ಮುಂದಿನ ಶತಮಾನ ಭಾರತದ್ದು: ರಾಜೀವ್‌ ಚಂದ್ರಶೇಖರ್‌

  • ಮುಂದಿನ ಶತಮಾನ ಭಾರತದ್ದು
  • ಮೊದಲ ಬಾರಿಗೆ ನಿರೀಕ್ಷೆಗಿಂತ ಶೇ.25ರಷ್ಟುಹೆಚ್ಚು ತೆರಿಗೆ ಸಂಗ್ರಹ
  • ದೇಶದ ಆರ್ಥಿಕತೆ ಜಗತ್ತಿನಲ್ಲೇ ಅತಿವೇಗದ ಅಭಿವೃದ್ಧಿ
  • ಪಿಇಎಸ್‌ ಘಟಿಕೋತ್ಸವದಲ್ಲಿ ಕೇಂದ್ರ ಸಚಿವ ಬಣ್ಣನೆ
Union Minister Rajeev Chandrasekhar addressed at7th convocation of PES University in Bengaluru rav

ಬೆಂಗಳೂರು (ಸೆ.10) :ಭಾರತದ ಆರ್ಥಿಕತೆಯು ಜಾಗತಿಕವಾಗಿ ಬಹಳ ವೇಗವಾಗಿ ಬೆಳೆಯುತ್ತಿದೆ. ಇದೇ ಮೊದಲ ಬಾರಿಗೆ ಸರ್ಕಾರದ ನಿರೀಕ್ಷೆಗಿಂತ ಶೇ. 25 ರಷ್ಟುಹೆಚ್ಚು ತೆರಿಗೆ ಸಂಗ್ರಹವಾಗಿದೆ. ಕೋವಿಡ್‌ ನಂತರ ದೇಶ ಎಲ್ಲ ಕ್ಷೇತ್ರಗಳೂ ಚೇತರಿಸಿಕೊಂಡು ಅಭಿವೃದ್ಧಿಯಾಗುತ್ತಿದ್ದು, ಮುಂದಿನ ಶತಮಾನ ಭಾರತದ್ದಾಗಿರುತ್ತದೆ ಎಂದು ಕೇಂದ್ರ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ಸ್ಟಾರ್ಟ್‌ಅಪ್ ತವರಾಗಿದೆ ಪ್ರಧಾನಿ ಮೋದಿ ನವ ಭಾರತ, ಯುವಕರಿಗೆ ಹೆಚ್ಚಿನ ಅವಕಾಶ, ರಾಜೀವ್ ಚಂದ್ರಶೇಖರ್!

ಶುಕ್ರವಾರ ನಗರದಲ್ಲಿ ನಡೆದ ಪಿಇಎಸ್‌ ವಿಶ್ವವಿದ್ಯಾಲಯ(PES University)ದ 7ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಹಾಗೂ ಪದವಿ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.\ ಭಾರತ(INDIA) ಹಲವು ವರ್ಷಗಳ ಕಾಲ ನಿಷ್ಕಿ್ರಯ ಪ್ರಜಾಪ್ರಭುತ್ವ(Democracy)ವನ್ನು ಎದುರಿಸಿತ್ತು. 80ನೇ ಶತಮಾನದವರೆಗೂ ದೇಶದ ನಾಗರಿಕರಿಗೆ ಸರ್ಕಾರ ಖರ್ಚು ಮಾಡುವ ಅನುದಾನದಲ್ಲಿ ಶೇ.15 ರಷ್ಟುಮಾತ್ರ ಫಲಾನುಭವಿಗಳಿಗೆ ತಲುಪುವಂತಹ ಸ್ಥಿತಿ ಇತ್ತು. ಆದರೆ, ಇಂದು ಅಂತಹ ಸ್ಥಿತಿ ಇಲ್ಲ. ನಾಗರಿಕರಿಗೆ, ಯುವ ಜನರಿಗೆ ಸರ್ಕಾರ ನೀಡುವ ನೂರಕ್ಕೆ ನೂರರಷ್ಟುಅನುದಾನ, ಸೌಲಭ್ಯಗಳು ಯಾವುದೇ ಸಮಸ್ಯೆ, ವಿಳಂಬವಿಲ್ಲದೆ ಫಲಾನುಭಿವಿಗಳ ಬ್ಯಾಂಕ್‌ ಖಾತೆಗಳಿಗೆ ತಲುಪುತ್ತಿರುವ ನವ ಭಾರತದಲ್ಲಿ ನಾವಿದ್ದೇವೆ’ ಎಂದು ಬಣ್ಣಿಸಿದರು.

