ಪ್ರಧಾನಿ ಮೋದಿಗೆ ಅಕ್ಬರುದ್ದಿನ್ ಓವೈಸಿ ಚಾಲೆಂಜ್
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ನಿಟ್ಟಿನಲ್ಲಿ ಬಿಜೆಪಿಯಲ್ಲಿ ಚೌಕಿದಾರ್ ಅಭಿಯಾನ ಆರಂಭವಾಗಿದೆ. ಈ ಸಂಬಂಧ ಎಐಎಂಐಎಂ ಪಕ್ಷದ ಮುಖಂಡ ಅಕ್ಬರುದ್ದಿನ್ ಓವೈಸಿ ಪ್ರಧಾನಿಗೆ ಚಾಲೆಂಜ್ ಮಾಡಿದ್ದಾರೆ.
ನವದೆಹಲಿ : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಇದೀಗ ವಿವಿಧ ಪಕ್ಷಗಳ ನಾಯಕರಲ್ಲಿ ಪರಸ್ಪರ ವಾಗ್ದಾಳಿ ಹೆಚ್ಚಿದೆ.
ಎಐಎಂಐಎಂ ಮುಖಂಡ ಅಕ್ಬರುದ್ದಿನ್ ಓವೈಸಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, ಚೌಕಿದಾರ್ ಎನ್ನುವ ಅಭಿಯಾನ ಚುನಾವಣೆ ಗಿಮಿಕ್ ಎಂದಿದ್ದಾರೆ.
ಇತ್ತೀಚೆಗಷ್ಟೇ ಬಿಜೆಪಿ ಮುಖಂಡರು ತಮ್ಮ ಹೆಸರುಗಳನ್ನು ಚೌಕಿದಾರ್ ಎಂದು ಬದಲಾಯಿಸಿಕೊಂಡಿದ್ದು, ಇದು ಜನರನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆದುಕೊಳ್ಳಲು ಸಹಕಾರಿಯಾಗಿತ್ತು.
ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಕೂಡ ಹಲವು ಬಾರಿ ತಾವೊಬ್ಬ ಚೌಕಿದಾರ ಎಂದು ಹೇಳಿದ್ದು, ದೇಶವನ್ನು ಕಾಯುವುದೇ ತಮ್ಮ ಮೊದಲ ಆದ್ಯತೆ ಎಂದಿದ್ದರು.
ತಮ್ಮ ಹೆಸರಿನ ಹಿಂದೆ ಚೌಕಿದಾರ್ ಎಂದು ಸೇರಿಸಿಕೊಂಡಿದ್ದು, ಈ ಬಗ್ಗೆ ಮಾತನಾಡಿದ ಓವೈಸಿ ನಮಗೆ ಚೌಕಿದಾರ ಬೇಕಿಲ್ಲ. ಓರ್ವ ಉತ್ತಮ ಪ್ರಧಾನಿ ಬೇಕಷ್ಟೇ.
ಚೌಕಿದಾರ್ ಆಗಿದ್ದರೆ, ಆಧಾರ್ , ಪಾಸ್ ಪೋರ್ಟ್ ಗಳಲ್ಲಿಯೂ ಚೌಕಿದಾರ್ ಎಂದು ಸೇರಿಸಿಕೊಳ್ಳಲಿ ಎಂದು ಸೇರಿಸಿಕೊಳ್ಳಲಿ ಎಂದು ಚಾಲೇಂಜ್ ಮಾಡಿದ್ದಾರೆ. ಈ ಮೂಲಕ ಚೌಕಿದಾರ್ ಅಭಿಯಾನದ ಬಗ್ಗೆ ವಾಖ್ ಪ್ರಹಾರ ನಡೆಸಿದ್ದಾರೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...