userpic
user icon
0 Min read

ವಾರ್ಷಿಕ 1.3 ಕೋಟಿ ಗಳಿಸುವ ಅವಕಾಶ, ಯಾವ ಕೋರ್ಸ್ ಮಾಡಿದ್ರೆ ಸಿಗುತ್ತೆ ಇಷ್ಟೊಂದು ಸಂಬಳ ?

which course will help to earn 1.33 crore annually ?
Supply Chain Management

Synopsis

ಒಳ್ಳೆ ಕಂಪನಿಯಲ್ಲಿ ಕೆಲ್ಸ ಸಿಗ್ಬೇಕು, ಕೈ ತುಂಬಾ ಸಂಬಳ ಬರ್ಬೇಕು ಅಂದ್ರೆ ಮಾಡುವ ಕೋರ್ಸ್ ಬಗ್ಗೆ ಗಮನ ನೀಡ್ಬೇಕು. ಉತ್ತಮ ಕೋರ್ಸ್ ನಿಮ್ಮನ್ನು ವರ್ಷದಲ್ಲೇ ಕೋಟ್ಯಾಧಿಪತಿ ಮಾಡುತ್ತೆ. 
 

ಓದು ಮುಗಿತಿದ್ದಂತೆ ಒಳ್ಳೆ ಸಂಬಳ ಸಿಗೋ ಕೆಲ್ಸ ಬೇಕು ಅಂತ ಪ್ರತಿಯೊಬ್ಬರು ಬಯಸ್ತಾರೆ. ನೀವು ಯಾವ ಕ್ಷೇತ್ರದಲ್ಲಿ ಓದು ಮುಗಿಸಿದ್ದೀರಿ, ನಿಮ್ಮ ಟ್ಯಾಲೆಂಟ್ ಏನು ಅನ್ನೋದು ಇಲ್ಲಿ ಮುಖ್ಯವಾಗುತ್ತೆ. ಒಳ್ಳೆ ಶಿಕ್ಷಣ, ಶಿಕ್ಷಣ ಸಂಸ್ಥೆ ಕೂಡ ಮ್ಯಾಟರ್ ಆಗುತ್ತೆ. ಅಮೆರಿಕವನ್ನು ಉನ್ನತ ಶಿಕ್ಷಣದ ಕೇಂದ್ರ ಎಂದೇ ಕರೆಯಲಾಗುತ್ತೆ.  ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಅಧ್ಯಯನಕ್ಕೆ ಇದು ಅತ್ಯುತ್ತಮ ಸ್ಥಳ. ಇಲ್ಲಿ ಅನೇಕ ರೀತಿಯ ಕೋರ್ಸ್ಗಳನ್ನು ಅಧ್ಯಯನ ಮಾಡೋ ಅವಕಾಶ ಇದೆ.  ಅದ್ರಲ್ಲಿ ಸಪ್ಲೈ ಚೈನ್ ಮ್ಯಾನೇಜ್ಮೆಂಟ್ (Supply Chain Management) ಕೂಡ ಒಂದು.  ಪದವಿ ಪಡೆದ ತಕ್ಷಣ ನಿಮಗೆ ಕೆಲ್ಸ ಸಿಗೋದಲ್ದೆ ಆರಂಭದಲ್ಲಿಯೇ ಲಕ್ಷಾಂತರ ರೂಪಾಯಿ ಸಂಬಳ ಎಣಿಸ್ಬಹುದು.  ನೀವೂ ಒಳ್ಳೆ ಕೋರ್ಸ್ (course) ಹುಡುಕ್ತಿದ್ದರೆ ಇದನ್ನು ಟ್ರೈ ಮಾಡ್ಬಹುದು. ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ಕೋರ್ಸ್ ವಿವರ ಇಲ್ಲಿದೆ. 

ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ಎಂದ್ರೇನು? : ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ಕೋರ್ಸ್ ನಲ್ಲಿ, ಕಂಪನಿ ಸರಕು, ಸೇವೆ ಮತ್ತು ಮಾಹಿತಿಯನ್ನು ಹೇಗೆ ಸರಿಯಾಗಿ ನಿರ್ವಹಿಸಬೇಕು ಎಂಬುದನ್ನು ಕಲಿಸುತ್ತೆ. ಸರಕುಗಳನ್ನು ತಯಾರಿಸಲು ಬೇಕಾದ ಕಚ್ಚಾ ವಸ್ತುಗಳಿಂದ ಹಿಡಿದು ಗ್ರಾಹಕರಿಗೆ ಉತ್ಪನ್ನ ತಲುಪಿಸುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ಇದು ಒಳಗೊಂಡಿದೆ. ಈ ಕೋರ್ಸ್ನಲ್ಲಿ, ನೀವು ಖರೀದಿ, ಉತ್ಪಾದನೆ, ಲಾಜಿಸ್ಟಿಕ್ಸ್, ದಾಸ್ತಾನು ನಿರ್ವಹಣೆ ಮತ್ತು ವಿತರಣೆಯಂತಹ ಪ್ರಮುಖ ವಿಷಯಗಳ ಬಗ್ಗೆ ಕಲಿತಿರಿ. ಕಂಪನಿ ಏಳ್ಗೆಗೆ ಎಲ್ಲಿ ಸುಧಾರಣೆ ಆಗ್ಬೇಕು, ವೆಚ್ಚವನ್ನು ಹೇಗೆ ಕಡಿಮೆ ಮಾಡ್ಬೇಕು, ಕೆಲಸವನ್ನು ಹೇಗೆ ಸುಲಭಗೊಳಿಸ್ಬೇಕು  ಗ್ರಾಹಕರನ್ನು ಹೇಗೆ ಸಂತೋಷವಾಗಿಡ್ಬೇಕು ಎಂಬೆಲ್ಲ ಮಾಹಿತಿ ನಿಮಗೆ ಕೋರ್ಸ್ ನಲ್ಲಿ ಸಿಗುತ್ತೆ. 