ವೇಗದ ವಭಿವೃದ್ಧಿ: ಹಿಂದೆಲ್ಲಾ ದೇಶದ ವಾರ್ಷಿಕ ಪ್ರಗತಿ ಕೇವಲ ಶೇ.2ರಿಂದ 3ರಷ್ಟಿರುತ್ತಿತ್ತು. ಇವತ್ತು ವಾರ್ಷಿಕ ಶೇ.13.5ರಷ್ಟುಬೆಳವಣಿಗೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರ ನೇತೃತ್ವದ ಆಡಳಿತದಲ್ಲಿ ಭಾರತದ ಆರ್ಥಿಕತೆ ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇದೇ ನವ ಭಾರತ. ಹಾಗಾಗಿಯೇ ನಾನು ನನ್ನ ಪ್ರಕಾರ ಮುಂದಿನ ಶತಮಾನ ಭಾರತದ ಶತಮಾನವಾಗಿರಲಿದೆ ಎಂದು ಸಚಿವರು ಹೇಳಿದರು.

ಕೋವಿಡ್‌(Covid)ನಿಂದ ಇಡೀ ಜಗತ್ತೇ ಆರ್ಥಿಕ ಸಂಕಷ್ಟಅನುಭವಿಸಿತು. ಅಮೇರಿಕ, ಚೀನಾ(China), ಬ್ರಿಟನ್‌(Britain) ಸೇರಿದಂತೆ ಸಾಕಷ್ಟುದೇಶಗಳು ಇನ್ನೂ ಕೂಡ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿವೆ. ಅಮೆರಿಕ(America) ಇತಿಹಾಸದಲ್ಲೇ ದೊಡ್ಡ ಹಣದುಬ್ಬರ ಎದುರಿಸಿದೆ. ಆದರೆ, ಭಾರತ ಆರ್ಥಿಕವಾಗಿ ಬಹಳ ವೇಗವಾಗಿ ಚೇತರಿಸಿಕೊಂಡಿದೆ. ನಿರೀಕ್ಷೆಗಿಂತ ಶೇ.25ರಷ್ಟುಹೆಚ್ಚು ತೆರಿಗೆ ಸಂಗ್ರಹವಾಗಿದೆ. ಪ್ರತೀ ವರ್ಷ 10 ಲಕ್ಷ ಕೋಟಿ ರು.ನಷ್ಟುಹಣವನ್ನು ಆಧುನಿಕ ಮೂಲ ಸೌಲಭ್ಯಗಳ ನಿರ್ಮಾಣಕ್ಕೆ ವೆಚ್ಚ ಮಾಡಲಾಗುತ್ತಿದೆ. ಸೆಮಿ ಕಂಡಕ್ಟರ್‌(Semi conductor) ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಭಾರತಕ್ಕೆ ವಿಫುಲ ಅವಕಾಶಗಳಿವೆ. ಪ್ರಧಾನಿ ಮೋದಿ ಅವರು ಈ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದು ಮುಂದಿನ 10 ವರ್ಷಗಳಲ್ಲಿ ಸೆಮಿಕಂಡಕ್ಟರ್‌ ಕ್ಷೇತ್ರದ ಉತ್ಪಾದನೆಯಲ್ಲಿ ಭಾರತ ಮುಂಚೂಣಿ ರಾಷ್ಟ್ರವಾಗಲಿದೆ ಎಂದರು.

