ಡಿಸೆಂಬರ್‌ನಲ್ಲಿ ಯುಜಿಸಿ ಎನ್‌ಇಟಿ ಅರ್ಹತಾ ಪರೀಕ್ಷೆ, ವಿಷಯವಾರು ವೇಳಾಪಟ್ಟಿ ಬಿಡುಗಡೆ
ವಿವಿಧ ಹುದ್ದೆಗಳ ನೇಮಕಾತಿಗಾಗಿ ಡಿಸೆಂಬರ್‌ನಲ್ಲಿ ಯುಜಿಸಿ- ಎನ್‌ಇಟಿ ಅರ್ಹತಾ ಪರೀಕ್ಷೆ ನಡೆಯಲಿದ್ದು ಆಸಕ್ತ ಅಭ್ಯರ್ಥಿಗಳು ನವೆಂಬರ್ 30ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‌ಐಆರ್) ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್ ಎಫ್) ಮತ್ತು ಲೆಕ್ಚರ್‌ಶಿಪ್ (ಎಲ್‌ಎಸ್)/ ಅಸಿಸ್ಟೆಂಟ್ ಪ್ರೊಫೆಸರ್ ನೇಮಕಾತಿಗಾಗಿ ಯುಜಿಸಿ - ಎನ್‌ಇಟಿ, ಡಿಸೆಂಬರ್‌ನಲ್ಲಿ ನಡೆಯಲಿರುವ ಅರ್ಹತಾ ಪರೀಕ್ಷೆಯ ಅಧಿಸೂಚನೆಯನ್ನು ಪ್ರಕಟಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಏನಿದು ಸಿಎಸ್‌ಐ ಆರ್- ಯುಜಿಸಿ ಎನ್‌ಇಟಿ ?
ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ (ಸಿ ಎಸ್ ಐ ಆರ್) ಮತ್ತು ಯುಜಿಸಿ ವಿವಿಧ ವಿಜ್ಞಾನ ಕ್ಷೇತ್ರಗಳಲ್ಲಿ ವಿಶ್ವವಿದ್ಯಾನಿಲಯ ವಿಭಾಗ/ರಾಷ್ಟ್ರೀಯ ಪ್ರಯೋಗಾಲಯಗಳು ಮತ್ತು ಸಂಸ್ಥೆಗಳಲ್ಲಿ ಕೆಲಸ ಮಾಡುವ ಅಧ್ಯಾಪಕರು/ವಿಜ್ಞಾನಿಗಳ ಪರಿಣಿತ ಮಾರ್ಗದರ್ಶನದಲ್ಲಿ ಸಂಶೋಧನಾ ವಿಧಾನಗಳ ತರಬೇತಿಗಾಗಿ ಸಂಶೋಧನಾ ಫೆಲೋಶಿಪ್‌ಗಳನ್ನು ಒದಗಿಸುತ್ತದೆ. ಹಾಗೂ ಸಿ ಎಸ್ ಐ ಆರ್- ಯುಜಿಸಿ ಎನ್ ಇ ಟಿ - ಯುಜಿಸಿ ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಭಾರತೀಯ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆ ಆರ್‌ಎಫ್) ಮತ್ತು ಉಪನ್ಯಾಸಕ (ಎಲ್ಎಸ್) / ಸಹಾಯಕ ಪ್ರಾಧ್ಯಾಪಕರ ಅರ್ಹತೆಯನ್ನು ನಿರ್ಧರಿಸಲು ನಡೆಸಲಾಗುವ ಪರೀಕ್ಷೆಯಾಗಿದೆ.
ಬಿಗ್‌ಬಾಸ್ ಕನ್ನಡ ಸ್ಪರ್ಧಿಗಳ ಶೈಕ್ಷಣಿಕ ಮಾಹಿತಿ, ಡ್ರೋಣ ಪ್ರತಾಪ್ ನಿಜವಾದ ವಿದ್ಯಾರ್ಹತೆ ಏನು?
ಪ್ರಮುಖ ದಿನಾಂಕಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01-11-2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-11-2023
ಆನ್‌ಲೈನ್‌ನಲ್ಲಿ ಅರ್ಜಿ ನಮೂನೆಯ ವಿವರಗಳಲ್ಲಿ ತಿದ್ದುಪಡಿ ಕೊನೆಯ ದಿನಾಂಕ : 02-12-2023 ರಿಂದ 04-12-2023
ಪರೀಕ್ಷೆಯ ದಿನಾಂಕ: 26 ರಿಂದ 28-12-2023
ಗರಿಷ್ಠ ವಯಸ್ಸಿನ ಮಿತಿ (01-07-2023 ರಂತೆ)
ಜೂನಿಯರ್ ರಿಸರ್ಚ್ ಫೆಲೋಶಿಪ್ ಗೆ: ಗರಿಷ್ಠ 28 ವರ್ಷಗಳು
ಸಹಾಯಕ ಪ್ರಾಧ್ಯಾಪಕ ಹುದ್ದೆಗೆ: ಗರಿಷ್ಠ ವಯಸ್ಸಿನ ಮಿತಿಯಿಲ್ಲ.
ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ನವೆಂಬರ್ 23 ಕೊನೆಯ ದಿನ
ಶೈಕ್ಷಣಿಕ ಅರ್ಹತೆಗಳು
1. ಇಂಟಿಗ್ರೇಟೆಡ್ ಬಿಎಸ್- ಎಂಎಸ್/ಬಿಇ/ಬಿ-ಟೆಕ್ / ಎಂ ಎಸ್ಸಿ/ ಅಥವಾ ತತ್ಸಮಾನ ಪದವಿಯಲ್ಲಿ ಸಾಮಾನ್ಯ/ಇಡಬ್ಲ್ಯೂಎಸ್ ಮತ್ತು ಓಬಿಸಿ ಅಭ್ಯರ್ಥಿಗಳು ಕನಿಷ್ಠ 55 ಅಂಕಗಳನ್ನು ಮತ್ತು ಎಸ್ ಸಿ/ಎಸ್ ಟಿ, ಅಂಗವಿಕಲ ಅಭ್ಯರ್ಥಿಗಳು ಕನಿಷ್ಠ 50 ಅಂಕಗಳನ್ನು ಪಡೆದಿರಬೇಕು.
2. ಬಿ.ಎಸ್ಸಿ ಅಥವಾ ಸಮಾನವಾದ ಪದವಿಯಲ್ಲಿ ಸಾಮಾನ್ಯ/ಇಡಬ್ಲ್ಯೂಎಸ್ ಮತ್ತು ಓಬಿಸಿ ವರ್ಗದ ಅಭ್ಯರ್ಥಿಗಳು ಕನಿಷ್ಠ 55 ಅಂಕಗಳನ್ನು ಮತ್ತು ಎಸ್ ಸಿ/ಎಸ್ ಟಿ, ಅಂಗವಿಕಲ ಅಭ್ಯರ್ಥಿಗಳು ಕನಿಷ್ಠ 50 ಅಂಕಗಳನ್ನು ಪಡೆದಿರಬೇಕು.
3. ಅಭ್ಯರ್ಥಿಗಳು ಬ್ಯಾಚುಲರ್ ಪದವಿಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರೆ , ಅಥವಾ ಇಂಟಿಗ್ರೇಟೆಡ್ ಎಂಎಸ್ - ಪಿಹೆಚ್ ಡಿ ಪ್ರೋಗ್ರಾಂಗೆ ದಾಖಲಾದ ವಿದ್ಯಾರ್ಥಿಗಳು ಪದವಿಯನ್ನು ಪಡೆದ ನಂತರವೇ ಸಿ ಎಸ್ ಐ ಆರ್ ಫೆಲೋಶಿಪ್‌ಗೆ ಅರ್ಹರಾಗುತ್ತಾರೆ.
4. ಕೇವಲ ಸ್ನಾತಕೋತ್ತರ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಜೂನಿಯರ್ ರಿಸರ್ಚ್ ಫೆಲೋಶಿಪ್‌ಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆಯೇ ವಿನಾ ಲೆಕ್ಚರ್‌ಶಿಪ್ /ಸಹಾಯಕ ಪ್ರಾಧ್ಯಾಪಕರಿಗೆ ಅಲ್ಲ.
