ಅಮೆರಿಕದ ವಿವಿಗಳೊಂದಿಗೆ ನೇರ ಸಂಪರ್ಕ, ಯಷ್ನಾ ಟ್ರಸ್ಟ್ ಹೊಸ ಸಾಹಸ
* ಎಜುಕೇಷನ್ ಯುಎಸ್ಎ ಬೆಂಗಳೂರಿನ ಅಂಡರ್ ಗ್ರಾಜ್ಯವೇಟ್ ವರ್ಚುಯಲ್ ಶೋಕೇಸ್
* ಹೆಸರಾಂತ ಯುನಿವರ್ಸಿಟಿಯ ಪ್ರತಿನಿಧಿಗಳೊಂದಿಗೆ ನೇರ ಸಂಪರ್ಕ
* ನೋಂದಣಿ ಮಾಡಿಕೊಳ್ಳಲು ಅವಕಾಶ
ಬೆಂಗಳೂರು (ಜು 16) ಯಷ್ನಾ ಟ್ರಸ್ಟ್-ಎಜುಕೇಷನ್ ಯುಎಸ್ಎ ಬೆಂಗಳೂರು ಅಂಡರ್ ಗ್ರಾಜುಯೇಟ್ ವರ್ಚುಯಲ್ ಸಂವಹನಕ್ಕೆ ಅವಕಾಶ ಮಾಡಿಕೊಟ್ಟಿದೆ. ಶುಕ್ರವಾರ ಜುಲೈ 23 ರಂದು ಕಾರ್ಯಕ್ರಮ ನೆಡೆಯಲಿದ್ದು ಅಮೆರಿಕದ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸಬಹುದಾಗಿದೆ.
ಅಮೆರಿಕಾದ ಹೆಸರಾಂತ ಶಿಕ್ಷಣ ಸಂಸ್ಥೆಗಳಾದ ಯೂನಿವರ್ಸಿಟಿ ಆಫ್ ರೊಚೆಸ್ಟರ್, ಇಂಡಿಯಾನಾ ಯೂನಿವರ್ಸಿಟಿ-ಪರ್ಡ್ಯೂ ಯೂನಿವರ್ಸಿಟಿ ಇಂಡಿಯಾನಾಪೊಲಿಸ್, ಗ್ರಿನ್ನೆಲ್ ಕಾಲೇಜ್, ಮಿಷಿಗನ್ ಸ್ಟೇಟ್ ಯೂನಿವರ್ಸಿಟಿ, ಯೂನಿವರ್ಸಿಟಿ ಆಫ್ ವಿಸ್ಕೋನ್ಸಿನ್-ಮ್ಯಾಡಿಸನ್, ಸ್ವಾಥ್ಮೋರ್ ಕಾಲೇಜ್, ಯೂನಿವರ್ಸಿಟಿ ಆಫ್ ವಾಷಿಂಗ್ಟನ್, ಸಿಯಾಟಲ್ ಅಂಡ್ ಫ್ಲೋರಿಡಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಮತ್ತು ಪೋಷಕರು ಶೈಕ್ಷಣಿಕ ಕಾರ್ಯಕ್ರಮಗಳು, ಕ್ಯಾಂಪಸ್ ಜೀವನ, ಹಣಕಾಸು ನೆರವಿನ ಆಯ್ಕೆಗಳು, ಅರ್ಜಿ ಪ್ರಕ್ರಿಯೆಗಳು ಮತ್ತು ಕೋವಿಡ್-19 ಸಾಂಕ್ರಾಮಿಕದ ಪ್ರತಿಕ್ರಿಯೆಯಾಗಿ ಅಮೆರಿಕಾದ ವಿಶ್ವವಿದ್ಯಾಲಯಗಳಲ್ಲಿನ ಸುರಕ್ಷತೆಯ ಮುನ್ನೆಚ್ಚರಿಕೆಗಳ ಕುರಿತು ಮೌಲ್ಯಯುತ ಮಾಹಿತಿ ಪಡೆಯಬಹುದು.
ಚೆನ್ನೈನ ಅಮೆರಿಕದ ದೂತಾವಾಸ ಕಚೇರಿಯ ಪಬ್ಲಿಕ್ ಅಫೇರ್ಸ್ ಆಫೀಸರ್ ಆನ್ ಲೀ ಶೇಷಾದ್ರಿ, ಅಮೆರಿಕದಲ್ಲಿನ ಪದವಿಪೂರ್ವ ಅವಕಾಶಗಳು ವಿಶ್ವದಲ್ಲಿಯೇ ಸರಿಸಾಟಿ ಇಲ್ಲದೇ ಇರುವಂತಹವು. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಅನುಕೂಲಕರ ಪಠ್ಯಕ್ರಮ, ಸಣ್ಣ ತರಗತಿಯ ಗಾತ್ರಗಳು, ವಿಶಿಷ್ಟ ಸಂಶೋಧನೆ ಅವಕಾಶಗಳು, ಸುಂದರ ಅತ್ಯಾಧುನಿಕ ಸೌಲಭ್ಯಗಳು ಮತ್ತು ವೈವಿಧ್ಯಮಯ ವಿದ್ಯಾರ್ಥಿ ಸಂಘಟನೆಗಳನ್ನು ಹೊಂದಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಕೇಳಿಕೊಂಡಿದ್ದಾರೆ.
ಅಮೆರಿಕದಲ್ಲಿ ಪದವಿ ಕಾರ್ಯಕ್ರಮಗಳಲ್ಲಿ ಕಲಿಯಲು ಬಯಸುವ ಪ್ರೌಢಶಾಲಾ ವಿದ್ಯಾರ್ಥಿಗಳು bit.ly/UG21Oth ಈ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಈ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಲಾಗುವುದಿಲ್ಲ ಹಾಗಾಗಿ ಕಾರ್ಯಕ್ರಮ ಮುಗಿದ ಬಳಿಕ ವೀಕ್ಷಿಸಲು ಲಭ್ಯವಿರುವುದಿಲ್ಲ.
ಈ ಕಾರ್ಯಕ್ರಮದ ಬಗ್ಗೆ ಅಥವಾ ಅಮೆರಿಕದಲ್ಲಿ ಉನ್ನತ ಶಿಕ್ಷಣದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 98800-41115(ವಾಟ್ಸಾಪ್ನಲ್ಲಿ) ಸಂಪರ್ಕಿಸಿ ಅಥವಾ edusa@yashnatrust.org ಇಮೇಲ್ ಮಾಡಬಹುದು.
ಎಜುಕೇಷನ್ ಯುಎಸ್ಎ ಮತ್ತು ಯಷ್ನ ಟ್ರಸ್ಟ್ ಕುರಿತು
ಎಜುಕೇಷನ್ ಯುಎಸ್ಎ(https://educationusa.state.gov) ಅಮೆರಿಕದ ವಿದೇಶಾಂಗ ಇಲಾಖೆಯ ಭಾಗವಾಗಿದ್ದು 425ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿದ್ಯಾರ್ಥಿ ಸಲಹಾ ಕೇಂದ್ರಗಳನ್ನು 170ಕ್ಕೂ ಹೆಚ್ಚು ದೇಶಗಳಲ್ಲಿ ಹೊಂದಿದೆ. ಈ ಜಾಲವು ವಿಶ್ವದಾದ್ಯಂತ ವಿದ್ಯಾರ್ಥಿಗಳಿಗೆ ನಿಖರ, ಸಮಗ್ರ ಮತ್ತು ಪ್ರಸ್ತುತ ಮಾಹಿತಿಯನ್ನು ಅಮೆರಿಕದ ಉನ್ನತ ಶಿಕ್ಷಣದ ಕುರಿತು ನೀಡುವ ಮೂಲಕ ಯುನೈಟೆಡ್ ಸ್ಟೇಟ್ಸ್ನಲ್ಲಿ ಮಾನ್ಯತೆ ಪಡೆದ ಪೋಸ್ಟ್ ಸೆಕೆಂಡರಿ ಶಿಕ್ಷಣ ಸಂಸ್ಥೆಗಳಲ್ಲಿ ಅವಕಾಶಗಳನ್ನು ಉತ್ತೇಜಿಸುತ್ತದೆ.
ಯಷ್ನ ಟ್ರಸ್ಟ್-ಎಜುಕೇಷನ್ ಯುಎಸ್ಎ ಬೆಂಗಳೂರು(https://www.yashnatrust.org/) ಭಾರತದ ಕರ್ನಾಟಕದಲ್ಲಿ ಶಿಕ್ಷಣ-ಸಲಹೆಯನ್ನು ನೀಡುವ ಏಕೈಕ ಅಧಿಕೃತ ಯು.ಎಸ್.ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ಆಗಿದೆ.