ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ದಾರೆ. ರೋಡ್ ಶೋ ನಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಪ್ರಮುಖ ಸ್ಥಾನ ನೀಡಲಾಗಿದೆ.

ಬೆಂಗಳೂರು[ಏ. 02] ಬೆಂಗಳೂರಿನ ಬನಶಂಕರಿ ವ್ಯಾಪ್ತಿಯಲ್ಲಿ ಅಮಿತ್ ಶಾ ರೋಡ್ ಶೋ ನಡೆಯಿತು. ಬೆಂಗಳೂರು ದಕ್ಷಿಣದಿಂದ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿದ್ದ ತೇಜಸ್ವಿನಿ ಆರಂಭದಿಂದ ಅಂತ್ಯದವರೆಗೂ ರೋಡ್ ಶೋ ನಲ್ಲಿ ಜತೆಯಾಗಿದ್ದರು.

Add Asianetnews Kannada as a Preferred SourcegooglePreferred

ಮುಂದಿನ ಸಾಲಿನಲ್ಲಿಯೇ ತೇಜಸ್ವಿನಿ ಇದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪಕ್ಕದಲ್ಲಿ ತೇಜಸ್ವಿನಿ ನಿಂತಿದ್ದು ಮತಯಾಚನೆಯಲ್ಲಿ ಜತೆಯಾದರು. 

ಮೋದಿ ಪ್ರಧಾನಿಯಾಗಲಿ ಎಂದ ಸಿದ್ದರಾಮಯ್ಯ! ಜಾರಿದ ನಾಲಿಗೆ

ತೆರೆದ ವಾಹನದಲ್ಲಿ ತೆರಳಿದ ಅಮಿತ್ ಶಾಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಆರ್. ಆಶೋಕ್, ವಿ.ಸೋಮಣ್ಣ, ಎಂ ಕೃಷ್ಣಪ್ಪ ಸಾಥ್ ನೀಡಿದರು.. ಬೆಂಗಳೂರು ದಕ್ಷಿಣದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಗ್ರಾಮಾಂತರ ಅಭ್ಯರ್ಥಿ ಅಶ್ವಥ್ ನಾರಾಯಣ ಇದ್ದರು.