ಈ ಪ್ರಸ್ತಾವನೆ ಕುರಿತು ಸಕಾರಾತ್ಮಕ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಶೀಘ್ರದಲ್ಲೇ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿದೆ.

• ಲಿಂಗರಾಜು ಕೋರಾ

ಬೆಂಗಳೂರು (ಜು.29): ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿಯೂ ಸೇರಿ ಎಲ್ಲಾ ಶೈಕ್ಷಣಿಕ ಪ್ರವೇಶ ಪರೀಕ್ಷೆಗಳು ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆ, ಪಾರದರ್ಶಕತೆ ಹೆಚ್ಚಿಸುವ ದೃಷ್ಟಿಯಿಂದ ಸಂಪೂರ್ಣ ವೆಬ್‌ಕಾಸ್ಟಿಂಗ್ ಕಣ್ಣಾವಲು ಮತ್ತು ಮುಖ ಗುರುತಿಸುವಿಕೆ (ಫೇಸ್ ರೆಕಗ್ರೇಷನ್) ವ್ಯವಸ್ಥೆ ಮುಂಬರುವ ದಿನಗಳಲ್ಲಿ ಜಾರಿಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. 

ಈಗಾಗಲೇ ಇದೇ ಜು.13 ಮತ್ತು 14ರಂದು ನಡೆಸಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಪ್ರಾಯೋಗಿಕವಾಗಿ ಈ ವೆಬ್ ಕಾಸ್ಟಿಂಗ್ ಮತ್ತು ಫೇಸ್ ರೆಕಗ್ರೇಷನ್ ವ್ಯವಸ್ಥೆ ಜಾರಿಗೊಳಿಸಿ ಪ್ರಾಧಿಕಾರ ಯಶಸ್ವಿಯಾಗಿದೆ. ಹಾಗಾಗಿ ಇದನ್ನು ಮುಂಬರುವ ದಿನಗಳಲ್ಲಿ ಎಂಜಿನಿಯರಿಂಗ್, ಪಶು ವೈದ್ಯಕೀಯ, ಕೃಷಿ ವಿಜ್ಞಾನ ಸೇರಿ ಇತರೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಪ್ರತೀ ವರ್ಷ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯೂ (ಸಿಇಟಿ) ಸೇರಿ ಎಲ್ಲ ಶೈಕ್ಷಣಿಕ ಪ್ರವೇಶ ಪರೀಕ್ಷೆಗಳು ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿಗೆ ನಡೆಸುವ ಎಲ್ಲಾ ಪರೀಕ್ಷೆಗಳಿಗೂ ಜಾರಿಗೆ ಒಪ್ಪಿಗೆ ನೀಡುವಂತೆ ಪ್ರಾಧಿಕಾರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 

ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣಗಳಲ್ಲಿ ಕರ್ನಾಟಕ ಮೆಡಿಕಲ್‌ ಕೌನ್ಸಿಲ್‌ ವರದಿ ನೀಡಲು ವಿಳಂಬ

