ಕಾರವಾರ (ಮಾ. 27): ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ನೀಡಲಾಗಿದೆ. ಯಾವಾಗಲೂ ವಿವಾದಾತ್ಮಕ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗುವ ಅನಂತ್ ಕುಮಾರ್ ಗೆ ಟಿಕೆಟ್ ಕೊಡುವುದು ಬೇಡ ಎಂದು ಬಿಜೆಪಿಯೊಳಗೆ ಭಿನ್ನಾಭಿಪ್ರಾಯ ಎದ್ದಿತ್ತು. ಆದರೆ ಹೈಕಮಾಂಡ್ ಮಾತ್ರ ಇದಕ್ಕೆ ಸೊಪ್ಪು ಹಾಕಿಲ್ಲ. 

ತೇಜಸ್ವಿನಿ ಹರಕೆ ಕುರಿ ಆದದ್ದು ಹೀಗೆ...

ಹಿಂದುತ್ವದ ಹಿನ್ನೆಲೆಯಲ್ಲಿ ಜನಪ್ರಿಯತೆ ಇದ್ದರೂ ಕೂಡ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ಕೊಡಬೇಡಿ. ಆರ್‌ಎಸ್‌ಎಸ್‌ಗೆ ಕಿಮ್ಮತ್ತೇ ಕೊಡೋಲ್ಲ ಎಂದು ಸಂತೋಷ್, ಈಶ್ವರಪ್ಪ, ಸಿ.ಟಿ ರವಿ, ಪ್ರಹ್ಲಾದ್ ಜೋಷಿ ಎಲ್ಲರೂ ಅಮಿತ್ ಶಾ ಎದುರು ಹೇಳಿ ಬಂದಿದ್ದರು. ಆದರೆ ಇದಕ್ಕೆ ಕ್ಯಾರೇ ಅನ್ನದ ಅನಂತ್ ಹೆಗಡೆ, ಟಿಕೆಟ್ ತಪ್ಪಿಸಿ ಯಾರಿಗೆ ಕೊಡ್ತಿರೋ ಕೊಡಿ ಎಂದು ದಿಲ್ಲಿಗೆ ಕೂಡ ಬರದೇ ಊರಲ್ಲಿ ಸುಮ್ಮನೆ ಕುಳಿತಿದ್ದರು.

ಅರುಣಾಚಲ ಭಾರತದಲ್ಲಿ: 30 ಸಾವಿರ ನಕ್ಷೆ ಸುಟ್ಟ ಚೀನಾ!

ಅಮಿತ್ ಶಾ ಕೂಡ ಹೆಗಡೆ ಬಗ್ಗೆ ದೂರುಗಳು ಇವೆ, ಸಂವಿಧಾನ ವಿರೋಧಿಸಿ ಪಾಲಿಟಿಕ್ಸ್ ಮಾಡೋಕೆ ಆಗುತ್ತಾ ಎಂದು ಹೇಳಿದರಾದರೂ ಅನಂತ್ ಕುಮಾರ್ ಹೆಗಡೆಗೆ ರಾಜ್ಯದ ತುಂಬೆಲ್ಲ ಅಭಿಮಾನಿಗಳಿದ್ದಾರೆ. ಯಡಿಯೂರಪ್ಪ ಬಿಟ್ಟರೆ ಜಾಸ್ತಿ ಜನ ಭಾಷಣ ಕೇಳಲು ಬರುವುದು ಅವರಿಗೆ. ಹೀಗಾಗಿ ಟಿಕೆಟ್ ತಪ್ಪಿಸಿದರೆ ಅನರ್ಥ ಆಗುತ್ತದೆ, ಬೇಡ ಕೊಟ್ಟು ಬಿಡೋಣ ಎಂದರಂತೆ.

- ಪ್ರಶಾಂತ್ ನಾತು, ಸುವರ್ಣನ್ಯೂಸ್ ದೆಹಲಿ ಪ್ರತಿನಿಧಿ

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