Asianet Suvarna News Asianet Suvarna News

ಮಂಗಳನ ಅಧ್ಯಯನಕ್ಕೆ ಇಸ್ರೋ ಕಳಿಸಿದ್ದ ಮಾಮ್‌ ಸಂಪರ್ಕ ಕಡಿತ

ಮಂಗಳ ಗ್ರಹ ಅಧ್ಯಯನಕ್ಕೆಂದು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ 8 ವರ್ಷಗಳ ಹಿಂದೆ ಹಾರಿಬಿಟ್ಟಿದ್ದ ಮಂಗಳ ಆರ್ಬಿಟರ್‌ ಮಿಶನ್‌ (ಮಾಮ್‌) ವ್ಯೋಮನೌಕೆಯು ಭೂಮಿಯಿಂದ ತನ್ನ ಸಂಪರ್ಕ ಕಡಿದುಕೊಂಡಿದೆ.

MOM sent by ISRO to study Mars has been disconnected akb
Author
First Published Oct 3, 2022, 7:41 AM IST

ಬೆಂಗಳೂರು: ಮಂಗಳ ಗ್ರಹ ಅಧ್ಯಯನಕ್ಕೆಂದು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ 8 ವರ್ಷಗಳ ಹಿಂದೆ ಹಾರಿಬಿಟ್ಟಿದ್ದ ಮಂಗಳ ಆರ್ಬಿಟರ್‌ ಮಿಶನ್‌ (ಮಾಮ್‌) ವ್ಯೋಮನೌಕೆಯು ಭೂಮಿಯಿಂದ ತನ್ನ ಸಂಪರ್ಕ ಕಡಿದುಕೊಂಡಿದೆ.

ಇಸ್ರೋ(ISRO) ಕೇವಲ 6 ತಿಂಗಳ ಅವಧಿಗೆ ಮಾತ್ರ ಮಂಗಳನ (Mars) ಸುತ್ತ ಪ್ರದಕ್ಷಿಣೆ ಹಾಕಿ, ಮಂಗಳನ ಮೇಲ್ಮೈನ ಮಾಹಿತಿ ಕಳಿಸುವಂತೆ ‘ಮಾಮ್‌’ ನೌಕೆಯನ್ನು ರೂಪಿಸಿತ್ತು. ಆದರೆ 6 ತಿಂಗಳು ಅವಧಿ ಮೀರಿದ ನಂತರವೂ ಅದು ಮಾಹಿತಿ ಕಳಿಸುತ್ತಲೇ ಇತ್ತು. ಈಗ ಇದು ಕಾರ‍್ಯನಿರ್ವಹಣೆ ನಿಲ್ಲಿಸಿದೆ. ಇಂಧನ ಅಥವಾ ಬ್ಯಾಟರಿ ಖಾಲಿ ಆಗಿರುವ ಕಾರಣ ಹೀಗಾಗಿದೆಯೇ ಅಥವಾ ಅಲ್ಲಿ ಸಂಭವಿಸಿದ ಗ್ರಹಣದ (Solar eclipse) ಕಾರಣದಿಂದ ಹೀಗಾಗಿಯೇ ಎಂಬುದನ್ನು ಇಸ್ರೋ ಪರಿಶೀಲಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಗ್ರಹಣದಿಂದಾಗಿ ಸೇವೆ ಅಂತ್ಯ?

ಈ ಬಗ್ಗೆ ಮಾತನಾಡಿದ ಹಿರಿಯ ವಿಜ್ಞಾನಿಯೊಬ್ಬರು 2022ರ ಏಪ್ರಿಲ್‌ನಲ್ಲಿ ಮಂಗಳದಲ್ಲಿ ಸುದೀರ್ಘ ಅವಧಿಯ ಗ್ರಹಣ ಸಂಭವಿಸಿತ್ತು. ವ್ಯೋಮನೌಕೆಯನ್ನು (spaceship) ಗ್ರಹಣ ನಿರೋಧಕ ಮಾಡಲಾಗಿತ್ತು. ಹೀಗಾಗಿ ಹಿಂದಿನ ಗ್ರಹಣಗಳನ್ನು ಕೂಡ ಮಾಮ್‌ ಮೆಟ್ಟಿನಿಂತಿತ್ತು. ಆದರೆ ಈಗ ಗ್ರಹಣದ ಛಾಯೆಯಿಂದ ಹೊರಬರುತ್ತಲೇ ಅದರ ಇಂಧನ ಖಾಲಿ ಆದಂತಿದೆ. ಇನ್ನೊಂದು ಕಾರಣ ಹೇಳಬಹುದಾದರೆ ಗ್ರಹಣದಿಂದ ಹೊರಬರುವಾಗ ಆ್ಯಂಟೆನಾ ಸಂಪರ್ಕ ವ್ಯತ್ಯಯವಾಗಿ ಅದರ ದಿಕ್ಕು ಬದಲಾಗಿರಬಹುದು’ ಎಂದಿದ್ದಾರೆ.

450 ಕೋಟಿ ಮಿಶನ್‌

2013ರಲ್ಲಿ 450 ಕೋಟಿ ರು. ವೆಚ್ಚದಲ್ಲಿ ಭಾರತ ಮಂಗಳಕ್ಕೆ ವ್ಯೋಮನೌಕೆ ಹಾರಿ ಬಿಟ್ಟು, ಮಂಗಳಯಾನ ಕೈಗೊಂಡ ದೇಶಗಳ ಸಾಲಿಗೆ ಸೇರಿತ್ತು. ತನ್ನ ಮೊದಲ ಯತ್ನದಲ್ಲೇ ಯಶಸ್ವಿಯಾಗಿತ್ತು.
 

Follow Us:
Download App:
  • android
  • ios