ಲೋಕಸಭಾ ಚುನಾವಣಾ ಕಾವು ಒಂದೆಡೆ ಆದ್ರೆ ಇನ್ನೊಂದು ಕಡೆ ಪಕ್ಷಾಂತರವೆಂಬ ಬಿಸಿಯೂ ಪಕ್ಷಗಳಿಗೆ ತಟ್ಟುತ್ತಿದೆ. ಈಗ ಕೇಸರಿ ಪಡೆಗೆ ಮೂವರು ನಾಯಕರ ಸೇರ್ಪಡೆ ಮತ್ತಷ್ಟು ಬಲ ತುಂಬಿದೆ.
ನವದೆಹಲಿ : ಲೋಕಸಭಾ ಚುನಾವಣೆಗೆ ಇನ್ನೇನು ದಿನಗಣನೆ ಆರಂಭವಾಗಿದೆ. ಇದೇ ವೇಳೆ ಪಕ್ಷಗಳು ಫುಲ್ ಪ್ರಚಾರದಲ್ಲಿ ತೊಡಗಿವೆ.
ಇದರ ನಡುವೆಯೇ ಪಕ್ಷಗಳಿಗೆ ಪಕ್ಷಾಂತರ ಬಿಸಿಯೂ ತಟ್ಟುತ್ತಿದೆ. ಉತ್ತರ ಪ್ರದೇಶದಲ್ಲಿ ಇಬ್ಬರು ಸಮಾಜವಾದಿ ಪಕ್ಷದ ಮುಖಂಡರು ಬಿಜೆಪಿ ಸೇರಿದ್ದಾರೆ. ರಾಮ್ ಸಕಲ್ ಗುರ್ಜಾರ್ ಹಾಗೂ ರಾಜೇಂದ್ರ ಸಿಂಗ್ ಕೇಂದ್ರ ಸಚಿವ ಪಿಯೂಷ್ ಗೋಯಲ್ ನೇತೃತ್ವದಲ್ಲಿ ಪಕ್ಷ ಸೇರಿದ್ದಾರೆ.
ಇನ್ನು ಇದೇ ವೇಳೆ ರಾಷ್ಟ್ರೀಯ ಲೋಕಸಮತಾ ಪಕ್ಷದ ಶಿವರಾಜ್ ಸಿಂಗ್ ಕೂಡ ಕೇಸರಿ ಪಡೆಗೆ ಅಧಿಕೃತವಾಗಿ ಸೇರಿದ್ದಾರೆ. ಮೂವರು ನಾಯಕರ ಬಿಹೆಪಿ ಸೇರ್ಪಡೆಯಿಂದ ಇಬರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಪಕ್ಷಗಳಿಗೆ ಇನ್ನಷ್ಟು ಬಲ ಸಿಗುವ ಭರವಸೆಯಲ್ಲಿದ್ದಾರೆ.
ಅಧಿಕೃತವಾಗಿ ಪಕ್ಷಕ್ಕೆ ಸೇರಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಗುರ್ಜಾರ್ ಮೋದಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಇದರಿಂದ ಪ್ರೇರಿತವಾಗಿದ್ದು, ಎಲ್ಲಾ ಕ್ಷೇತ್ರಗಳನ್ನೂ ಸಮಾನವಾಗಿ ಮುಂದೆ ತೆಗೆದುಕೊಂಡು ಹೋಗಿದ್ದಾರೆ ಎಂದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
