ದಾವಣಗೆರೆ(ಮಾ.20)  ಸಂಸದ ಜಿ.ಎಂ.ಸಿದ್ದೇಶ್ವರ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ಜಿ.ಎಂ.ಸಿದ್ದೇಶ್ವರ ಅವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಜಯಲಕ್ಷ್ಮಿ ಎಂಬುವರು ದೂರು ನೀಡಿದ್ದಾರೆ.

ಕಿಡ್ನಿ ತೊಂದರೆಯಿಂದ  ಸಿದ್ದೇಶ್ವರ ಅವರ ಆಸ್ಪತ್ರೆಗೆ ಮಹಿಳೆ ದಾಖಲಾಗಿದ್ದರು. ಸಮರ್ಪಕ ಚಿಕಿತ್ಸೆ ಸಿಕ್ಕಿಲ್ಲ ಎಂದು ಆರೋಪಿಸಿರುವ ಮಹಿಳೆ  ಆಯೋಗಕ್ಕೆ ದೂರು ನೀಡಿದ್ದಾರೆ.

ದೇವೇಗೌಡರ ಕ್ಷೇತ್ರ ಫೈನಲ್ : ರೇವಣ್ಣರಿಂದ ಶುಭಗಳಿಗೆ ನಿಗದಿ

ಚಿಕಿತ್ಸೆ ಸರಿಯಾಗಿ ಸಿಗದ ಕಾರಣ ಅಂಗವೈಕಲ್ಯಕ್ಕೆ ಗುರಿಯಾಗಿರುವ ಮಹಿಳೆ ಸಿದ್ದೇಶ್ವರ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರಬೇಕು ಎಂದು ಕೇಳಿಕೊಂಡಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದ ಜಯಲಕ್ಷ್ಮಿ ಇದೀಗ ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ.