ನವದೆಹಲಿ(ಮೇ.15): ತಮ್ಮ ರೋಡ್ ಶೋ ಬಳಿಕ ಪ.ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದಾರೆ.

ತಾವು ಕೋಲ್ಕತ್ತಾದಿಂದ ಜೀವಂತವಾಗಿ ಹೊರ ಬಂದಿದ್ದು, ಇದಕ್ಕೆ CRPFಗೆ ಧನ್ಯವಾದ ಸಲ್ಲಿಸುವುದಾಗಿ ಅಮಿತ್ ಶಾ ಹೇಳಿದ್ದಾರೆ. ಹಿಂಸಾಚಾರಕ್ಕೆ ಟಿಎಂಸಿ ಗೂಂಡಾಗಳೇ ಕಾರಣ ಎಂದಿರುವ ಶಾ, ತಮ್ಮನ್ನು ಕೊಲ್ಲಲು ಬಯಸಿದ್ದ ಟಿಎಂಸಿ ಕಾರ್ಯಕರ್ತರನ್ನು CRPF ಯೋಧರು ದಿಟ್ಟತನದಿಂದ ಎದುರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಹಿಂಸಾಚಾರಕ್ಕೆ ಟಿಎಂಸಿ ಕಾರಣ ಎಂದಿರುವ ಅಮಿತ್ ಶಾ, ಬಿಜೆಪಿ ಕಾರ್ಯಕರ್ತರ ಮೇಲೆ ಗೂಬೆ ಕೂರಿಸುತ್ತಿರುವ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಪ.ಬಂಗಾಳ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
 

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