ಬೀಜಿಂಗ್‌[ಮಾ.27]: ಅರುಣಾಚಲ ಪ್ರದೇಶ ಹಾಗೂ ಪೂರ್ವ ಏಷ್ಯಾದ ತೈವಾನ್‌ ಅನ್ನು ತನ್ನ ರಾಷ್ಟ್ರದ ಅವಿಭಾಜ್ಯ ಪ್ರದೇಶಗಳೆಂದು ಗುರುತಿಸಲಿಲ್ಲ ಎಂಬ ಕಾರಣಕ್ಕೆ ವಿದೇಶಕ್ಕೆ ರಫ್ತು ಮಾಡಲು ಸಿದ್ಧಪಡಿಸಿದ್ದ 30000 ನಕ್ಷೆಗಳನ್ನೇ ಚೀನಾ ಸುಟ್ಟು ಹಾಕಿದೆ.

ಅರುಣಾಚಲ ಭಾರತದ ಭಾಗವಾಗಿದ್ದರೂ, ಅದು ತನ್ನ ಪ್ರದೇಶ. ಅದು ದಕ್ಷಿಣ ಟಿಬೆಟ್‌ನ ಭಾಗವೆಂದೇ ಚೀನಾ ಪ್ರತಿಪಾದಿಸುತ್ತಾ ಬಂದಿದೆ. ಇದೇ ಕಾರಣಕ್ಕೆ ಭಾರತದ ರಾಜಕೀಯ ನಾಯಕರ ಅರುಣಾಚಲ ಭೇಟಿಯನ್ನು ಚೀನಾ ವಿರೋಧಿಸುತ್ತದೆ. ಇದೇ ಕಾರಣಕ್ಕಾಗಿ ಅದು ತಾನು ಮುದ್ರಿಸುವ ಎಲ್ಲಾ ಭೂಪಟಗಳಲ್ಲೂ ಅರುಣಾಚಲ ಪ್ರದೇಶವನ್ನು ತನ್ನ ದೇಶದ ಭಾಗ ಎಂದೇ ತೋರಿಸುತ್ತದೆ.

ಆದರೆ ಇತ್ತೀಚೆಗೆ ಮುದ್ರಿಸಲಾದ ನಕಾಶೆಯಲ್ಲಿ ಅರುಣಾಚಲ, ಭಾರತದ ಭೂಭಾಗ ಎಂಬಂತೆ ತೋರಿಸಲಾಗಿತುತ. ಹೀಗಾಗಿ ಸುಮಾರು 30 ಸಾವಿರ ನಕಾಶೆಗಳನ್ನು ಕ್ವಿಂಗ್ಡಾವೊ ಎಂಬಲ್ಲಿ ಚೀನಾದ ಅಧಿಕಾರಿಗಳು ನಾಶ ಮಾಡಿದ್ದಾರೆ ಎಂದು ವರದಿಯಾಗಿದೆ.