5. ಬಿ ಇ/ಬಿ ಎಸ್/ಬಿ-ಟೆಕ್/ಬಿ-ಫಾರ್ಮ್/ ಎಂಬಿಬಿಎಸ್ ಅಂತಿಮ ವರ್ಷ/ಫಲಿತಾಂಶ ನಿರೀಕ್ಷಿತ ಅಭ್ಯರ್ಥಿಗಳು ಫೆಲೋಶಿಪ್‌ಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇವರು ಉಪನ್ಯಾಸಕ/ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹರಾಗಿರುವುದಿಲ್ಲ. ಮತ್ತು ಬಿ.ಎಸ್ಸಿ. (ಹಾನರ್ಸ್) ಅಂತಿಮ ವರ್ಷ/ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಸಹ ಉಪನ್ಯಾಸಕ/ಸಹಾಯಕ ಪ್ರಾಧ್ಯಾಪಕ ಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ರೂ. 1100
ಸಾಮಾನ್ಯ - ಇಡಬ್ಲ್ಯೂಎಸ್/ ಓಬಿಸಿ ಅಭ್ಯರ್ಥಿಗಳಿಗೆ: ರೂ. 550
ಎಸ್ ಸಿ/ ಎಸ್ ಟಿ/ ತೃತೀಯಲಿಂಗಿ ಅಭ್ಯರ್ಥಿಗಳಿಗೆ: ರೂ. 275
ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕ ಇರುವುದಿಲ್ಲ. \
ಪ್ರಶ್ನೆ ಪತ್ರಿಕೆಗಳ ಮಾದರಿ
ಈ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿರುತ್ತದೆ. ಹಾಗೂ ಪರೀಕ್ಷೆಯ 200 ಅಂಕಗಳಿಗೆ 3 ಗಂಟೆಗಳ ಅವಧಿಗೆ ನಡೆಸಲಾಗುತ್ತದೆ. ಹಾಗೂ ಪರೀಕ್ಷೆಯು ಮೂರು ಭಾಗಗಳನ್ನು ಒಳಗೊಂಡಿರುತ್ತದೆ. ಎಲ್ಲಾ ಭಾಗಗಳು ವಸ್ತುನಿಷ್ಠ ಪ್ರಕಾರವನ್ನು / ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.
ಯಾವ ವಿಷಯಗಳಿಗೆ ಪರೀಕ್ಷೆ ನಡೆಸಲಾಗುತ್ತದೆ?
ಸಿ ಎಸ್ ಐ ಆರ್- ಯುಜಿಸಿ ಎನ್ ಇ ಟಿ ಪರೀಕ್ಷೆಯನ್ನು ರಾಸಾಯನಿಕ ವಿಜ್ಞಾನಗಳು, ಭೂಮಿ- ವಾಯುಮಂಡಲ- ಸಾಗರ ಮತ್ತು ಗ್ರಹ ವಿಜ್ಞಾನಗಳು, ಜೀವನ ವಿಜ್ಞಾನಗಳು, ಗಣಿತ ವಿಜ್ಞಾನಗಳು, ಭೌತಿಕ ವಿಜ್ಞಾನ ವಿಷಯಗಳಿಗೆ ಮಾತ್ರ ನಡೆಸಲಾಗುತ್ತದೆ.
ಪರೀಕ್ಷಾ ಕೇಂದ್ರಗಳ ಮಾಹಿತಿ
ಈ ಪರೀಕ್ಷೆಯು ದೇಶದಾದ್ಯಂತ ವಿವಿಧ ಪರೀಕ್ಚಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಬೆಳಗಾವಿ, ಬಳ್ಳಾರಿ ,ಬೆಂಗಳೂರು, ಬೀದರ್ ,ದಾವಣಗೆರೆ, ಧಾರವಾಡ/ಹುಬ್ಬಳ್ಳಿ , ಗುಲ್ಬರ್ಗ, ಹಾಸನ ,ಮಂಡ್ಯ, ಮಂಗಳೂರು, ಮೈಸೂರು ,ಶಿವಮೊಗ್ಗ , ತುಮಕೂರು, ಉಡುಪಿ/ಮಣಿಪಾಲ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ವೆಬ್‌ಸೈಟ್ ವೀಕ್ಷಿಸಬಹುದು.