ಮಕ್ಕಳಿಗೆ ಪ್ರೇರಣೆಯಾದ ಇಸ್ರೋ ವಿಜ್ಞಾನಿಗಳು, ಬಾಗಲಕೋಟೆಯಲ್ಲಿ ವಿಶ್ವ ಬಾಹ್ಯಾಕಾಶ ಸಪ್ತಾಹ
ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜ್ನಲ್ಲಿ ನಡೆದ ವಿಶ್ವ ಬಾಹ್ಯಾಕಾಶ ಸಪ್ತಾಹ ಕಾರ್ಯಕ್ರಮ. ರಾಜ್ಯಾದ್ಯಂತ 4 ತಂಡಗಳಾಗಿ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿರೋ ಇಸ್ರೋ ವಿಜ್ಞಾನಿ ಗಳು. ಬಾಹ್ಯಾಕಾಶ ವಿವಿಧ ಸಾಧನೆಗಳನ್ನ ಪ್ರದರ್ಶನದ ಮೂಲಕ ವಿಜ್ಞಾನಿ ಗಳಿಂದ ವಿಶೇಷ ಜ್ಞಾನ ಪಡೆದ ಶಾಲಾಮಕ್ಕಳು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಅ.8): ಸಾಮಾನ್ಯವಾಗಿ ಸರ್ಕಾರಿ ಶಾಲೆಯಲ್ಲಿ ಓದೋ ಅದೆಷ್ಟೋ ಮಕ್ಕಳು ವಿಜ್ಞಾನಿಗಳ ಹೆಸರನ್ನ ಪುಸ್ತಕದಲ್ಲಿ ಓದಿರ್ತಾರೆ, ಕೇಳಿರ್ತಾರೆ, ಆದ್ರೆ ಅವರನ್ನ ಭೇಟಿಯಾಗಿ ತಮ್ಮ ಶೈಕ್ಷಣಿಕ ಸಮಸ್ಯೆಗಳನ್ನ ಚರ್ಚೆ ಮಾಡೋಕೆ ಸಾಧ್ಯವಾಗಿರೋದಿಲ್ಲ, ಆದ್ರೆ ಇಲ್ಲೊಂದು ಕಾರ್ಯಕ್ರಮ ಎಲ್ಲ ವಿಧಧ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಇಸ್ರೋ ವಿಜ್ಞಾನಿಗಳ ಭೇಟಿಗೆ ಅವಕಾಶ ಕೊಟ್ಟಿತ್ತು. ಈ ಸಂದರ್ಭದಲ್ಲಿ ಆ ವಿದ್ಯಾರ್ಥಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಇವುಗಳ ಮಧ್ಯೆ ಶಾಲಾ ಮಕ್ಕಳಿಗೆ ಇಸ್ರೋ ವಿಜ್ಞಾನಿಗಳು ಪ್ರೇರಣೆಯಾಗಿದ್ರು. ಒಂದೆಡೆ ನಾನಾ ನಮೂನೆಯಲ್ಲಿ ಕಂಡು ಬರುತ್ತಿರೋ ಬಾಹ್ಯಾಕಾಶದ ಸಾಧನೆಯುಕ್ತ ಪ್ರಯೋಗಗಳ ಮಾದರಿಗಳು, ಮತ್ತೊಂದೆಡೆ ವಿವಿಧ ಬಾಹ್ಯಾಕಾಶದ ಸಾಧನೆಗಳನ್ನ ವಿವರಿಸುತ್ತಿರೋ ಇಸ್ರೋ ವಿಜ್ಞಾನಿಗಳು, ಇವುಗಳ ಮಧ್ಯೆ ವಿಜ್ಞಾನಿಗಳು ಹೇಳುವ ವಿಷಯವನ್ನ ತದೇಕಚಿತ್ತವಾಗಿ ಕೇಳಿ ಕರಗತ ಮಾಡಿಕೊಂಡ ಶಾಲಾ ಮಕ್ಕಳು, ಅಂದಹಾಗೆ ಇಂತಹವೊಂದು ದೃಶ್ಯಗಳು ಕಂಡು ಬಂದಿದ್ದು ಮುಳುಗಡೆ ನಗರಿ ಬಾಗಲಕೋಟೆಯಲ್ಲಿ. ನಗರದ ವಿದ್ಯಾಗಿರಿಯಲ್ಲಿರೋ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜ್ನಲ್ಲಿ ಬಾಹ್ಯಾಕಾಶ ಮತ್ತು ಸುಸ್ಥಿರತೆ ಧ್ಯೇಯವಾಕ್ಯದೊಂದಿಗೆ ವಿಶ್ವ ಬಾಹ್ಯಾಕಾಶ ಸಪ್ತಾಹವನ್ನ ಆಯೋಜಿಸಲಾಗಿತ್ತು. ರಾಜ್ಯಾದ್ಯಂತ ಸಪ್ತಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಸ್ರೋದಿಂದ 4 ತಂಡಗಳನ್ನ ರೂಪಿಸಲಾಗಿತ್ತು, ಹೀಗಾಗಿ ಬಾಗಲಕೋಟೆಯಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಇಸ್ರೋದಿಂದ 8 ಜನ ವಿಜ್ಞಾನಿಗಳು ಆಗಮಿಸಿದ್ದರು.
