ಬೆಂಗಳೂರು[ಮೇ. 16]  ಕರ್ನಾಟಕದ ಮಟ್ಟಿಗೆ ಈ ಲೋಕಸಭಾ ಚುನಾವಣೆ ಫಲಿತಾಂಶ ಮತ್ತೊಂದು ಹೊಸ ರಾಜಕಾರಣದ ಬದಲಾವಣೆಗೆ ಕಾರಣವಾದರೂ ಅಚ್ಚರಿ ಇಲ್ಲ. ಕಳೆದ ವರ್ಷ ಅಂದರೆ 2018ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಿತ್ತು.

ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣ ಆಗಿತ್ತು. ಈ ಸಂದರ್ಭದಲ್ಲಿಯೇ  ತೀರ್ಪು ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಬೇಷರತ್ ಆಗಿ ಜೆಡಿಎಸ್ ಗೆ ಬೆಂಬಲ ನೀಡಿ ಸರಕಾರ ರಚನೆ ಮಾಡಲು ಒಪ್ಪಿಗೆ ನೀಡಿತ್ತು.

ಅಕಟಕಟ..!ವಿಮಾನದಲ್ಲಿ ಯೋಗಿ ಜೊತೆ ಅಖಿಲೇಶ್ ಊಟ

ಇನ್ನೊಂದು ಕಡೆ 104 ಸ್ಥಾನಗಳಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಸರಕಾರ ರಚನೆಗೆ ಹಕ್ಕು ಮಂಡಿಸಿ ಬಿಎಸ್ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ತೆಗೆದುಕೊಂಡರು ಬಹುಮತ ಸಾಬೀತು ಮಾಡಲಾಗದೇ ಒಂದೇ ದಿನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತು

ಈಗ ಮತ್ತೆ ರಾಜಕರಣದ ಬದಲಾವಣೆಯ ವಾತಾವರಣ ನಮ್ಮ ಮುಂದೆ ಇದೆ. ಅದಕ್ಕೆ ಲೋಕಸಭೆ ಫಲಿತಾಂಶ. ಮೇ. 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅಂದೆಯೇ ನವದೆಹಲಿಯಲ್ಲಿ ಮಿತ್ರ ಪಕ್ಷಗಳ ಸಭೆ ಕರೆದಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೂ ಆಹ್ವಾನ ನೀಡಿದ್ದಾರೆ.

ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬಂದಾಗಲೂ ಬಿಜೆಪಿಗಿಂತ ಕಾಂಗ್ರೆಸ ಮತ್ತು ಜೆಡಿಎಸ್ ಒಂದು ಹೆಜ್ಜೆ ಮುಂದೆ ನಿಂತು ಯೋಚನೆ ಮಾಡಿದ್ದವು. ದೇವೇಗೌಡರಲ್ಲಿ ಆಪ್ತತೆ ಇಟ್ಟುಕೊಂಡಿದ್ದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಬೆಂಗಳೂರಿಗೆ ಆಗಮಿಸಿ ದೋಸ್ತಿ ಬೆಸೆದಿದ್ದರು.  ಈ ಬಾರಿಯೂ ಕೇಂದ್ರದಲ್ಲಿ ಯಾರಾದರೂ ದೊಡ್ಡ ಪ್ರಮಾಣದಲ್ಲಿ ದೋಸ್ತಿ ಬೆಸೆಯುವವರೆ?

ಚುನಾವಣೆಗ ಸಮಗ್ರ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