ಎಂಫಿಲ್ ಎನ್ನುವುದು ಮಾನ್ಯತೆ ಇರುವ ಡಿಗ್ರಿಯಲ್ಲ: ವಿವಿಗಳಿಗೆ ಸೂಚಿಸಿದ ಯುಜಿಸಿ!
ಎಂಫಿಲ್ ಅಥವಾ ಮಾಸ್ಟರ್ ಆಫ್ ಫಿಲಾಸಫಿ ಎನ್ನುವುದು ಮಾನ್ಯತೆ ಪಡೆದಿರುವ ಡಿಗ್ರಿಯಲ್ಲ. ವಿಶ್ವವಿದ್ಯಾಲಯಗಳು ಎಂಫಿಲ್‌ಗೆ ಅಡ್ಮಿಷನ್ ಮಾಡಿಕೊಳ್ಳುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಯುನಿವರ್ಸಿಟಿ ಗ್ರ್ಯಾಂಟ್ ಕಮಿಷನ್ ತಿಳಿಸಿದೆ.
ಬೆಂಗಳೂರು (ಡಿ.27): ಶೈಕ್ಷಣಿಕ ವರ್ಷಗಳು ಆರಂಭಗೊಳ್ಳುವ ಮುನ್ನವೇ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಅಥವಾ ಯುನಿವರ್ಸಿಟಿ ಗ್ರ್ಯಾಂಟ್ ಕಮೀಷನ್ ಪ್ರಮುಖ ಸೂಚನೆಯನ್ನು ನೀಡಿದೆ. ‘‘ಕೆಲವು ವಿಶ್ವವಿದ್ಯಾಲಯಗಳು ಎಂಫಿಲ್ (ಮಾಸ್ಟರ್ ಆಫ್ ಫಿಲಾಸಫಿ) ಅಡ್ಮೀಷನ್‌ಗೆ ಹೊಸದಾಗಿ ಅರ್ಜಿ ಆಹ್ವಾನಿಸುತ್ತಿರುವುದು ಯುಜಿಸಿ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಎಂಫಿಲ್ ಪದವಿ ಮಾನ್ಯತೆ ಪಡೆದ ಪದವಿಯಲ್ಲ ಎನ್ನುವುದನ್ನು ಮತ್ತೊಮ್ಮೆ ಎಲ್ಲಾ ವಿಶ್ವವಿದ್ಯಾಲಯಗಳ ಗಮನಕ್ಕೆ ತರುತ್ತಿದ್ದೇವೆ' ಎಂದು ಯುಜಿಸಿ ಪ್ರಕಟಣೆಯಲ್ಲಿ ತಿಳಿಸಿದೆ. "ಯುಜಿಸಿ (ಪಿಎಚ್‌ಡಿ ಪದವಿ ಪ್ರಶಸ್ತಿಗಾಗಿ ಕನಿಷ್ಠ ಮಾನದಂಡಗಳು ಮತ್ತು ಕಾರ್ಯವಿಧಾನಗಳು) ನಿಯಮಗಳು, 2022 ರ ನಿಯಮಾವಳಿ ಸಂಖ್ಯೆ 14, ಉನ್ನತ ಶಿಕ್ಷಣ ಸಂಸ್ಥೆಗಳು ಯಾವುದೇ ಎಂಫಿಲ್ ಕಾರ್ಯಕ್ರಮವನ್ನು ನೀಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ" ಎಂದು ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ಹೇಳಿದ್ದಾರೆ.
2023-24ರ ಶೈಕ್ಷಣಿಕ ವರ್ಷಕ್ಕೆ ಅಂತಹ ಯಾವುದೇ ಎಂಫಿಲ್‌ಗೆ ಅಡ್ಮೀಷನ್‌ಅನ್ನು ನಿಲ್ಲಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಯೋಗವು ವಿಶ್ವವಿದ್ಯಾಲಯಗಳನ್ನು ಕೇಳಿದೆ. ಯಾವುದೇ ಎಂಫಿಲ್ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯದಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ ಎಂದು ಜೋಶಿ ಹೇಳಿದರು.
ಎಜುಟೆಕ್ ಕಂಪನಿಗಳ ವಿದೇಶಿ ಪಿಹೆಚ್‌ಡಿಗೆ ಮಾನ್ಯತೆ ಇಲ್ಲ: ವಿದ್ಯಾರ್ಥಿಗಳಿಗೆ ಯುಜಿಸಿ ಎಚ್ಚರಿಕೆ
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (UGC) ಎಚ್ಚರಿಕೆಯನ್ನು ನೀಡಿದೆ, ವಿಶ್ವವಿದ್ಯಾನಿಲಯಗಳಿಂದ ಮಾಸ್ಟರ್ ಆಫ್ ಫಿಲಾಸಫಿ (ಎಂಫಿಲ್) ಕೋರ್ಸ್‌ಗಳನ್ನು ಮಾಡಲು ಇಚ್ಛೆ ಇರುವ ವಿದ್ಯಾರ್ಥಿಗಳಿಗೆ ಈ ಎಚ್ಚರಿಕೆಯನ್ನು ನೀಡಿದೆ. ಯುಜಿಸಿ ಈಗಾಗಲೇ ಎಚ್ಚರಿಕೆ ನೀಡಿರುವ ಹೊರತಾಗಿಯೂ ಸಾಕಷ್ಟು ವಿವಿಗಳು ಈಗಲೂ ಕೂಡ ಎಂಫಿಲ್ ಕೋರ್ಸ್‌ಗಳು ನೀಡುವುದನ್ನು ಮುಂದುವರಿಸಿದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ನೋಟಿಸ್ ಜಾರಿ ಮಾಡಿದೆ. ಯುಜಿಸಿ ಈ ಹಿಂದೆ ಎಂಫಿಲ್ ಪದವಿಯನ್ನು ಕಾನೂನುಬಾಹಿರ ಎಂದು ಘೋಷಿಸಿತ್ತು, ಎಂಫಿಲ್ ಕಾರ್ಯಕ್ರಮಗಳನ್ನು ನೀಡದಂತೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿತ್ತು. ಇದಲ್ಲದೆ, 2023-24ರ ಶೈಕ್ಷಣಿಕ ವರ್ಷಕ್ಕೆ ಎಂಫಿಲ್ ಕಾರ್ಯಕ್ರಮಕ್ಕೆ ಪ್ರವೇಶವನ್ನು ಸ್ಥಗಿತಗೊಳಿಸುವಂತೆ ವಿಶ್ವವಿದ್ಯಾಲಯಗಳಿಗೆ ನಿರ್ದೇಶನವನ್ನೂ ನೀಡಿತ್ತು.
ದೇಶದ ಪ್ರತಿಷ್ಠಿತ ವಿವಿ JNUಗೆ ಮಹಿಳಾ ಸಾರಥ್ಯ, ಶಾಂತಿಶ್ರೀ ಬಗ್ಗೆ ಒಂದಿಷ್ಟು ಮಾಹಿತಿ