ಬೆಂಗಳೂರು: ರಾಜ್ಯದಲ್ಲಿ  ಲೋಕಸಭಾ ಚುನಾವಣೆ ಮುಕ್ತಾಯವಾಗಿ ಇನ್ನೇನು ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. 

 ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಪರ ಮತ ಚಲಾಯಿಸಿ ಬಹಿರಂಗವಾಗಿ ಹೇಳಿಕೊಂಡಿದ್ದ ಯೋಧನ ಮತವನ್ನು ಅಸಿಂಧುಗೊಳಿಸು ವಂತೆ ಚುನಾವಣಾ ಆಯೋಗವು ಮಂಡ್ಯ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ.

ಚುನಾವಣೆ ವೇಳೆ ಸಿಆರ್‌ಪಿಎಫ್ ಯೋಧ ಆರ್. ನಾಯ್ಕರ್ ಅವರು ಸುಮಲತಾ ಅವರಿಗೆ ಮತಚಲಾಯಿಸಿ ಗೌಪ್ಯತೆ ಕಾಪಾಡಿಕೊಳ್ಳದೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದರು.