Asianet Suvarna News Asianet Suvarna News

ಬೆಳಗಾವಿ: ಸುಧಾರಣೆಯಾದ ವಿಟಿಯು ಶ್ರೇಯಾಂಕ..!

ಸಮಗ್ರ ಶಿಕ್ಷಣ ಸಂಸ್ಥೆಗಳ ಶ್ರೇಷ್ಠ 100ರಲ್ಲಿ ಸ್ಥಾನವನ್ನು ಪಡೆದುಕೂಳ್ಳುವ ಮೂಲಕ ರಾಷ್ಟ್ರಮಟ್ಟದಲ್ಲಿ ತನ್ನ ಶ್ರೇಯಾಂಕ ಹೆಚ್ಚಿಸಿಕೊಂಡ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 

Visvesvaraya Technological University Got 72nd Rank in NIRF Rankings 2022 grg
Author
Bengaluru, First Published Jul 17, 2022, 11:12 AM IST

ಬೆಳಗಾವಿ(ಜು.17):  ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಇಂಜಿನಿಯರಿಂಗ್‌ ವಿಭಾಗದಲ್ಲಿ 49 ನೇ ಸ್ಥಾನ, ವಿಶ್ವವಿದ್ಯಾಲಯ ವಿಭಾಗದಲ್ಲಿ 72 ನೇ ಸ್ಥಾನ, ಸಮಗ್ರ ಶಿಕ್ಷಣ ಸಂಸ್ಥೆಗಳ ಶ್ರೇಷ್ಠ 100ರಲ್ಲಿ ಸ್ಥಾನವನ್ನು ಪಡೆದುಕೂಳ್ಳುವ ಮೂಲಕ ರಾಷ್ಟ್ರಮಟ್ಟದಲ್ಲಿ ತನ್ನ ಶ್ರೇಯಾಂಕ ಹೆಚ್ಚಿಸಿಕೊಂಡಿದೆ. ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ (ಎನ್‌ಐಆರ್‌ಎಫ್‌) ಆಧರಿಸಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ 2022ರ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕದ ಏಳನೇ ಆವೃತ್ತಿಯನ್ನು ಪ್ರಕಟಿಸಿದೆ. ಇದರಲ್ಲಿ ವಿಟಿಯು ರಾಷ್ಟ್ರ ಮಟ್ಟದ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ. ಇಂಜಿನಿಯರಿಂಗ್‌ ವಿಭಾಗದಲ್ಲಿ ಕಳೆದ ಬಾರಿಗಿಂತ 7 ಸ್ಥಾನ ಮೇಲೇರಿ 49ನೇ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆ ಪಡೆದ ಸಂಸ್ಥೆಗಳಾದ ಐಐಟಿಗಳು, ಐಐಐಟಿಗಳು, ಎನ್‌ಐಟಿಗಳು ಮತ್ತು ಇತರ ಎಂಜಿನಿಯರಿಂಗ್‌ ಸಂಸ್ಥೆಗಳು ಮತ್ತು ದೇಶದ ವಿಶ್ವವಿದ್ಯಾಲಯಗಳಿವೆ.

ಸಮಗ್ರ ಶಿಕ್ಷಣ ಸಂಸ್ಥೆ ವಿಭಾಗದಲ್ಲಿ (ಓವರ್‌ ಆಲ್‌ ಕೆಟಗರಿ) ಕಳೆದ ಬಾರಿ 101-150 ಶ್ರೇಯಾಂಕ ಬ್ಯಾಂಡ್‌ನಲಿದ್ದ ವಿಟಿಯು ಈ ಬಾರಿ ತನ್ನ ಶ್ರೇಯಾಂಕದಲ್ಲಿ ಜಿಗಿತಕಂಡು ಶ್ರೇಷ್ಠ 100ರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ವಿಟಿಯು ರಾಷ್ಟ್ರದ ಶ್ರೇಷ್ಠ 100 ವಿಶ್ವವಿದ್ಯಾಲಯಗಳ (ತಾಂತ್ರಿಕ ಮತ್ತು ತಾಂತ್ರಿಕೇತರ) ವಿಭಾಗದಲ್ಲಿಯೂ 10 ಸ್ಥಾನಗಳ ಜಿಗಿತ ಕಂಡು 72ನೇ ಸ್ಥಾನವನ್ನು ಪಡೆದಿದೆ. ಅದರಂತೆ ಮ್ಯಾನೇಜ್ಮೆಂಚ್‌ ವಿಭಾಗದಲ್ಲಿಯೂ 76 ನೇ ಸ್ಥಾನದಲ್ಲಿದೆ. ವಿಟಿಯು 24 ವರ್ಷಗಳಲ್ಲಿ ಸಂಬಂಧಪಟ್ಟಎಲ್ಲ ವಿಭಾಗಗಳಲ್ಲಿ ಶ್ರೇಷ್ಠ 100ರಲ್ಲಿ ಸ್ಥಾನ ಪಡೆಯುದರ ಮುಖಾಂತರ ಅದ್ಭುತ ಸಾಧನೆ ಮಾಡಿದೆ.

NIRF Rankings 2022: ಮೈಸೂರು ವಿಶ್ವವಿದ್ಯಾನಿಲಯಕ್ಕೆ 33ನೇ ರ‍್ಯಾಂಕ್

ಇದು ವಿಟಿಯು, ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ನೀಡುತ್ತಿರುವ ಉತ್ತಮ ಗುಣಮಟ್ಟಶಿಕ್ಷಣದ ವ್ಯವಸ್ಥೆಯನ್ನು, ಯುವಪೀಳಿಗೆಯಲ್ಲಿ ಸಂಶೋಧನೆ ಮತ್ತು ನಾವೀನ್ಯತೆ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿರುವ ಹಾಗೂ ಕೈಗಾರಿಕಾ ವಲಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ಮುಖಾಮುಖಿ ಚರ್ಚೆಗೆ ಒಳಪಡಿಸಿ, ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳ ಬಗ್ಗೆ ತಿಳಿಸುವ ಕೆಲವು ಕ್ರಾಂತಿಕಾರಿ ಕ್ರಮಗಳನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸದ್ದನ್ನು ಪ್ರತಿಬಿಂಬಿಸುತ್ತದೆ.

ಈ ಎಲ್ಲ ಯೋಜನೆಗಳಿಂದ ಸತತ ಮೂರು ವರ್ಷಗಳಿಂದ ವಿಟಿಯು ಪ್ರತಿಷ್ಠಿತ ಶ್ರೇಯಾಂಕದಲ್ಲಿ ಸ್ಥಾನವನ್ನು ಪಡೆಯುತ್ತ ಬಂದಿದೆ ಹಾಗೂ ಈ ಬಾರಿ ಶ್ರೇಯಾಂಕದಲ್ಲಿ ಕಳೆದ ಬಾರಿಗಿಂತ ಜಿಗಿತಕಂಡು ಇಲ್ಲಿವರೆಗಿನ ಅತ್ಯುತ್ತಮ ಸ್ಥಾನವನ್ನೂ ಈ ಬಾರಿ ಪಡೆದುಕೊಂಡಿದೆ.

ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ (ಎನ್‌ಐಆರ್‌ಎಫ್‌) ಮುಖಾಂತರ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲ ವಿಶ್ವವಿದ್ಯಾಲಯಗಳನ್ನು ಮತ್ತು ಸಂಸ್ಥೆಗಳನ್ನು ಅಲ್ಲಿಯ ಬೋಧನೆ, ಕಲಿಕೆ, ಸಂಪನ್ಮೂಲಗಳ, ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸ, ಪದವಿ ಫಲಿತಾಂಶಗಳು, ಸಾಮಾಜಿಕ ಪಾಲ್ಗೊಳ್ಳುವಿಕೆ ಮತ್ತು ಸಂಸ್ಥೆಗಳ ಮೇಲಿರುವ ಸಾರ್ವಜನಿಕ ಗ್ರಹಿಕೆ ಈ ಅಂಶಗಳ ಬಗ್ಗೆ ಅತ್ಯಂತ ಕಠಿಣವಾದ ಮಾನದಂಡಗಳೊಂದಿಗೆ ಮೌಲ್ಯಮಾಪನ ಮಾಡಿ ಈ ಶ್ರೇಯಾಂಕಗಳನ್ನು ಕೇಂದ್ರ ಸರ್ಕಾರ ಪ್ರಕಟಿಸುತ್ತದೆ. ವಿಟಿಯು ಸಾಧನೆಗೆ ಕುಲಪತಿ ಪ್ರೊ.ಕರಿಸಿದ್ದಪ್ಪ ವಿಟಿಯು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ವಿಟಿಯು ರಜತ ಮಹೋತ್ಸವ ಸಂದರ್ಭದಲ್ಲಿನ ಈ ಸಾಧನೆ ಮತ್ತಷ್ಟುಸಂತೋಷವನ್ನು ತಂದಿದೆ ಎಂದು ಹೇಳಿದರು.

Follow Us:
Download App:
  • android
  • ios