ಬೆಂಗಳೂರು[ಮಾ. 21]  ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿಲ್ಲ. ಸಂಸದ ಡಿಕೆ ಸುರೇಶ್ ಅವರನ್ನು ಮಣಿಸಲು ಈ ಸಾರಿ ಮಹಿಳಾ ಶಕ್ತಿ ಪ್ರಯೋಗಕ್ಕೆ ಬಿಜೆಪಿ ಮುಂದಾಗಿದೆ ಎಂಬ ಮಾತು ಕೇಳಿ ಬಂದಿದೆ.

ಹಾಗಾದರೆ ಯಾರು ಬೆಂಗಳೂರು ಗ್ರಾಮಾಂತರದ ಸಂಭ್ಯಾವ್ಯ ಬಿಜೆಪಿ ಅಭ್ಯರ್ಥಿ? ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಯೋಗೇಶ್ವರ ಲೋಕಸಮರದ ಅಖಾಡಕ್ಕೆ ಇಳಿಯಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಬಿಜೆಪಿ ಮೊದಲ ಪಟ್ಟಿ: ಮಂಡ್ಯ ಸೇರಿ ಅಭ್ಯರ್ಥಿ ಘೋಷಣೆಯಾಗದ 7 ಕ್ಷೇತ್ರಗಳು

ಆದರೆ ಯೋಗೇಶ್ವರ ಪುತ್ರಿ ನಿಶಾ ಯೋಗೇಶ್ವರ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ.  ಬಿಜೆಪಿ ಮಹಿಳೆಯರಿಗೆ ಹೆಚ್ಚಿಗೆ ಒಂದು ಸ್ಥಾನ ನೀಡಿದಂತೆಯೂ ಆಗಲಿದೆ.