ಬೆಂಗಳೂರು: ಸೆಂಟ್ ಜೋಸೆಫ್ ಬಾಲಕರ ಶಾಲಾ ಆವರಣದಲ್ಲಿ ಯುದ್ಧ ಸ್ಮಾರಕ

*  ಸೆಂಟ್ ಜೋಸೆಫ್ ಶಾಲೆಯ‌ ಹಳೆಯ ವಿದ್ಯಾರ್ಥಿಗಳ ಸಂಘದೊಂದಿಗೆ ಕಾರ್ಯಕ್ರಮ ಆಯೋಜನೆ
*  ಫ್ಲೈಟ್ ಲೆಫ್ಟಿನೆಂಟ್ ಬಬುಲ್ ಗುಹಾ ಹೆಸರು ಸೇರ್ಪಡೆ
*  ಹುತ್ಮಾತ್ಮರಾದ ಜೋಸೆಫ್ ವಿದ್ಯಾರ್ಥಿಗಳ ಹೆಸರನ್ನ ಯುದ್ಧ ಸ್ಮಾರಕಕ್ಕೆ ಬರೆಯಲಾಗಿದೆ 
 

War Memorial at St. Joseph Boys School Campus in Bengaluru grg

ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು(ಜು.01): ಬ್ರಿಟಿಷರ ಕಾಲದಲ್ಲಿ ಸ್ಥಾಪನೆಯಾದ ಸೆಂಟ್ ಜೋಸೆಫ್ ಬಾಲಕರ ಹೈಸ್ಕೂಲ್ ಶಾಲೆಗೆ 165 ವರ್ಷಗಳ ಇತಿಹಾಸ. ಈ ಶಾಲೆಯಲ್ಲಿ ಇದುವರೆಗೂ ಲಕ್ಷಾಂತರ ವಿದ್ಯಾರ್ಥಿಗಳು ಕಲಿತು ಹೋಗಿದ್ದಾರೆ. ಆಲ್ಲದೆ ದೇಶದ ಅತ್ಯುನ್ನತ ಸೇವೆಯಾದ ಸೇನೆಯಲ್ಲೂ ಕೂಡ ಶಾಲೆಯ ವಿದ್ಯಾರ್ಥಿಗಳು ಕೆಲಸ ಮಾಡಿ ಇತಿಹಾಸದ ಪುಟ ಸೇರಿದ್ದಾರೆ. ಇದರ ಭಾಗವಾಗಿ ಮ್ಯೂಸಿಯಂ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಬಾಲಕರ ಹೈಸ್ಕೂಲ್ ಆವರಣದಲ್ಲಿ ಯುದ್ಧ ಸ್ಮಾರಕ ಸ್ಥಾಪಿಸಲಾಗಿದ್ದು, ಸೇನೆಯಲ್ಲಿ ಕೆಲಸ ಮಾಡಿದ ಜೋಸೆಫ್ ವಿದ್ಯಾರ್ಥಿ ಗಳ ಹೆಸರನ್ನು ಯುದ್ಧ ಸ್ಮಾರಕಕ್ಕೆ ಸೇರಿಸಲಾಗುತ್ತೆ.‌ಇದು ಶಾಲೆಯಲ್ಲಿ ಕಲಿತು ಹೋದ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹೆಸರನ್ನ ಯುದ್ಧ ಸ್ಮಾರಕದಲ್ಲಿ‌ ಕಾಣಬಹುದಾಗಿದೆ.

ಸೆಂಟ್ ಜೋಸೆಫ್ ಯುದ್ಧ ಸ್ಮಾರಕಕ್ಕೆ ಇಬ್ಬರು ಸೇನಾನಿಗಳ ಹೆಸರು ಸೇರ್ಪಡೆ

ಸೆಂಟ್ ಜೋಸೆಫ್ ಬಾಲಕರ ಹೈಸ್ಕೂಲ್ ‌ನಲ್ಲಿ ಓದಿದ ವಿದ್ಯಾರ್ಥಿಗಳು. ‌1965 ಹಾಗೂ1971 ರ ಯುದ್ಧದಲ್ಲಿ ಭಾಗವಹಿಸಿ ಭಾರತೀಯ ಏರ್ ಪೋರ್ಸ್ ನಲ್ಲಿ ದೇಶ ಸೇವೆ ಮಾಡಿದ ಜೋಸೆಫ್ ವಿದ್ಯಾರ್ಥಿಗಳು.. ಇಂದು ಅವರ ಸ್ಮರಣಾರ್ಥ ಅಂಗವಾಗಿ‌ ಕಾಲೇಜಿನ ಆವರಣದಲ್ಲಿ ಸ್ಥಾಪನೆ ಮಾಡಿರುವ ಯುದ್ಧ ಸ್ಮಾರಕಕ್ಕೆ ಇವರಿಬ್ಬರ ಹೆಸರನ್ನು ಸೇರಿಸಿ ಗೌರವ ಸೂಚಿಸಲಾಯ್ತು..

ಇಂದು(ಶುಕ್ರವಾರ) ನಗರದ ಜೋಸೆಫ್ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಸೆಂಟ್ ಜೋಸೆಫ್ ಬಾಲಕರ ಹೈಸ್ಕೂಲ್ ಆಡಳಿತ ಮಂಡಳಿಯ ಸಹಯೋಗದೊಂದಿಗೆ ಶಾಲೆಯ ಆಡಿಟೋರಿಯಂನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಕಳೆದ ವರ್ಷ ರಾಜ್ಯದಲ್ಲಿ ಶಾಲಾ ಪ್ರವೇಶ ಕುಸಿತ

ಇನ್ನು ಇವರ ನೆನಪಿನಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಸೆಂಟ್ ಜೋಸೆಫ್ ಶಾಲಾ ಆಡಳಿತ ಮಂಡಳಿ ಸಹಯೋಗದೊಂದಿಗೆ ಶಾಲಾ ಆವರಣದಲ್ಲಿ ಯುದ್ಧ ಸ್ಮಾರಕ ಸ್ಥಾಪಿಸಿದೆ. ದೇಶ ಸೇವೆಯಲ್ಲಿ ತೊಡಗಿ ಹುತ್ಮಾತ್ಮರಾದ ಜೋಸೆಫ್ ವಿದ್ಯಾರ್ಥಿಗಳ ಹೆಸರನ್ನ ಯುದ್ಧ ಸ್ಮಾರಕಕ್ಕೆ ಬರೆಯಲಾಗಿದೆ.

ಇಂದು ಶಾಲೆಯಲ್ಲಿ ಓದಿದ ಕೃಷ್ಣಾ ಕುಮಾರ್ ಮೋಹನ್ ಹಾಗೂ ಬಬುಲ್ ಗುಹಾ ಅವರ ಹೆಸರುಗಳು ಕೂಡ ಯುದ್ಧ ಸ್ಮಾರಕಕ್ಕೆ ಸೇರಿಸಲಾಯ್ತು.‌ ಈ ವೇಳೆ ಅವರ ಭಾವ ಚಿತ್ರವುಳ್ಳ ಪೋಟೋ ಕೂಡ ಶಾಲೆಯ ಆವರಣದಲ್ಲಿ ಅನಾವರಣಗೊಳಿಸಲಾಯಿತು. ಶಾಲೆಯ ಪ್ರಾಂಶುಪಾಲರು ಮಾತನಾಡಿ ನಮ್ಮ ಶಾಲೆಗೆ ಸುಮಾರು 165 ವರ್ಷಗಳ ಇತಿಹಾಸ ಇದೆ‌.ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ದೇಶ ಸೇವೆ ಮಾಡಿರೋದು ನಿಜಕ್ಕೂ ಶಾಲೆಗೆ ದೊಡ್ಡ ಗೌರವ ಸಿಕ್ಕಿದೆ ಅಂತ ಪ್ರಾಂಶುಪಾಲರಾದ ಸುನೀಲ್ ಫರ್ನಾಂಡೀಸ್ ಹೇಳಿದ್ರು.ಇನ್ನೂ ಕಾರ್ಯಕ್ರಮದಲ್ಲಿ ಏರ್ ಪೋರ್ಸ್ ನ ಹಿರಿಯ ಅಧಿಕಾರಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
 

Latest Videos
Follow Us:
Download App:
  • android
  • ios