ಕಲಿಕೆ ನಿರಂತರತೆಗೆ ಅಗತ್ಯ- ದೊರೆಸ್ವಾಮಿ: ಪಿಇಎಸ್‌ ವಿವಿ ಕುಲಾಧಿಪತಿ ಪ್ರೊ.ಎಂ.ಆರ್‌.ದೊರೆಸ್ವಾಮಿ(Pro.M.R.Doreswamy) ಅವರು ಮಾತನಾಡಿ, ಪಿಇಎಸ್‌ ಸುವರ್ಣ ಮಹೋತ್ಸವಕ್ಕೆ ಕಾಲಿಟ್ಟಿದೆ. ಕೇವಲ 40 ವಿದ್ಯಾರ್ಥಿಗಳಿಂದ ಆರಂಭವಾದ ವಿವಿಯಲ್ಲಿ ಇವತ್ತು 22 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಿಯುಸಿ ಯಿಂದ ಎಂಜಿನಿಯರಿಂಗ್‌, ವೈದ್ಯಕೀಯ ಶಿಕ್ಷಣದ ವರೆಗೆ ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಿಗೆ ಉತ್ತಮ ವೇತನದೊಂದಿಗೆ ವಿಫುಲವಾದ ಉದ್ಯೋಗಾವಕಾಶಗಳು ಸಿಗುತ್ತಿವೆ. ಆದರೆ ವಿದ್ಯಾರ್ಥಿಗಳು ಇಷ್ಟಕ್ಕೆ ತೃಪ್ತರಾಗಬಾರದು. ಕಲಿಕೆ ನಿರಂತರವಾಗಿಟ್ಟುಕೊಳ್ಳಬೇಕು. ಭವಿಷ್ಯದಲ್ಲಿ ದೊಡ್ಡ ಸಾಧನೆಗಳನ್ನು ಮಾಡಬೇಕು. ಆ ಮೂಲಕ ಇನ್ನಷ್ಟುಸುಭದ್ರ ಹಾಗೂ ಭಲಿಷ್ಟಭಾರತ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.

ರಾಹುಲ್‌ ಬಂಟರಿಂದಲೇ ಗಾಂಧೀಜಿ ಫೋಟೋ ಧ್ವಂಸ: ರಾಜೀವ್‌ ಚಂದ್ರಶೇಖರ್‌

3495 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಪಿಇಎಸ್‌ ವಿವಿ ಘಟಿಕೋತ್ಸವದಲ್ಲಿ ನಾಲ್ವರಿಗೆ ಪಿಎಚ್‌ಡಿ ಸೇರಿದಂತೆ ಒಟ್ಟು 3,495 ವಿದ್ಯಾರ್ಥಿಗಳಿಗೆ ವಿವಿಧ ಪದವಿ, ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು. ವಿವಿಧ ಕೋರ್ಸು, ವಿಭಾಗದಲ್ಲಿ ರಾರ‍ಯಂಕಿಂಗ್‌ ಮೂಲಕ ಉತ್ತಮ ಸಾಧನೆ ಮಾಡಿದ 24 ವಿದ್ಯಾರ್ಥಿಗಳಿಗೆ ಗಣ್ಯರು ಚಿನ್ನದ ಪದಕ ಪ್ರಧಾನ ಮಾಡಿದರು. ಈ ವೇಳೆ ಪಿಇಎಸ್‌ ವಿವಿಯ ಸಹ ಕುಲಾಧಿಪತಿ ಪ್ರೊ.ಡಿ.ಜವಾಹರ್‌, ಕುಲಪತಿ ಡಾ.ಜೆ.ಸೂರ್ಯಪ್ರಸಾದ್‌, ಕುಲಸಚಿವ ಡಾ.ಕೆ.ಎಸ್‌. ಶ್ರೀಧರ್‌ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios