ಕಾಲೇಜು ಪ್ರಾರಂಭ ಬಗ್ಗೆ ಇದ್ದ ಎಲ್ಲಾ ಗೊಂದಲಗಳಿಗೆ ತೆರೆ..!

ಕೊರೋನಾ ಭೀತಿಯಿಂದ ಇಷ್ಟು ದಿನ ಸ್ಥಗಿತಗೊಂಡಿದ್ದ ಕಾಲೇಜು ಶೈಕ್ಷಣಿಕ ಚಟುವಟಿಕೆಗಳು ಹಂತ-ಹಂತವಾಗಿ ಆರಂಭಗೊಂಡಿವೆ. ಇನ್ನು ಇದರ ಮಧ್ಯೆ ಇದ್ದ ಗೊಂದಲಗಳಿಗೆ ತುಮಕೂರು ವಿವಿ ಸ್ಪಷ್ಟನೆ ಕೊಟ್ಟಿದೆ.

Tumakuru University VC Clarifications about College Start On Nov 17th rbj

ತುಮಕೂರು, (ನ.16): 2020-21 ನೇ ಶೈಕ್ಷಣಿಕ ಸಾಲಿನ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ತರಗತಿಗಳನ್ನು ನವೆಂಬರ್ 17 ರಿಂದ ಆನ್ ಲೈನ್ /ಆಫ್ ಲೈನ್ ಮೂಲಕ ಪುನಾರಂಭಿಸಲು ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದ್ದು, ಸುತೋಲೆಯಂತೆ ನಾಳೆಯಿಂದ (ಮಂಗಳವಾರ) ಕಾಲೇಜು ಆರಂಭವಾಗಲಿದೆ.

ಪದವಿ ಕಾಲೇಜು ಪುನರ್ ಆರಂಭದ ಬಗ್ಗೆ ಸರ್ಕಾರ ದಿಢೀರನೆ ನಿರ್ಧಾರ ತೆಗೆದುಕೊಂಡಿದೆ. ಸರ್ಕಾರ ಅಪಾಯಕಾರಿ ನಿರ್ಧಾರ ತೆಗೆದುಕೊಂಡಿದೆ ಎಂದು ತುಮಕೂರು ಖಾಸಗಿ ಶಿಕ್ಷಣ ಮಂಡಳಿ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಸುದ್ದಿಯನ್ನು ನಿಮ್ಮ ಸುವರ್ಣ ನ್ಯೂಸ್ ಬಿತ್ತರಿಸಿತ್ತು.

ಇದನ್ನು ನೋಡಿದ ತುಮಕೂರು ವಿಶ್ವವಿದ್ಯಾಲದ ಉಪಕುಲಪತಿ ಡಾ. ಸಿದ್ದೇಗೌಡ ಅವರು ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದು, ಸುವರ್ಣ ನ್ಯೂಸ್ ನಲ್ಲಿ ಸುದ್ದಿ ಪ್ರಚಾರವಾಗಿದ್ದನ್ನು ನೋಡಿದ್ದು, ಖಾಸಗಿ ಕಾಲೇಜಿನವರು ಹೇಳಿರುವುದು ಸುಳ್ಳು.‌ ಯಾವುದೇ ಖಾಸಗಿ ಕಾಲೇಜುಗಳಿಂದ ಆಕ್ಷೇಪಣೆ ಬಂದಿಲ್ಲ. ವಿವಿ ವ್ಯಾಪ್ತಿಯ ಮಕ್ಕಳಿಗೆ ಪೋಷಕರಿಗೆ ಯಾವುದೇ ಗೊಂದಲಗಳಿಲ್ಲ. ಗೊಂದಲಗಿಳಿದ್ದರೆ ತಕ್ಷಣವೇ ಬಗೆ ಹರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

'ಗಮನಿಸಿ : ನಾಳೆ ಕಾಲೇಜುಗಳನ್ನು ಓಪನ್ ಮಾಡಲ್ಲ'

ಸರ್ಕಾರದ ಎಲ್ಲಾ ಸುತ್ತೋಲೆಗಳನ್ನು ಜಿಲ್ಲೆಯ ಎಲ್ಲಾ ಪ್ರಾಂಶುಪಾಲರಿಗೆ ತಲುಪಿಸಿದ್ದೇವೆ.  9ನೇ ತಾರೀಕಿನಿಂದ  13 ನೇ ತಾರೀಕಿನವರೆಗೂ 6 ರಿಂದ 7 ಸುತ್ತೋಲೆಗಳನ್ನು ನೀಡಿದ್ದು, ಏನೇನು ಕ್ರಮ ಕೈಗೊಳ್ಳಬೇಕೆಂದು ಮಾಹಿತಿ ನೀಡಿದ್ದೇವೆ ಎಂದು ವಿವರಿಸಿದರು. 

ಖಾಸಗಿ ಕಾಲೇಜುಗಳು, ವಿವಿ, ಪ್ರಾಂಶುಪಾಲರು, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕೈಗೊಳ್ಳಬೇಕಾದ ಕ್ರಮಗಳನ್ನು ಕುಲಂಕಷವಾಗಿ ತಿಳಿಸಲಾಗಿದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios