ಅಪ್ಪಟ ಹಳ್ಳಿ ಪ್ರತಿಭೆ, ಈ ಪೋರಿಯ ಇಂಗ್ಲೀಷ್ ಆಕ್ಸೆಂಟ್‌ಗೆ ಬೆರಗಾಗದವರಿಲ್ಲ...
ಈಕೆಯ ಹೆಸರು ಜಾನ್ವಿ ಪವಾರ್. ನೋಡಲು ಅಂತಹ ಅಮೋಘ ಸುಂದರಿ ಅಲ್ಲದ ಈಕೆ ಇಂಡಿಯಾದ ವಂಡರ್ ಗರ್ಲ್, ತನ್ನ ಸ್ವಂತ ಪ್ರತಿಭೆಯಿಂದಲೇ ಗುರುತಿಸಿಕೊಂಡ ಪ್ರತಿಭೆಯನ್ನೇ ಸೌಂದರ್ಯ, ಆಕರ್ಷಣೆಯಾಗಿಸಿಕೊಂಡಾಕೆ.
ತಮ್ಮ ಪ್ರತಿಭೆಗಳನ್ನು ಅಭಿವ್ಯಕ್ತಪಡಿಸಲು ಸಾಮಾಜಿಕ ಜಾಲತಾಣಗಳು ಅದ್ಭುತ ತಾಣಗಳು. ಇಂದು ಸಾಮಾಜಿಕ ಜಾಲತಾಣಗಳ ಪ್ರಭಾವ ಎಷ್ಟಿದೆ ಎಂದರೆ ಅದರ ಮೂಲಕವೇ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತದೆ. ತಮಗೆ ತಾವೇ ಪ್ರಮೋಷನ್ ನೀಡಲು ಇನ್ಸ್ಟಾಗ್ರಾಮ್, ಯೂಟ್ಯೂಬ್‌ಗಳು ಅದ್ಭುತ ತಾಣಗಳು. ಪ್ರತಿಭೆ ಹಾಗೂ ಆತ್ಮವಿಶ್ವಾಸವಿದ್ದರೆ ಎಂತಹ ಸಾಧನೆಯನ್ನು ಬೇಕಾದರೂ ಮಾಡಬಹುದು ಎಂಬುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಬರುವ ಹಲವು ಕೆಲವು ಸ್ಪೂರ್ತಿದಾಯಕ ನೈಜ ಕತೆಗಳೇ ಸಾಕ್ಷಿ. ಈಗ ನಾವು ಹೇಳ ಹೊರಟಿರುವುದು ಒಬ್ಬ ಅಪ್ಪಟ ಹಳ್ಳಿಯ ಹೆಣ್ಣು ಮಗಳಂತೆ ಕಾಣುವ ಬಾಲಕಿಯ ಅಗಾಧ ಇಂಗ್ಲೀಷ್ ಭಾಷಾ ಪಾಂಡಿತ್ಯದ ಬಗ್ಗೆ.
ಈಕೆಯ ಹೆಸರು ಜಾನ್ವಿ ಪವಾರ್. ನೋಡಲು ಅಂತಹ ಅಮೋಘ ಸುಂದರಿ ಅಲ್ಲದ ಈಕೆ ಇಂಡಿಯಾದ ವಂಡರ್ ಗರ್ಲ್, ತನ್ನ ಸ್ವಂತ ಪ್ರತಿಭೆಯಿಂದಲೇ ಗುರುತಿಸಿಕೊಂಡ ಪ್ರತಿಭೆಯನ್ನೇ ಸೌಂದರ್ಯ, ಆಕರ್ಷಣೆಯಾಗಿಸಿಕೊಂಡಾಕೆ. ಈ ಜಾನ್ವಿ ಪವಾರ್ ಇನ್ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೂ ಫಾಲೋ ಮಾಡುತ್ತಿಲ್ಲ. ಆದರೆ ಈಕೆಯನ್ನು 67,003 ಮಂದಿ ಫಾಲೋ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಆಕೆಯ ಫಾರಿನ್ ಆಕ್ಸೆಂಟ್ ಇಂಗ್ಲೀಷ್ ಪ್ರತಿಭೆ. ಅರಳು ಹುರಿದಂತೆ ಇಂಗ್ಲೀಷ್‌ನಲ್ಲಿ ಈಕೆ ಮಾತನಾಡುವುದನ್ನು ನೋಡಿದರೆ ಈಕೆ ಥೇಮ್ಸ್ ನದಿ ನೀರೇ ಕುಡಿದಿರಬೇಕು ಎಂದು ಒಂದು ಕ್ಷಣ ಎಂಥವರಿಗೂ ಅನಿಸದಿರದು. ಅಲ್ಲದೇ ಸಾಮಾನ್ಯ ಜನರು ಇವಳ ಇಂಗ್ಲೀಷ್‌ನ್ನು ಅರ್ಥ ಮಾಡಿಕೊಳ್ಳುವಷ್ಟು ಕಷ್ಟಕರವಾಗಿ ಇವಳು ಫಾರಿನ್ ಆಕ್ಸೆಂಟ್‌ನಲ್ಲಿ(ಉಚ್ಛಾರ) ಮಾತನಾಡುತ್ತಾಳೆ.
ಟೇಬಲ್ ಇಲ್ಲದಿದ್ದರೇನಂತೆ... ಇಟ್ಟಿಗೆ ಜೋಡಿಸಿ ಸ್ನೂಕರ್ ಆಡುವ ಪುಟ್ಟ ಬಾಲಕ.... ವಿಡಿಯೋ ವೈರಲ್
ಜೊತೆಗೆ ಈ ರೀತಿ ತಾನು ಇಂಗ್ಲೀಷ್ ಮಾತನಾಡಲು ಕಲಿತಿದ್ದು ಹೇಗೆ? ಎಂಬುದರ ಬಗ್ಗೆ ಇನ್ಸ್ಟಾಗ್ರಾಮ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್ ಫೇಸ್‌ಬುಕ್‌ನಲ್ಲಿ ಈಕೆ ತರಬೇತಿ ಕೂಡ ನೀಡುತ್ತಾಳೆ. ಇನ್ಸ್ಟಾಗ್ರಾಮ್‌ನಲ್ಲಿ ಈಜಾಡುತ್ತಿರುವವರಿಗೆ(Scroling) ಮಾಮೂಲಿ ವಿಡಿಯೋದಂತೆ ಕಾಣಿಸುವ ಈಕೆ, ಇಂಗ್ಲೆಂಡ್ ಕುವರಿಯಂತೆ ನಿರರ್ಗಳವಾಗಿ ಇಂಗ್ಲೀಷ್ ಮಾತನಾಡುತ್ತಿದ್ದರೆ ಈಕೆಯ ಮುಖಕ್ಕೂ ಹಾವಭಾವ ವೇಷಭೂಷಣಕ್ಕೂ, ಆ ಇಂಗ್ಲೀಷ್ ಭಾಷೆಗೂ ಲಿಂಕ್ ಆಗದೇ ಕೆಲ ಕಾಲ ಆಡಿಯೋ ಒರಿಜಿನಲ್ ಇರಬಹುದೇ ಎಂದು ಜನ ಗೊಂದಲಕ್ಕೊಳಗಾಗಿ ನೋಡಿ, ಅದು ಆಕೆಯದ್ದೇ ನಿಜವಾದ ಆಡಿಯೋ ಎಂದು ತಿಳಿದ ನಂತರ ಆಕೆಯ ಈ ಅದ್ಭುತ ಪ್ರತಿಭೆಗೆ ಬೆರಗಾಗಿ ಹೋಗುತ್ತಿದ್ದಾರೆ. ಅಲ್ಲದೇ ಈಕೆಯ ಪ್ರತಿಭೆ ನೋಡಿ ಗೂಗಲ್ ಮಾಡಿದವರಿಗೆ ಅಚ್ಚರಿ ಕಾದಿತ್ತು.
ಹಳ್ಳಿ ಪ್ರತಿಭೆ ಪಿ.ಟಿ. ಉಷಾರನ್ನು ಬಂಗಾರದ ಹುಡುಗಿಯಾಗಿ ರೂಪಿಸಿದ್ದ ಕೋಚ್ ನಂಬಿಯರ್ ಇನ್ನಿಲ್ಲ
ಜಾನ್ವಿ ಪನ್ವಾರ್ ಯಾರು?
ಈ ಜಾನ್ವಿ ಪನ್ವಾರ್. ಹರಿಯಾಣದ ಸಮಲ್ಖಾ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದ ಆಕೆ ತನ್ನ 11ನೇ ವಯಸ್ಸಿನಲ್ಲಿಯೇ 'ಭಾರತದ ಅದ್ಭುತ ಹುಡುಗಿ' (Indias wonder Girl) ಎಂಬ ಬಿರುದು ಪಡೆದಿದ್ದಾರೆ. ಅವರು 9 ವಿದೇಶಿ ಆಕ್ಸೆಂಟ್‌ಗಳಲ್ಲಿ ಮಾತನಾಡಬಲ್ಲ ಈಕೆ ಪ್ರಸ್ತುತ ತನ್ನ 15ರ ಹರೆಯದಲ್ಲಿದ್ದು, ಸತ್ಯವತಿ ದೆಹಲಿ ವಿಶ್ವವಿದ್ಯಾಲಯದಿಂದ ಕಲಾ ವಿಷಯದಲ್ಲಿ ಅಂತಿಮ ವರ್ಷ ಪದವಿ ಪಡೆಯುತ್ತಿದ್ದಾರೆ.
ಮುಖ ನೋಡಿ ಮಣೆ ಹಾಕಬಾರದು ಎಂಬ ಗಾದೆ ಮಾತಿದೆ. ಅಂದರೆ ಮುಖ ನೋಡಿದ ಕೂಡಲೇ ನಮಗೆ ವ್ಯಕ್ತಿಯ ಗುಣಗಳು ತಿಳಿಯಲು ಸಾಧ್ಯವಿಲ್ಲ. ಚಂದದ ಮೊಗದ ಹಿಂದೆ ಕೌರ್ಯ ತುಂಬಿದ ಮನಸ್ಸಿರಬಹುದು. ಹಾಗೆಯೇ ಕುರೂಪ ಮುಖದ ಹಿಂದೆ ಹಾಲಿನಂತಹ ಮನಸ್ಸಿರಬಹುದು. ಆದರೆ ಮುನುಷ್ಯ ನೋಡಿದ ತಕ್ಷಣ ಬೆರಗಾಗುವುದು ಸೌಂದರ್ಯಕ್ಕೆ ಎಂಬುದೇ ಸತ್ಯವೇ ಆದರೂ. ಉತ್ತಮ ಗುಣ ಹಾಗೂ ಪ್ರತಿಭೆಗಳು, ಒಳ್ಳೆಯತನ ನಮ್ಮನ್ನು ಕೊನೆತನಕ ಕಾಪಾಡುವುದು. ಆ ಗುಣ ಪ್ರತಿಭೆಗಳಿಂದಲೇ ಅದ್ಭುತವಾಗಿ ಮಿಂಚುವ ಮೂಲಕ ಇನ್ನು ಅನೇಕರಿಗೆ ಸ್ಪೂರ್ತಿಯ ಸೆಲೆ ಆಗಬಹುದು ಎಂಬುದಕ್ಕೆ ಈ ವಿದ್ಯಾರ್ಥಿನಿಯೇ ಸಾಕ್ಷಿ.