ಬಾಗಲಕೋಟೆ ಜಿಲ್ಲೆಯ ವಿಶ್ವ ಬಾಹ್ಯಾಕಾಶ ಸಪ್ತಾಹಕ್ಕೆ ಸರ್ಕಾರಿ ಸೇರಿದಂತೆ ವಿವಿಧ ಶಾಲೆಯ ಸಾವಿರಾರು ಮಕ್ಕಳು:
ಇತ್ತ ವಿಶ್ವ ಬಾಹ್ಯಾಕಾಶ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದೆ ಜಿಲ್ಲೆಯಾದ್ಯಂತ 1 ಸಾವಿರಕ್ಕೂ ಅಧಿಕ ಶಾಲಾ ಮಕ್ಕಳು ಭಾಗವಹಿಸಿದ್ದರು. ಈ ಮಧ್ಯೆ ಬಂದಂತಹ ಮಕ್ಕಳಿಗೆ 30ಕ್ಕೂ ಅಧಿಕ ಬಗೆಯ ಬಾಹ್ಯಾಕಾಶ ಮತ್ತು ಸುರಕ್ಷತೆ ಕುರಿತ ಪ್ರದರ್ಶನಗಳ ಮಾಹಿತಿ ನೀಡಲಾಗುತ್ತಿತ್ತು. ಅತ್ತ ವಿಜ್ಞಾನಿಗಳು ಪ್ರತಿಯೊಂದು ಬಾಹ್ಯಾಕಾಶ ಸಾಧನೆ ಕುರಿತ ಮಾಹಿತಿಗಳನ್ನ ಪ್ರಯೋಗ ಸಮೇತ ವಿವರಿಸುತ್ತಿದ್ದರೆ ವಿದ್ಯಾರ್ಥಿಗಳು ತದೇಕ ಚಿತ್ತವಾಗಿ ನೋಡಿ ವಿಷಯವನ್ನ ಅರಿಗಿಸಿಕೊಳ್ಳುತ್ತಿದ್ದರು.
ಇಂತಹ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಇನ್ನಷ್ಟು ಬಾಹ್ಯಾಕಾಶ ಸಾಧನೆ ಕುರಿತ ಮಾಹಿತಿ ಸಿಗಲು ಸಾದ್ಯವಾಯಿತು ಎಂದು ನಿವೃತ್ತ ಇಸ್ರೋ ವಿಜ್ಞಾನಿ ಎ.ಸಿ. ಪ್ರಭಾಕರ ಮತ್ತು ಬಸವೇಶ್ವರ ಇಂಜಿನಿಯರ್ ಕಾಲೇಜ್ನ ಪ್ರಾಚಾರ್ಯ ಡಾ.ಎಸ್.ಎಸ್.ಇಂಜನೇರಿ ಅಭಿಪ್ರಾಯಪಟ್ಟರು.
