Asianet Suvarna News Asianet Suvarna News

ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ದೂರು ದಾಖಲು

ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಮುಗಿದಿದ್ದು, ಈಗ ಫಲಿತಾಂಶವನ್ನು ಇಡೀ ರಾಜ್ಯವೇ ಎದುರು ನೋಡುತ್ತಿದೆ. ಇದರ ಮಧ್ಯೆ ಜೆಡಿಎಸ್ ಗೆ ಭರ್ಜರಿ ಪೈಪೋಟಿ ನೀಡಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ದೂರು ದಾಖಲಾಗಿದೆ.

advocates Team  complaints against Mandya Loksabha Indipendente Candidate sumalatha ambareesh
Author
Bengaluru, First Published May 13, 2019, 7:01 PM IST

ಬೆಂಗಳೂರು, [ಮೇ.13]: ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಚುನಾವಣಾ ಆಯೋಗಕ್ಕೆ ವಕೀಲರ ತಂಡ ದೂರು ನೀಡಿದೆ. 

ಸಿಆರ್ ಪಿಎಸ್ ಯೋಧ ಮತದಾನ‌ ಮಾಡಿದನ್ನ ಫೇಸ್ ಬುಕ್ ಗೆ ಹಾಕಿ ಮತಯಾಚನೆ ಮಾಡಿರುವ ಹಿನ್ನೆಲೆಯಲ್ಲಿ ಕಿರಣ್ ಸೇರಿದಂತೆ ಐವರು ವಕೀಲರ ತಂಡ ರಾಜ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ಸಿಆರ್ ಪಿ ಎಫ್ ಯೋಧ ಸುಮಲತಾ ಅವರಿಗೆ ಮತದಾನ‌ ಮಾಡಿರುವ  ಪೊಟೋಗಳನ್ನ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದರು. ಇದನ್ನ ಶೇರ್ ಮಾಡುವ ಮೂಲಕ ಸುಮಲತಾ ಅಂಬರೀಶ್ ಅವರು ಮತಯಾಚನೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಸುಮಲತಾಗೆ ಹಾಕಿದ ಮೊದಲ ಮತವೇ ಅಸಿಂಧು

ಯಾವುದೇ ಯೋಧನನ್ನ ಬಳಸಿಕೊಂಡು ಮತದಾನ ಮಾಡುವ ಹಾಗಿಲ್ಲ. ಇದು ಕಾನೂನಿಗೆ ಬಾಹಿರ ಅಂತ ಗೊತ್ತಿದ್ರು ಸುಮಲತಾ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ. 

ಯೋಧ ಹಂಚಿಕೊಂಡಿರುವ ಪೋಟೊಗಳು ಉಳಿದ ಮಂಡ್ಯ ಮತದಾರರನ್ನ ಪ್ರೇರೆಪಿಸಿವೆ. ಹೀಗಾಗಿ ಸುಮಲತಾ ಅಂಬರೀಶ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಮಂಡ್ಯ ಮೂಲದ ಸಿಆರ್‌ಪಿಎಫ್ ಯೋಧ ಆರ್​ ನಾಯಕ್, ಸುಮಲತಾ ಅಂಬರೀಶ್ ಅವರಿಗೆ ಮತ ಚಲಾಯಿಸುತ್ತಿರುವ ಫೋಟೋವನ್ನು ಫೇಸ್‌ಬುಕ್‌ಗೆ ಅಪ್‌ಲೋಡ್  ಮಾಡಿದ್ದರು. ಆದ್ರೆ, ಯೋಧನ ಮತವನ್ನು ಅಸಿಂಧುಗೊಳಿಸಿ ಚುನಾವಣಾ ಆಯೋಗ ಇತ್ತೀಚೆಗೆ ಆದೇಶ ಹೊರಡಿಸಿತ್ತು.

Follow Us:
Download App:
  • android
  • ios