10, 12ನೇ ತರಗತಿಯಲ್ಲಿ ಫೇಲ್ ಆದ್ರೂ UPSC ಬರೆದು ಮೊದಲ ಪ್ರಯತ್ನದಲ್ಲೇ ಐಎಎಸ್ ಅಧಿಕಾರಿಯಾದ ಅಂಜು ಶರ್ಮಾ!
ಐಎಎಸ್ ಅಧಿಕಾರಿ ಅಂಜು ಶರ್ಮಾ ತನ್ನ 10 ನೇ ತರಗತಿಯಲ್ಲಿ ರಸಾಯನಶಾಸ್ತ್ರ ಮತ್ತು 12 ನೇ ತರಗತಿಯಲ್ಲಿ ಅರ್ಥಶಾಸ್ತ್ರದ ವಿಷಯದಲ್ಲಿ ಅನುತ್ತೀರ್ಣರಾದರು. ಆದರೆ ತನ್ನ ಸತತ ಪ್ರಯತ್ನದ ಫಲವಾಗಿ ಯುಪಿಎಸ್‌ಸಿಯಲ್ಲಿ ಮೊದಲ ಬಾರಿಯೇ ಪಾಸ್ ಆಗಿ ಐಎಎಸ್ ಅಧಿಕಾರಿಯಾದರು.
ಹಲವಾರು UPSC ಯಶಸ್ಸಿನ ಕಥೆಗಳು ನಮ್ಮ ಕಣ್ಣ ಮುಂದಿದೆ. ಜೀವನದಲ್ಲಿ ಹಲವು ಹಿನ್ನಡೆಗಳನ್ನು ಎದುರಿಸುತ್ತಿದ್ದರೂ ತಮ್ಮ ಕನಸುಗಳನ್ನು ಹೇಗೆ ನನಸಾಗಿಸಿಕೊಂಡರು ಎಂಬ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಇದೀಗ ಇಂತಹುದೇ ಮತ್ತೊಂದು ಸ್ಪೂರ್ತಿದಾಯಕ ಕಥೆಯೆಂದರೆ 22 ನೇ ವಯಸ್ಸಿನಲ್ಲಿ ಅತ್ಯಂತ ಸವಾಲಿನ ಪರೀಕ್ಷೆಗಳಲ್ಲಿ ಒಂದಾದ UPSC ಯನ್ನು ತನ್ನ ಮೊದಲ ಪ್ರಯತ್ನದಲ್ಲಿ ಬರೆದು IAS ಅಧಿಕಾರಿಯಾದ ಅಂಜು ಶರ್ಮಾ ಅವರದ್ದು.
ಐಎಎಸ್ ಅಧಿಕಾರಿ ಅಂಜು ಶರ್ಮಾ 10 ನೇ ತರಗತಿಯಲ್ಲಿ ರಸಾಯನಶಾಸ್ತ್ರ ಮತ್ತು 12 ನೇ ತರಗತಿಯಲ್ಲಿ ಅರ್ಥಶಾಸ್ತ್ರದ ವಿಷಯದಲ್ಲಿ ತನ್ನ ಪ್ರಿ-ಬೋರ್ಡ್‌ಗಳಲ್ಲಿ ಅನುತ್ತೀರ್ಣರಾದರು. ಈ ಎರಡು ವಿಷಯಗಳನ್ನು ಹೊರತುಪಡಿಸಿ, ಅವರು ಇತರ ಎಲ್ಲಾ ವಿಷಯಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದರು.
ಕೇವಲ 35 ಪಾಸ್ ಅಂಕ ಗಳಿಸಿದ ತುಷಾರ್ ಸುಮೇರಾ ಐಎಎಸ್ ಅಧಿಕಾರಿ!
ಅಂಜು ತನ್ನ 12 ನೇ ತರಗತಿಯನ್ನು ಮುಗಿಸಿದ ನಂತರ ಜೈಪುರದಿಂದ ಬಿಎಸ್ಸಿ ಮತ್ತು ಎಂಬಿಎ ಗಳಿಸಿದರು. ಅವರು ತನ್ನ ಕಾಲೇಜಿನಲ್ಲಿ ಚಿನ್ನದ ಪದಕವನ್ನು ಕೂಡ ಪಡೆದುಕೊಂಡರು. ಶರ್ಮಾ ಪ್ರಕಾರ ಜೀವನದಲ್ಲಿ ನಡೆದ ಈ ಎರಡು ಘಟನೆಗಳು ಜೀವನದಲ್ಲಿ ಮಹತ್ವದ ಪಾತ್ರವಹಿಸಿದೆ.
