UGC NET Result 2023: ಯುಜಿಸಿ ನೆಟ್‌ ಫಲಿತಾಂಶ ಬಿಡುಗಡೆ, ಹೀಗೆ ಚೆಕ್ ಮಾಡಿ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ  ಯುಜಿಸಿ ನೆಟ್‌ ಫಲಿತಾಂಶ  ಪ್ರಕಟಿಸಿದೆ.  ಅಭ್ಯರ್ಥಿಗಳು ತಮ್ಮ ಅಂಕಪಟ್ಟಿಗಳನ್ನು ugcnet.nta.nic.in ಮತ್ತು ntaresults.nic.in ನಲ್ಲಿ ಚೆಕ್ ಮಾಡಿಕೊಳ್ಳಬಹುದು. 

UGC NET June Result 2023 declared on official website gow

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಯುಜಿಸಿ ನೆಟ್‌ ಫಲಿತಾಂಶ  ಜುಲೈ 25 ರಂದು  ಪ್ರಕಟಿಸಿದೆ.  ಅಭ್ಯರ್ಥಿಗಳು ತಮ್ಮ ಅಂಕಪಟ್ಟಿಗಳನ್ನು ugcnet.nta.nic.in ಮತ್ತು ntaresults.nic.in ನಲ್ಲಿ ಚೆಕ್ ಮಾಡಿಕೊಳ್ಳಬಹುದು. 

ನೆಟ್ 2023 ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಫಲಿತಾಂಶ ಬಿಡುಗಡೆಯಾದ ಮೇಲೆ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶವನ್ನು ಪರಿಶೀಲಿಸಿ, ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. 

10, 12ನೇ ತರಗತಿಯಲ್ಲಿ ಫೇಲ್ ಆದ್ರೂ UPSC ಬರೆದು ಮೊದಲ ಪ್ರಯತ್ನದಲ್ಲೇ ಐಎಎಸ್ ಅಧಿಕಾರಿಯಾದ ಅಂಜು ಶರ್ಮಾ!

ಈಗಾಗಲೇ ಯುಜಿಸಿ ನೆಟ್ 2023 (UGC NET) ರ ಪರೀಕ್ಷೆಗಳ ತಾತ್ಕಾಲಿಕ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿದೆ. ತಾತ್ಕಾಲಿಕ ಕೀ ಉತ್ತರಗಳ ಮೇಲೆ ಆಕ್ಷೇಪಣೆ ಸಲ್ಲಿಸಲು ಅವಕಾಶವನ್ನು ಸಹ ನೀಡಲಾಗಿದೆ. ಅಭ್ಯರ್ಥಿಗಳು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಎನ್‌ಟಿಎ ಯುಜಿಸಿ ನೆಟ್ 2023ರ ಫಲಿತಾಂಶವನ್ನು ಬಿಡುಗಡೆ ಮಾಡಲಿದೆ. 

UGC NET 2023 ಪರೀಕ್ಷೆಯನ್ನು ದೇಶಾದ್ಯಂತ ಎರಡು ಹಂತಗಳಲ್ಲಿ 83 ವಿಷಯಗಳಿಗೆ ಆನ್‌ಲೈನ್ ನಲ್ಲಿ ನಡೆಸಲಾಗಿತ್ತು. ಯುಜಿಸಿ ನೆಟ್‌ ಮೊದಲ ಹಂತದ ಪರೀಕ್ಷೆಗಳು ಜೂನ್ 13, 14, 15, 16 ಮತ್ತು 17ರಂದು ನಡೆದರೆ, ಎರಡನೇ ಹಂತದ ಪರೀಕ್ಷೆಗಳನ್ನು ಜೂನ್ 19, 20, 21 ಮತ್ತು ಜೂನ್ 22 ರಂದು ನಡೆಸಲಾಗಿತ್ತು. 

ಯುಪಿಎಸ್‌ಸಿಯಲ್ಲಿ ದೇಶಕ್ಕೆ 570ನೇ ರ‍್ಯಾಂಕ್‌ ಪಡೆದ ಸ್ಲಂ ಹುಡುಗ ಹುಸೇನ್

ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಯುಜಿಸಿ ನೆಟ್ ಫಲಿತಾಂಶವನ್ನು ಪರಿಶೀಲಿಸಲು ಅರ್ಜಿ ಸಂಖ್ಯೆ, ಹುಟ್ಟಿದ ದಿನಾಂಕವನ್ನು ಬಳಸಿಕೊಂಡು ಯುಜಿಸಿ ನೆಟ್ ವೆಬ್‌ಸೈಟ್ ಗೆ ಲಾಗಿನ್ ಮಾಡಬೇಕಾಗುತ್ತದೆ. ಲಾಗಿನ್ ಆದ ನಂತರ, ಅಂಕಗಳು, ಗ್ರೇಡ್, ವಿಷಯ ಮತ್ತು ವರ್ಗವಾರು ಕಟ್-ಆಫ್ ಅಂಕಗಳು ಸೇರಿದಂತೆ ಫಲಿತಾಂಶ ಚೆಕ್ ಮಾಡಬಹುದು.

Latest Videos
Follow Us:
Download App:
  • android
  • ios