Asianet Suvarna News Asianet Suvarna News

ಒಂದೇ ಹುದ್ದೆಗೆ ಇಬ್ಬರು ಶಿಕ್ಷಣಾಧಿಕಾರಿಗಳ ಕಿತ್ತಾಟ, ನೀ ಕೊಡೆ- ನಾ ಬಿಡೆ ಎಂದು ಡಿಡಿಪಿಐಗಳ ಗಲಾಟೆ!

ವಿಜಯಪುರದಲ್ಲಿ ಖುರ್ಚಿಗಾಗಿ ಡಿಡಿಪಿಐಗಳ ಗಲಾಟೆ ನಡೆದಿದೆ. ಒಂದೇ ಹುದ್ದೆಗೆ ಇಬ್ಬರು ಜಿಲ್ಲಾ ಶಿಕ್ಷಣಾಧಿಕಾರಿಗಳು ಕಿತ್ತಾಡಿಕೊಂಡಿದ್ದಾರೆ.

Two district education officers are fight for DDPI post in Vijayapura kannada news  gow
Author
First Published Jun 8, 2023, 4:40 PM IST

ವಿಜಯಪುರ (ಜೂ.8): ವಿಜಯಪುರದಲ್ಲಿ ಖುರ್ಚಿಗಾಗಿ ಡಿಡಿಪಿಐಗಳ ಗಲಾಟೆ ನಡೆದಿದೆ. ಒಂದೇ ಹುದ್ದೆಗೆ ಇಬ್ಬರು ಜಿಲ್ಲಾ ಶಿಕ್ಷಣಾಧಿಕಾರಿಗಳು ಕಿತ್ತಾಡಿಕೊಂಡಿದ್ದಾರೆ. ಈಗಿರುವ ಡಿಡಿಪಿಐ ಉಮೇಶ ಶಿರಹಟ್ಟಿಮಠ ಹಾಗೂ ನೂತನವಾಗಿ ಬಂದ ಡಿಡಿಪಿಐ ಯುವರಾಜ್ ನಾಯಕ್ ನಡುವೆ ಖರ್ಚಿ ಗುದ್ದಾಟ ನಡೆದಿದೆ. ಇದೇ ತಿಂಗಳ 30 ರಂದು ಹಾಲಿ ಡಿಡಿಪಿಐ ಉಮೇಶ ಶಿರಹಟ್ಟಿಮಠ ಪದೋನ್ನತಿಯಾಗಿ ಬೆಂಗಳೂರಿನ ಜೆಡಿ ಕಛೇರಿಗೆ ಜೆಡಿ ಆಗಿದ್ದಾರೆ. ಹೀಗಾಗಿ ನೂತನವಾಗಿ ಡಿಡಿಪಿಐ ಆಗಿ ಪದೋನ್ನತಿ ಹೊಂದಿರುವ ಯುವರಾಜ ನಾಯಕ್ ತಮ್ಮ ಹುದ್ದೆ ಪಡೆಯಲು ಬಂದಿದ್ದರು. ಈ ವೇಳೆ ನಾ ಕೊಡೆ, ನೀ ಬಿಡೆ ಎಂದು ಇಬ್ಬರ ಮಧ್ಯೆ ಖುರ್ಚಿ ಗಲಾಟೆ ನಡೆದಿದೆ. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಕಂಡು ಬಂದು ಗೋಲಗುಂಬಜ್ ಪೊಲೀಸರು ಘಟನಾ ಪ್ರದೇಶಕ್ಕೆ ದೌಡಾಯಿಸಿದ್ದಾರೆ. ಡಿಡಿಪಿಐ ಕಛೇರಿಗೆ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ.

Chikkamagaluru: ಕಾಫಿನಾಡಲ್ಲಿ ಶಿಕ್ಷಕರ ಕೊರತೆ: ಶಾಲೆಗೆ ಮಕ್ಕಳನ್ನೇ ಕಳುಹಿಸದ ಪೋಷಕರು!

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಡಿಡಿಪಿಐಗೆ ಸ್ವಾಗತ:
ವಿಜಯಪುರ ಶಿಕ್ಷಣ ಇಲಾಖೆಯಲ್ಲಿ ಖುರ್ಚಿಗಾಗಿ ಕಿತ್ತಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಡಿಡಿಪಿಐಗೆ ಯುವರಾಜ್ ಗೆ ಸ್ವಾಗತಿಸಿ  ಪೋಸ್ಟರ್ ಹಾಕಲಾಗಿದೆ. ಬೆಂಬಲಿಗರೊಂದಿಗೆ ಡಿಡಿಪಿಐ ಕಚೇರಿಗೆ ಜಾಯಿನ್ ಆಗಲು ಬಂದ ಯುವರಾಜ್ ನಾಯಕ್ ಗೆ ಈಗ ಇರುವ ಡಿಡಿಪಿಐ ಉಮೇಶ ಶಿರಹಟ್ಟಿ ಮಠ ತನ್ನ ಖುರ್ಚಿ ಬಿಟ್ಟು ಕೊಟ್ಟಿಲ್ಲ. ಉಮೇಶ ಶಿರಹಟ್ಟಿಮಠಗೆ  ಜೆಡಿ ಆಗಿ ಮುಂಬಡ್ತಿ ಆಗಿದ್ದು ಜುಲೈ  1 ರಂದು  ಕೆಲಸಕ್ಕೆ ಹಾಜರಾಗಲು ಸರ್ಕಾರ ಸೂಚಿಸಿದೆ. ಹೀಗಾಗಿ ಪ್ರಸಕ್ತ ಜಾಗದಲ್ಲೇ ಜೂನ್ 30ರವರೆಗೆ ಮುಂದುವರೆಯುತ್ತೇನೆ ಎಂದು ಹಠ ಹಿಡಿದಿದ್ದಾರೆ.

ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ ಆಗಲಿದೆ: ಕೆಲವು ಪಾಠಗಳು ಮಾತ್ರ ಬೋಧಿಸಲು ಅನುಮತಿ

ಕೂಡ್ಲಿಗಿ ಬಿಇಓ ಯುವರಾಜ್ ನಾಯಕ ಅವರಿಗೆ ವಿಜಯಪುರ ಡಿಡಿಪಿಐ ಆಗಿ ಮುಂಬಡ್ತಿ ನೀಡಿ ಆದೇಶ ಹೊರಡಿಸಲಾಗಿದ್ದು,  ಹುದ್ದೆ ಖಾಲಿ‌ ಇರದ ಕಾರಣ ಈ ಗೊಂದಲ ಸೃಷ್ಟಿಯಾಗಿದೆ. ಖಾಲಿ ಇರದ ಹುದ್ದೆಗೆ ಪೋಸ್ಟಿಂಗ್ ನೀಡಿ ಸರ್ಕಾರ ಕಳುಹಿಸಿದ್ದೇ ಈ  ಗೊಂದಲ ಸೃಷ್ಟಿಗೆ ಕಾರಣವಾಗಿದೆ. ಹೀಗಾಗಿ ಬೆಂಬಲಿಗರೊಂದಿಗೆ ಅಧಿಕಾರ ಸ್ವೀಕಾರ ಮಾಡಲು ಬಂದಿದ್ದ ಯುವರಾಜ್ ನಾಯಕ್‌ಗೆ ಶಾಕ್ ಆಗಿದೆ. ಇಬ್ಬರು ಅಧಿಕಾರಿಗಳ ಮಧ್ಯ ಗೊಂದಲ ಸೃಷ್ಟಿ ಹಿನ್ನೆಲೆ, ಡಿಡಿಪಿಐ ಕಚೇರಿಯಲ್ಲಿ ಕೂಡ ಯಾರು ಡಿಡಿಪಿಐ ಎನ್ನುವ ಗೊಂದಲ ಜನ ಸಾಮಾನ್ಯರಿಗೆ ಕೂಡ ಆಯ್ತು.

ಗೊಂದಲ ಗಲಾಟೆ ಬಳಿಕ ಹೊಸ ಡಿಡಿಪಿಐ ಯುವರಾಜ್ ನಾಯಕ್ ವಾಪಸ್ ತೆರಳಿದರು. ಹಿಂದಿನ ಡಿಡಿಪಿಐ ನಿರ್ಧಾರವು  ಸರಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕು ಎಂದು ನೂತನ ಡಿಡಿಪಿಐ ಯುವರಾಜ ನಾಯಕ್ ಮತ್ತು ಬೆಂಬಲಿಗರು ತೆರಳಿದರು.

Follow Us:
Download App:
  • android
  • ios