ಕೋಟಾದಲ್ಲಿ ಮತ್ತಿಬ್ಬರು ನೀಟ್ ವಿದ್ಯಾರ್ಥಿಗಳು ಸಾವಿಗೆ ಶರಣು: ಒಂದೇ ವರ್ಷದಲ್ಲಿ 24 ವಿದ್ಯಾರ್ಥಿಗಳು ಬಲಿ
ದೇಶದಲ್ಲಿ ಅತಿ ಹೆಚ್ಚು ನೀಟ್ ಮತ್ತು ಜೆಇಇ ಪರೀಕ್ಷಾ ತರಬೇತಿ ಕೇಂದ್ರಗಳಿರುವ ರಾಜಸ್ಥಾನದ ಕೋಟಾದಲ್ಲಿ ಭಾನುವಾರ ಮತ್ತಿಬ್ಬರು ನೀಟ್ ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮೂಲಕ ಕೋಟಾದಲ್ಲಿ ಈ ವರ್ಷದಲ್ಲಿ ಸಾವನ್ನಪ್ಪಿದ್ದ ವಿದ್ಯಾರ್ಥಿಗಳ ಸಂಖ್ಯೆ 24ಕ್ಕೆ ಏರಿಕೆಯಾಗಿದ್ದು ಭಾರೀ ಆತಂಕ ಸೃಷ್ಟಿಸಿದೆ.
ಕೋಟಾ: ದೇಶದಲ್ಲಿ ಅತಿ ಹೆಚ್ಚು ನೀಟ್ ಮತ್ತು ಜೆಇಇ ಪರೀಕ್ಷಾ ತರಬೇತಿ ಕೇಂದ್ರಗಳಿರುವ ರಾಜಸ್ಥಾನದ ಕೋಟಾದಲ್ಲಿ ಭಾನುವಾರ ಮತ್ತಿಬ್ಬರು ನೀಟ್ ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮೂಲಕ ಕೋಟಾದಲ್ಲಿ ಈ ವರ್ಷದಲ್ಲಿ ಸಾವನ್ನಪ್ಪಿದ್ದ ವಿದ್ಯಾರ್ಥಿಗಳ ಸಂಖ್ಯೆ 24ಕ್ಕೆ ಏರಿಕೆಯಾಗಿದ್ದು ಭಾರೀ ಆತಂಕ ಸೃಷ್ಟಿಸಿದೆ. ಆವಿಷ್ಕಾರ್ ಶಂಬಾಜಿ ಕಾಸ್ಲೆ (17) ಮತ್ತು ಆದರ್ಶ್ ರಾಜ್ (18) ಎಂಬ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದವರು.
ಭಾನುವಾರ ತರಬೇತಿ ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಬರೆದ ಬಳಿಕ, ಮಹಾರಾಷ್ಟ್ರ (Maharashtra) ಮೂಲದ ಆವಿಷ್ಕಾರ್ ತರಬೇತಿ ಕೇಂದ್ರದ ಕಟ್ಟಡದ 6ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ್ದಾರೆ. ಈ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದಾದ ಕೆಲವೇ ಗಂಟೆಗಳ ನಂತರ ಮಧ್ಯಾಹ್ನ ಪರೀಕ್ಷೆ ಬರೆದಿದ್ದ ಬಿಹಾರ (Bihar) ಮೂಲದ ಆದರ್ಶ್ (Adarsh), ತಾನು ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪರೀಕ್ಷೆ ಉತ್ತಮವಾಗಿ ಬರೆದಿಲ್ಲ, ಮತ್ತು ಅದರಲ್ಲಿ ಕಡಿಮೆ ಅಂಕ ಗಳಿಸುವ ಭಯದಿಂದ ಈ ಇಬ್ಬರೂ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕೋಟಾದಲ್ಲಿ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ: ತನಿಖೆಗೆ ವಿಶೇಷ ಸಮಿತಿ ರಚನೆಗೆ ಸಿಎಂ ಆದೇಶ
2 ತಿಂಗಳು ಟೆಸ್ಟ್ ನಡೆಸದಂತೆ ಆದೇಶ
ಇಬ್ಬರು ವಿದ್ಯಾರ್ಥಿಗಳ ಆತ್ಮಹತ್ಯೆ ಬೆನ್ನಲ್ಲೇ ಸುಮಾರು 2 ತಿಂಗಳುಗಳ ಕಾಲ ಯಾವುದೇ ಕ್ಲಾಸ್ ಟೆಸ್ಟ್ (Class test) ನಡೆಸದಂತೆ ಪರೀಕ್ಷಾ ತರಬೇತಿ ಕೇಂದ್ರಗಳಿಗೆ ಕೋಟಾ ಜಿಲ್ಲಾಧಿಕಾರಿ ಒಪಿ ಬಂಕರ್ (OP Shankar) ಆದೇಶಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳಿಗೆ ಕಡ್ಡಾಯ ರಜೆ ನೀಡಬೇಕು. ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಬೆಂಬಲ ನೀಡಬೇಕು ಎಂದು ಸೂಚಿಸಿದ್ದಾರೆ.
ಇತ್ತೀಚೆಗೆ ಆತ್ಮಹತ್ಯೆ ತಡೆಗೆ ಪಿಜಿ ಮತ್ತು ಹಾಸ್ಟಲ್‌ಗಳಲ್ಲಿ ಸ್ಟ್ರಿಂಗ್ ಫ್ಯಾನುಗಳು ಮತ್ತು ಆತ್ಮಹತ್ಯೆಗೆ ಯತ್ನಿಸಿದರೆ ಸೈರನ್ ಹೊಡೆಯುವ ಸಾಧನಗಳನ್ನು ಅಳವಡಿಸುವ ಕ್ರಮ ಕೈಗೊಳ್ಳಲಾಗಿತ್ತು. ವಿದ್ಯಾರ್ಥಿಗಳು ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸದಿರಲಿ ಎಂದು ಬಾಲ್ಕನಿಗಳಲ್ಲಿ ನೆಟ್‌ಗಳನ್ನು ಅಳವಡಿಸಲು ಸೂಚಿಸಲಾಗಿತ್ತು.
ಖಾಸಗಿ ಕೋಟಾ ವೈದ್ಯ ಶುಲ್ಕ 10% ದುಬಾರಿ, ಹಾಗಾದ್ರೆ ಈಗ ಫೀ ಎಷ್ಟು?