ಈ ಪ್ರಸ್ತಾವನೆ ಕುರಿತು ಸಕಾರಾತ್ಮಕ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಶೀಘ್ರದಲ್ಲೇ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿದೆ. ಅಕ್ರಮಗಳನ್ನು ತಡೆದುಪರೀಕ್ಷಾಪಾರದರ್ಶಕತೆ ಹೆಚ್ಚಿಸುವ ದೃಷ್ಟಿಯಿಂದ ಸ್ವತಃ ಸಚಿವರು ಈ 2 ವ್ಯವಸ್ಥೆಗಳ ಜಾರಿಗೆ ಆಸಕ್ತಿ ತೋರಿದ್ದಾರೆ. ಅಂದಿನ ಸಭೆಯಲ್ಲಿ ಬಹುತೇಕ ಒಂದು ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಸಚಿವರ ಮೆಚ್ಚುಗೆ: ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ಕೆಯುಡ್‌ಲ್ಯುಎಸ್‌ಯುಬಿ ನೇಮಕಾತಿ ಪರೀಕ್ಷೆಗಳಲ್ಲಿ ಪ್ರಾಯೋಗಿಕವಾಗಿ ವೆಬ್ ಕಾಸ್ಟಿಂಗ್, ಫೇಸ್‌ರೆಕಗ್ನಿಷನ್ ವ್ಯವಸ್ಥೆ ಜಾರಿ ಗೊಳಿಸಿದ್ದನ್ನು ಖುದ್ದು ಕೆಇಎ ಕಚೇರಿಯಲ್ಲಿ ಕೂತು ವೀಕಣೆ ನಡೆಸಿದ ಸಚಿವ ಡಾ.ಸುಧಾ ಕರ್, ಕೆಲ ಕೇಂದ್ರಗಳಲ್ಲಿ ಕೊಠಡಿ ಮೇಲ್ವಿಚಾ ರಕರಿಂದ ಆದ ಲೋಪಗಳನ್ನು ಗುರುತಿಸಿ ತಕ್ಷಣಆ ಕೇಂದ್ರದ ಮುಖ್ಯಸ್ಥರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು. ಕೆಲ ಮೇಲ್ವಿಚಾರಕರ ವಿರುದ್ಧ ಕ್ರಮಕ್ಕೆ ಡಿಸಿಗಳಿಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಅವರು ಪತ್ರ ಬರೆದಿದ್ದರು.

ಹಸ್ತಗುರುತು ಸಂಗ್ರಹಕ್ಕೂ ಪ್ರಸ್ತಾವನೆ?: ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳ ವೇಳೆ ಅಭ್ಯರ್ಥಿಗಳು ಪರೀಕ್ಷಾಕೇಂದ್ರ ಪ್ರವೇಶಿಸುವ ವೇಳೆ ಆಧಾರ್ ಮಾದರಿಯಲ್ಲಿ ಅವರ ಎರಡೂ ಹಸ್ತಗಳ ಗುರುತು ಸಂಗ್ರ ಹಿಸುವ ವ್ಯವಸ್ಥೆ ಜಾರಿಗೂ ಕೆಇಎ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅರ್ಜಿ ಸಲ್ಲಿಸಿದ ವ್ಯಕ್ತಿ ಬದಲು ಬೇರೆಯವರು ಪರೀಕ್ಷೆ ಬರೆಯದಂತೆ ತಡೆಯಲು ಫೇಸ್‌ರೆಕಸ್ಟೇಷನ್‌ ವ್ಯವಸ್ಥೆ ಮಾದರಿಯಲ್ಲಿ ಪರೀಕ್ಷೆ ಮುಗಿದು ಅಂತಿಮ ಆಯ್ಕೆ ಪಟ್ಟಿ ಪ್ರಕಟವಾದಾಗ ಅಸಲಿ ಅಭ್ಯರ್ಥಿ ಯೇ ನೇಮಕಗೊಂಡಿದ್ದಾನೆಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶಕ್ಕೆ ಹಸ್ತ ಗಳ ಗುರುತು ಸಂಗ್ರಹ ವ್ಯವಸ್ಥೆ ಜಾರಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.

ಸದನದಲ್ಲಿ ಶ್ರೀಲಂಕಾ ಮೊಬೈಲ್‌ ಪುರಾಣ: ಸೈಬರ್‌ ಪೊಲೀಸ್‌ಗೆ ಸೈಬರ್‌ ವಂಚಕನ ಗಾಳ ಯತ್ನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಎಲ್ಲ ಪರೀಕ್ಷೆಗಳಿಗೂ ವೆಬ್‌ಕಾಸ್ಟಿಂಗ್, ಫೇಸ್‌ರೆಕಗ್ನಿಷನ್ ಹಾಗೂ ಹಸ್ತ ಗುರುತು ಸಂಗ್ರಹದ ವ್ಯವಸ್ಥೆ ಜಾರಿಗೆ ಅನುಮತಿ ನೀಡು ವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿ ಅಂತಿಮ ನಿರ್ಧಾರ ಆಗಬೇಕಿದೆ. 
-ಎಚ್.ಪ್ರಸನ್ನ ಕೆಎಇ ಕಾರ್ಯನಿರ್ವಾಹಕ ನಿರ್ದೇಶಕ