾತ್ಮಕವಾಗಿ ಮಾತನಾಡಿದ್ದಾರೆ.

ಇದಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ, ಇದಕ್ಕಿಂತ ಹೆಮ್ಮೆಯ ವಿಷಯ ಮತ್ತೇನು ಬೇಕು ಬಿಜೆಪಿಗೆ. ನಾವು ಹೇಗೆ ಖುಷಿ ಪಟ್ಟಿದ್ದೆವು. ಇಂಥವರು ಬೀದಿಗೆ ಬಂದರೆಂದು ಇಡೀ ರಾಜ್ಯದ ಜನ ಸಂತಸ ವ್ಯಕ್ತಪಡಿಸಿದ್ದರು ಎಂದರು.

ಎಚ್‌ಡಿಕೆ ‘ನೋವಿನ ಛಾಯೆ’ ಹೇಳಿಕೆ: ಪ್ರಚಾರ ವೇಳೆ ಸುಮಲತಾ ಕಣ್ಣೀರು

ಐಟಿ ರೇಡ್ ಬಳಿಕ ಈಶ್ವರ್ ಖಂಡ್ರೆ ಪ್ರತಿಭಟನೆ ಮಾಡಬೇಕು ಎಂದು ಹೇಳುತ್ತಾರೆ. ಈಶ್ವರ್ ಖಂಡ್ರೆ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಕಾಂಗ್ರೆಸ್ ನವರು ಕೆಳಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.