ಸರ್ಕಾರಿ ಶಾಲಾ ಮಕ್ಕಳಿಗೆ ಪ್ರೇರಣೆಯಾದ ಇಸ್ರೋ ವಿಜ್ಷಾನಿಗಳು ಖುಷಿಯಾದ ಮಕ್ಕಳು:
ಇನ್ನು ಸಾಮಾನ್ಯವಾಗಿ ಸರ್ಕಾರಿ ಶಾಲೆಗಳ ಮಕ್ಕಳು ವಿಜ್ಷಾನಿಗಳ ಬಗ್ಗೆ ಪುಸ್ತಕದಲ್ಲಿ ಓದಿಕೊಂಡಿರ್ತಾರೆ, ಆದ್ರೆ ಅದೆಷ್ಟೋ ಮಕ್ಕಳಿಗೆ ಮುಖಾಮುಖಿಯಾಗಿ ವಿಜ್ಷಾನಿಗಳ ಭೇಟಿಗೆ ಅವಕಾಶ ಸಿಕ್ಕಿರೋದಿಲ್ಲ, ಅವರೊಂದಿಗೆ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಆಗಿರೋದಿಲ್ಲ, ಆದರೆ ಬಾಗಲಕೋಟೆಯಲ್ಲಿ ವಿಶ್ವ ಬಾಹ್ಯಾಕಾಶ ಸಪ್ತಾಹ ಕಾರ್ಯಕ್ರಮ ನೇರವಾಗಿ ಸರ್ಕಾರಿ ಶಾಲೆಯ ಮಕ್ಕಳಿಗೂ ಸಹ ಇಸ್ರೋ ವಿಜ್ಞಾನಿಗಳನ್ನ ಭೇಟಿಯಾಗಲು ಅವಕಾಶ ನೀಡಿತ್ತು.
NASA ರಾಕೆಟ್ ಡಿಕ್ಕಿ ಹೊಡೆಸಿ ಕ್ಷುದ್ರಗ್ರಹದ ದಿಕ್ಕೇ ಬದಲು: ಅಮೆರಿಕ ಅಪೂರ್ವ ಸಾಹಸ
ಪ್ರತಿಯೊಬ್ಬ ಮಕ್ಕಳು ಸಹ ವಿಜ್ಞಾನಿಗಳಿಗೆ ಭೇಟಿ ಮಾಡಿ ಅವರೊಂದಿಗೆ ಚರ್ಚಿಸಲು ಅವಕಾಶ ನೀಡಿತ್ತು. ಹೀಗಾಗಿ ಇಸ್ರೋ ವಿಜ್ಞಾನಿಗಳು ಇತ್ತ ಮಕ್ಕಳಿಗೆ ಬಾಹ್ಯಾಕಾಶ ಸಾಧನೆಗಳ ಬಗ್ಗೆ ಪ್ರಯೋಗದ ಮಾದರಿಯೊಂದಿಗೆ ವಿವರಿಸುತ್ತಿದ್ದರೆ ಅತ್ತ ಶಾಲಾ ಮಕ್ಕಳಲ್ಲಿ ಖುಷಿಯೋ ಖುಷಿ. ಇಂದಿನ ದಿನ ನಮಗೆಲ್ಲಾ ಖುಷಿಕೊಟ್ಟ ದಿನವಾಗಿದ್ದು, ಇಸ್ರೋ ವಿಜ್ಞಾನಿಗಳು ನಮಗೆ ಪ್ರೇರಣೆಯಾಗಿದ್ದಾರೆ ಎಂದು ವಿದ್ಯಾರ್ಥಿನಿಯರಾದ ನೇತ್ರಾ ಮತ್ತು ರಕ್ಷಿತಾ ಹೇಳಿದರು.
ಮಂಗಳನ ಅಧ್ಯಯನಕ್ಕೆ ಇಸ್ರೋ ಕಳಿಸಿದ್ದ ಮಾಮ್ ಸಂಪರ್ಕ ಕಡಿತ
ಒಟ್ಟಿನಲ್ಲಿ ಬಾಗಲಕೋಟೆಯಲ್ಲಿ ನಡೆದ ವಿಶ್ವ ಬಾಹ್ಯಾಕಾಶ ಸಪ್ತಾಹ ಯಶಸ್ವಿಯಾಗುವುದರ ಜೊತೆಗೆ ಶಾಲಾ ಮಕ್ಕಳಿಗೆ ಖುಷಿಕೊಟ್ಟಿದ್ದು, ಭವಿಷ್ಯದಲ್ಲಿ ಆ ಮಕ್ಕಳು ದೇಶದ ಸಾಧಕ ವಿಜ್ಞಾನಿ ಗಳಾಗಿ ಬೆಳಗಲಿ ಅನ್ನೋದೆ ಎಲ್ಲರ ಆಶಯ..