ಅಂಜು ಶರ್ಮಾ ಅವರು ತಮ್ಮ ಪೂರ್ವ-ಬೋರ್ಡ್‌ಗಳ ಸಮಯದಲ್ಲಿ ಅಧ್ಯಯನ ಮಾಡಲು ಸಾಕಷ್ಟು ವಿಷಯಗಳಿತ್ತು ಮತ್ತು ಒತ್ತಡದಲ್ಲಿ ಓದಲು ಆಗಲಿಲ್ಲ. ಹೀಗಾಗಿ ಸರಿಯಾದ ತಯಾರಿ ಇಲ್ಲದ ಕಾರಣ ಪರೀಕ್ಷೆಯಲ್ಲಿ ವಿಫಲಗೊಳ್ಳಲಿದ್ದಾಳೆಂದು ಮೊದಲೇ ತಿಳಿದಿದ್ದರು. ಆಕೆಯ ಸುತ್ತಲಿರುವ ಪ್ರತಿಯೊಬ್ಬರೂ ನಮ್ಮ ಭವಿಷ್ಯದ ಶೈಕ್ಷಣಿಕ ಮಾರ್ಗಗಳನ್ನು ನಿರ್ಧರಿಸುವಲ್ಲಿ 10 ನೇ ತರಗತಿಯುವ ಬಹಳ ಪ್ರಾಮುಖ್ಯ ಎಂದು ಹೇಳಿದ್ದರು.
ಅಂಜು ತನ್ನ ಜೀವನದಲ್ಲಿ ತುಂಬಾ ಕಷ್ಟದ ಸಮಯಲ್ಲಿ ತನ್ನ ತಾಯಿ ಹೇಗೆ ಬೆಂಬಲಿಸಿದರು ಮತ್ತು ಪ್ರೋತ್ಸಾಹಿಸಿದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. ಕೊನೆಯ ಕ್ಷಣದ ಅಧ್ಯಯನವನ್ನು ಅವಲಂಬಿಸಬಾರದು ಎಂಬುದನ್ನು ತಾಯಿ ಮೊದಲೇ ತಿಳಿಸಿದ್ದರಿಂದ ಅಂಜು ತನ್ನ ಕಾಲೇಜು ಪರೀಕ್ಷೆಗಳಿಗೆ ಮುಂಚೆಯೇ ಅಧ್ಯಯನ ಮಾಡಲು ಪ್ರಾರಂಭಿಸಿದರು. ಇದು ತನ್ನ ಸಂಸ್ಥೆಗೆ ಚಿನ್ನದ ಪದಕವನ್ನು ತಂದು ಕೊಡಲು ಅನುವು ಮಾಡಿಕೊಟ್ಟಿತು. ಈ ವಿಧಾನದಿಂದಾಗಿ ಆಕೆ ತನ್ನ ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ಉತ್ತೀರ್ಣಳಾದಳು. ಅವಳು ತನ್ನ ಕೋರ್ಸ್‌ವರ್ಕ್ ಅನ್ನು ಬಹಳ ಮುಂಚಿತವಾಗಿ ಮುಗಿಸಿದಳು ಮತ್ತು IAS ಟಾಪ್ ಸ್ಕೋರರ್‌ಗಳಲ್ಲಿ ಒಬ್ಬರಾದರು.
ಯುಪಿಎಸ್‌ಸಿಯಲ್ಲಿ ದೇಶಕ್ಕೆ 570ನೇ ರ‍್ಯಾಂಕ್ ಪಡೆದ ಸ್ಲಂ ಹುಡುಗ ಹುಸೇನ್
1991 ರಲ್ಲಿ, ಅಂಜು ರಾಜ್‌ಕೋಟ್‌ನಲ್ಲಿ ಸಹಾಯಕ ಕಲೆಕ್ಟರ್ ಆಗಿ ತಮ್ಮ ಕೆಲಸ ಪ್ರಾರಂಭಿಸಿದರು. ಅವರು ಈಗ ಸಚಿವಾಲಯ, ಗಾಂಧಿನಗರ, ಸರ್ಕಾರಿ ಶಿಕ್ಷಣ ಇಲಾಖೆ (ಉನ್ನತ ಮತ್ತು ತಾಂತ್ರಿಕ ಶಿಕ್ಷಣ) ದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ಮೂವತ್ತು ವರ್ಷಗಳ ಸೇವೆಯಲ್ಲಿ, ಅವರು DDO ಬರೋಡಾ, ಗಾಂಧಿನಗರ, ಜಿಲ್ಲಾಧಿಕಾರಿ, ಮತ್ತು ಭಾರತ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವಾಲಯದಲ್ಲಿ NRHM ಸೇರಿದಂತೆ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.