ಹೇಗೆ ಸಿಗುತ್ತೆ ಕೋರ್ಸ್ ಗೆ ಎಂಟ್ರಿ? :  ಪ್ರವೇಶ ನಿಯಮಗಳು ವಿಶ್ವವಿದ್ಯಾಲಯಗಳಿಂದ ವಿಶ್ವವಿದ್ಯಾಲಯಗಳಿಗೆ ಬದಲಾಗುತ್ತವೆ. ಆದ್ರೆ  ಸಾಮಾನ್ಯವಾಗಿ ಎ ಲೆವೆಲ್ಗಳು, ಬಿಟಿಇಸಿಗಳು (ವಿಸ್ತೃತ ಡಿಪ್ಲೊಮಾಗಳು) ಅಥವಾ ಅಂತರರಾಷ್ಟ್ರೀಯ ಬ್ಯಾಕಲೌರಿಯೇಟ್ನಲ್ಲಿ ಉತ್ತಮ ಅಂಕಗಳು ಅಗತ್ಯ. ಸ್ನಾತಕೋತ್ತರ ಪದವಿಗಾಗಿ, ಎಂಜಿನಿಯರಿಂಗ್, ಗಣಿತ, ವಿಜ್ಞಾನ ಅಥವಾ ಸಂಬಂಧಿತ ವಿಷಯಗಳಲ್ಲಿ ಪದವಿ (ಯುಜಿ)  ಅಗತ್ಯವಿದೆ. ಪದವಿ ಇಲ್ಲದಿದ್ದರೂ ಉತ್ತಮ ಅನುಭವ ಅಗತ್ಯ. ಇಂಗ್ಲೀಷ್ ಭಾಷೆಯ ಮೇಲೆ ಹಿಡಿತ ಇರಬೇಕು. ನೀವು ಬೇರೆ ಕೋರ್ಸ್, ಪದವಿ ಮುಗಿಸಿದ್ದದೂ ಇದಕ್ಕೆ ಪ್ರಯತ್ನಿಸಬಹುದು. 

ವೃತ್ತಿ ಆಯ್ಕೆಗಳು ಯಾವುವು? : ಕೋರ್ಸ್ ಮುಗಿದ ಮೇಲೆ ಹಲವು ವಿಭಿನ್ನ ಮಾರ್ಗಗಳಲ್ಲಿ ನೀವು ವೃತ್ತಿ ಆಯ್ಕೆ ಮಾಡಿಕೊಳ್ಬಹುದು.  ನಿಮ್ಮ ಪಾತ್ರ ಮತ್ತು ಕಾರ್ಯಗಳು ಉದ್ಯಮವನ್ನು ಅವಲಂಬಿಸಿ ಬದಲಾಗಬಹುದು. ಪರ್ಚೇಸಿಂಗ್ ಏಜೆಂಟ್,  ಪರ್ಚೇಸಿಂಗ್ ಮ್ಯಾನೇಜರ್,  ಕಾರ್ಯಾಚರಣೆ ವ್ಯವಸ್ಥಾಪಕ, ಲಾಜಿಸ್ಟಿಕ್ಸ್ ವಿಶ್ಲೇಷಕ, ಲಾಜಿಸ್ಟಿಕ್ಸ್ ಮ್ಯಾನೇಜರ್,ವಿತರಣಾ ವ್ಯವಸ್ಥಾಪಕ ಮತ್ತು ಪೂರೈಕೆ ಸರಪಳಿ ವ್ಯವಸ್ಥಾಪಕ ಸೇರಿದಂತೆ ನಾನಾ ಹುದ್ದೆಯಲ್ಲಿ ಕೆಲಸ ಮಾಡುವ ಅವಕಾಶ ನಿಮಗೆ ಸಿಗಲಿದೆ. 

ಅಮೆರಿಕದಲ್ಲಿ ಎಷ್ಟು ಸಂಬಳ ಸಿಗುತ್ತದೆ? :  ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ಕೋರ್ಸ್ ಮುಗಿಸಿದ್ರೆ  ಅಮೆರಿಖಾದಲ್ಲಿಯೇ ಉತ್ತಮ ಕೆಲಸ ಗಿಟ್ಟಿಸಿಕೊಳ್ಳಬಹುದು. ಆರಂಭದಲ್ಲಿಯೇ ನಿಮ್ಮ ಸರಾಸರಿ ವೇತನ  ವಾರ್ಷಿಕ ಸುಮಾರು  1,00,000 ಡಾಲರ್ ಅಂದ್ರೆ ಸುಮಾರು  85 ಲಕ್ಷ ರೂಪಾಯಿ. ಉದ್ಯೋಗಿಗೆ ಕಂಪನಿಗಳು ಹುದ್ದೆ ಹಾಗೂ ಅರ್ಹತೆಗೆ ತಕ್ಕಂತೆ 63,674 ಡಾಲರ್ ನಿಂದ 1, 58,093 ಡಾಲರ್ ಅಂದ್ರೆ  ಸುಮಾರು  53 ಲಕ್ಷದಿಂದ  1.33 ಕೋಟಿ ವರೆಗೆ ಸಂಬಳ ನೀಡಲು ಸಿದ್ಧವಿದೆ. 

Download App

Latest Videos